HEALTH TIPS

ಕಲೋತ್ಸವ ವೇದಿಕೆಯಲ್ಲಿ ಹೊಸ ದಾಖಲೆ ನಿಮರ್ಿಸಿದ ಸಾರಂಗ್ ನಿದರ್ೇಶನದ "ಇರುಟ್ಟಿಂಡೆ ಕಳಿ"

               
        ಮಂಜೇಶ್ವರ: ಎಸೆ ಟಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದ ನಾಟಕ ಸ್ಪಧರ್ೆಯಲ್ಲಿ ಸತತವಾಗಿ 4ನೇ ಬಾರಿಗೆ ಅತ್ಯದ್ಭುತವಾಗಿ ರಚನೆಯೊಂದಿಗೆ ನಿದರ್ೇಶನ ನೀಡಿ ಈ ವರ್ಷವೂ ಪ್ರಥಮ ಸ್ಥಾನ ದೊಂದಿಗೆ ಕಿರೀಟವನ್ನು ತನ್ನದಾಗಿಸಿ ಕೊಂಡ ರಂಗಕಮರ್ಿ, ಪೆರ್ಲ ಸ.ನಾ.ಶಾಲಾಶಿಕ್ಷಕ ಉದಯ ಸಾರಂಗ್ ಅವರ ನಿದರ್ೇಶನದ ಮಲೆಯಾಳ ನಾಟಕ ಇರುಟ್ಟಿಂಡೆ ಕಳಿ(ಕತ್ತಲೆಯ ಆಟ) ಹೊಸ ದಾಖಲೆ ನಿಮರ್ಿಸಿತು.
   ಎಸ್ .ಎ. ಟಿ ಶಾಲಾ ಮಕ್ಕಳು ಅಭಿನಯಿಸಿದ "ಇರುಟ್ಟಿಂಡೆ ಕಲಿ" ನಾಟಕದ ಮೂಲಕ ಸುಮಾರು 7 ತಂಡಗಳ ಜೊತೆ ಸ್ಪಧರ್ೆಯಲ್ಲಿ ವಿಶಿಷ್ಟ ಹೊಸ ತಂತ್ರವನ್ನು ಉಪಯೋಗಿಸಿ ಈ ಅಭೂತಪೂರ್ವ ಯಶಸ್ಸು ದಾಖಲಾಯಿತು. ಪ್ರಸ್ತುತ ರಾಜ್ಯದ ಪ್ರಳಯ ದುರಂತ, ಹಸಿವಿಗಾಗಿ ಪರದಾಡುವ ಬಡ ಹೃದಯದ ವೇದನೆ, ಅನಿರೀಕ್ಷಿತ ಅನಾಚಾರ-ಅನ್ಯಾಯ,ನೋವು,ವಿದ್ಯೆಯೊಂದಿಗೆ ಬುದ್ಧಿ ಕೌಶಲ್ಯಕ್ಕೆ ಮನುಷ್ಯ ಮಂಗನಾಟಗಳ ಯೋಗ್ಯ ವಿಚಾರಗಳ ಯುಕ್ತಿ ಶಕ್ತಿಗಳ ಚಿಂತನ ಮಂಥನದೊಂದಿಗೆ ಪ್ರೇಕ್ಷಕರ ಕುತೂಹಲಕ್ಕೆ ಚಪ್ಪಾಳೆಯ ಕರ ತಾಡವವೇ ಸಾಕ್ಷಿಯಾಗಿ ನೂತನ ರಂಗತಂತ್ರ ಪ್ರದರ್ಶನ ಪ್ರಥಮ ಸ್ಥಾನ ದೊಂದಿಗೆ ಪ್ರಥಮ ಗ್ರೇಡ್ ಪಡೆದುಕೊಂಡಿತು.
    ವಿದ್ಯಾಥರ್ಿಗಳ ಅಭಿನಯಕ್ಕೆ,ರಂಗಪರಿಕರ ವೇದಿಕೆಯ ಅತ್ಯದ್ಭುತ ವಿನ್ಯಾಸ,ಸಂಭಾಷಣೆಯ ಪಕ್ವತೆ ಆಲಿಸಿ,ವೀಕ್ಷಿಸಿದ ಪ್ರೇಕ್ಷಕರು ಮೂಕವಿಸ್ಮಯರಾದುದು ಸುಳ್ಳಲ್ಲ. ರಂಗಭೂಮಿಯಲ್ಲೊಂದು ಹೊಸ ತಂತ್ರದ ನಿದರ್ೇಶನ ಮಾಡುವವರ ಸಾಲಿನಲ್ಲಿ ಗಮನಾರ್ಹರಾದ ಯುವ ನಿದರ್ೇಶಕ ಉದಯ ಸಾರಂಗ್ ತಮ್ಮ ತಂಡದಲ್ಲಿ ಅನೇಕ ಸಾಧಕರ ಜೊತೆಗೂಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.ಇವರೊಂದಿಗೆ ಕೋರಿಯೋಗ್ರಫಿ ಹಾಗೂ ವಣರ್ಾಲಂಕಾರದಲ್ಲಿ ವಿನು ಬೋವಿಕ್ಕಾನ, ಶಶಿ ಕುಳೂರು,ರಂಗ ಸಜ್ಜಿಕೆಯಲ್ಲಿ ಎನ್.ಕೆ.ಕುಲಾಲ್ ಬೇಕೂರು, ಪದ್ಮರಾಜ್, ರಂಗ ಪರಿಕರಗಳಲ್ಲಿ ಎಸ್ ಎ ಟಿ ಶಾಲಾಚಿತ್ರಕಲಾ ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಬೇಳ, ಉದಯ ಕಿಳಿಂಗಾರ್ ಹಾಗೂ ನಿಮರ್ಾಣದಲ್ಲಿ ನಾಗೇಶ್ ಮಾಸ್ತರ್, ಮಹೇಶ್ ಕೆ.ವಿ ಸಹಿತ ಶಾಲಾ ಶಿಕ್ಷಕರು ಸಹಕರಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries