ಮುಳ್ಳೇರಿಯ: ರಾಜ್ಯದ ವಿವಿಧ ವಿಶ್ವವಿದ್ಯಾಲಯದ ವಿದ್ಯಾಥರ್ಿಗಳು, ಭೂ ಸಂಶೋಧಕರು, ಶಿಕ್ಷಕರು ಮತ್ತು ಭಾರತೀಯ ಭೂ ವಿಜ್ಞಾನ ಸಮೀಕ್ಷೆ (ಜೀಯೋಲಜಿಕಲ್ ಸವರ್ೇ ಓಫ್ ಇಂಡಿಯಾ)ವಿಭಾಗದ ವಿಜ್ಞಾನಿಗಳು ತಮ್ಮ ಭೂ ಸಂಶೋಧನೆಯ ಅನುಭವಗಳನ್ನು ಮತ್ತು ಹೊಸ ಆವಿಷ್ಕಾರ, ಸಂಶೋಧನೆಗಳನ್ನು ಭೂ ವಿಜ್ಞಾನದ ವಿದ್ಯಾಥರ್ಿಗಳಿಗೆ ತಮ್ಮ ಕಲಿಕೆಗೆ ನೆರವಾಗಲು ಭಾರತೀಯ ಭೂ ವಿಜ್ಞಾನ ಸಮೀಕ್ಷೆಯ ವತಿಯಿಂದ ನಡೆದ ಪ್ರಥಮ ಕಾಯರ್ಾಗಾರ ಪೆರಿಯದ ಕೇರಳ ಕೇಂದ್ರ ವಿಶ್ವವಿದ್ಯಾಲಯದ ಜಿಯಾಲಜಿ ವಿಭಾಗದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಕೇರಳ ಕೇಂದ್ರ ವಿಶ್ವವಿದ್ಯಾಲಯದ ಉಪ ಕುಲಾಧಿಪತಿ ಪ್ರೊ. ಜಿ ಗೋಪಕುಮಾರ್ ಉದ್ಘಾಟಿಸಿದರು. ಎರಡು ದಿನಗಳ ಕಾಲ ನಡೆದ ಕಾಯರ್ಾಗಾರ ಭೂ ವಿಜ್ಞಾನಿಗಳು ಮತ್ತು ವಿದ್ಯಾಥರ್ಿಗಳ ಸಂವಾದದ ವೇದಿಕೆಯಾಯಿತು. ಅಪ್ಲಿಕೇಶನ್ ಆಪ್ ಗ್ರಾನುಲೋಮೆಟ್ರಿಕ್ ಸ್ಟಡಿಸ್ ಇನ್ ಸೆಡಿಮೆಂಟೊಲೊಜಿ ಎಂಬ ವಿಷಯದಲ್ಲಿ ನಡೆದ ಕಾಯರ್ಾಗಾರವನ್ನು ಭಾರತೀಯ ಭೂ ವಿಜ್ಞಾನ ಸಮೀಕ್ಷೆ ಮತ್ತು ಸಮುದ್ರ ಮತ್ತು ಕರಾವಳಿ ಸಮೀಕ್ಷೆ (ಜೀಯೋಲಜಿಕಲ್ ಸವರ್ೇ ಓಫ್ ಇಂಡಿಯಾ ಮೆರೈನ್ ಆಂಡ್ ಕೋಸ್ಟಲ್ ಸವರ್ೇ) ವಿಭಾಗದ ಮುಖ್ಯಸ್ಥರು ಮತ್ತು ಉಪನಿದರ್ೇಶಕ ಡಿ.ಕೆ. ಶಹಾ ಮುಖ್ಯ ಭಾಷಣ ಮಾಡಿದರು. ಜಿಎಸ್ಐ ನಿದರ್ೇಶಕ ಎ.ಸಿ ದಿನೇಶ್ ಅವರು ಅವಿಸ್ಕರಿಸಿದ ಜಿ-ಸ್ಟಾಟ್ ತಂತ್ರಾಂಶವನ್ನು ವಿದ್ಯಾಥರ್ಿಗಳಿಗೆ ವಿತರಿಸಿದರು. ಹಿರಿಯ ಭೂ ವಿಜ್ಞಾನಿಗಳಾದ ನಿಶಾ ಯಾನ್.ವಿ, ಡಾ. ಶಾಜು ವಗರ್ಿಸ್ ಕಾಯರ್ಾಗಾರಕ್ಕೆ ನೇತೃತ್ವ ವಹಿಸಿದ್ದರು.
ಭೂ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸಂದೀಪ್ .ಕೆ. ಮತ್ತು ಡಾ.ಪ್ರತೀಶ್ ಪಿ. ಶುಭಾಶಂಸನೆಗೈಯ್ದರು. ಸಮಾರೋಪ ಸಮಾರಂಭದಲ್ಲಿ ಜಿಎಸ್ಐ ಮಂಗಳೂರು ವಿಭಾಗದ ಉಪನಿದರ್ೇಶಕ ಯನ್.ಮಾರನ್ ವಿದ್ಯಾಥರ್ಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿದರು. ಕೇರಳ ಕೇಂದ್ರ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಥರ್್ ಸೈನ್ಸ್ ಸಿಸ್ಟಂ ವಿಭಾಗದ ಮುಖ್ಯಾಧಿಕಾರಿ ಪ್ರೊ.ಮುತ್ತುಕುಮಾರ್ಮುತ್ತು ಚಾಮಿ ಸ್ವಾಗತಿಸಿ, ಡಾ.ಸಿಜಿನ್ ಕುಮಾರ್ ಎ.ವಿ. ವಂದಿಸಿದರು.


