ಪೆರ್ಲ: ಹಿರಿಯ ವಿದ್ವಾಂಸ, ಕವಿ, ಲೇಖಕ, ಸಮಾಜ ಸೇವೆಯಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡು ಶೈಕ್ಷಣಿಕ ಕ್ಷೇತ್ರಕ್ಕೆ ಅನಂತ ಕೊಡುಗೆಯನ್ನು ನೀಡಿ ಇತ್ತಿಚೆಗೆ ನಿಧನರಾದ ಮಾ.ಭ ಪೆರ್ಲರಿಗೆ ಪೆರ್ಲದಕವಿ ಹೃದಯದಸವಿಮಿತ್ರರು ವೇದಿಕೆ ನೇತೃತ್ವದಲ್ಲಿ ಪೆರ್ಲ ಸ್ವಸ್ತಿ ಸ್ಟುಡಿಯೋದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಸಾಹಿತಿ ಡಾ.ಎಸ್.ಎನ್.ಭಟ್ ಪೆರ್ಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಜ್ಜನ ಸರಳ ವ್ಯಕ್ತಿತ್ವದ
ಮಾ .ಭ ಅವರು ಸಮಾಜ, ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸೇವೆ ಅನನ್ಯ. ಅವರ ಬದುಕು ಬರಹಗಳ ತೌಲನಿಕ ಒಳನೋಟಗಳು ದೇಶ,ಭಾಷೆ, ಸಂಸ್ಕೃತಿ ಹಾಗೂ ಬದುಕಿನ ಚಿಕಿತ್ಸಕತನದೊಂದಿಗೆ ಆಧುನಿಕ ವೇದ ಸಮಾನವಾದವು ಎಂದು ತಿಳಿಸಿದರು.
ಹಿರಿಯ ಸಾಹಿತಿ ಹರೀಶ್ ಪೆರ್ಲ ಮಾ.ಭ, ಅವರ ಬದುಕು-ಬರಹ ಹಾಗೂ ಒಡನಾಡಗಳ ಬಗ್ಗೆ ನುಡಿನಮನ ಸಲ್ಲಿಸಿದರು. ಶೇಣಿ ಶಾರದಾಂಬ ಹೈಸ್ಕೂಲ್ನ ಅಧ್ಯಾಪಕ ಶ್ರೀಧರ್ ನಾಯಕ್ ಮಾತನಾಡಿ, ಪ್ರೇರಣದಾಯಿಯಾದ ಮಾ.ಭ.ಪೆರ್ಲ ಅವರ ಕಾದಂಬರಿಗಳನ್ನು ಶಾಲಾ ಪಠ್ಯವಾಗಿ ಅಳವಡಿಸಿಕೊಳ್ಳುವ ಅಗತ್ಯ ಇದೆ. ಬದುಕಿನ ನೈಜನೆ, ತೋಳಲಾಟಗಳಿಂದ ಪಾರಾಗುವ ಗಟ್ಟಿತನ, ಸಮಾಜ, ರಾಷ್ಟ್ರ ಮೊದಲಾದ ಬಹುಮುಖೀ ಚಿಂತನೆಗಳು ಎಂದಿಗೂ ಯಶಸ್ವೀ ಬದುಕಿನ ದಿಕ್ಸೂಚಿಗಳು ಎಂದು ಅವರು ವಿಸ್ಲೇಶಿಸಿದರು.
ಸಮಾರಂಭದಲ್ಲಿ ಸುಕುಮಾರ ಬೆಟ್ಟಂಪಾಡಿ,ಪತ್ರಕರ್ತ ಜಯ ಮಣಿಯಂಪಾರೆ,ಮಣಿರಾಜ್ ಜೋಗಿ ವಾಂತಿಚ್ಚಾಲು ಉಪಸ್ಥಿತಿದ್ದರು.ಸುಭಾಷ್ ಪೆರ್ಲ ಸ್ವಾಗತಿಸಿ, ಆನಂದ ರೈ ಅಡ್ಕಸ್ಥಳ ವಂದಿಸಿದರು.





