ಬದಿಯಡ್ಕ: ಆಧುನಿಕ ಕಾಲಘಟ್ಟದಲ್ಲಿ ಜನರು ದೇವತಾಶಕ್ತಿಗಳಲ್ಲಿ ಹೆಚ್ಚಿನ ನಂಬಿಕೆಯುಳ್ಳವರಾಗಿದ್ದು, ಆಚಾರ ಅನುಷ್ಠಾನಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಪರಂಪರಾಗತವಾಗಿ ಬಂದಂತಹ ಆಚಾರಗಳಲ್ಲಿ ಮುಂದಿನ ಪೀಳಿಗೆಯು ತೊಡಗಿಸಿಕೊಳ್ಳಬೇಕು. ನಾಡಿನಲ್ಲಿ ಧರ್ಮ ನೆಲೆನಿಲ್ಲಬೇಕಾದರೆ ಧರ್ಮವನ್ನು ನಾವು ರಕ್ಷಣೆ ಮಾಡಬೇಕು ಎಂದು ಉತ್ತರ ಮಲಬಾರ್ ತೀಯ ಸಮುದಾಯದ ಕ್ಷೇತ್ರ ಸಂರಕ್ಷಣಾ ಸಮಿತಿ ಕಾಸರಗೋಡು ಇದರ ಅಧ್ಯಕ್ಷರಾದ ರಾಮಮಾಸ್ತರ್ ಇಕ್ಕೇರಿ ಹೇಳಿದರು.
ಅವರು ಬುಧವಾರ ಮಾವಿನಕಟ್ಟೆ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮೀ ಭಜನಾ ಮಂದಿರದ 37ನೇ ವಾಷರ್ಿಕೋತ್ಸವದ ಸಭಾಕಾರ್ಯಕ್ರಮದಲ್ಲಿ ಧಾಮರ್ಿಕ ಭಾಷಣಗೈದು ಮಾತನಾಡಿದರು.
ಯಾವುದೇ ಧರ್ಮದ ವ್ಯಕ್ತಿಯಾಗಲಿ ಆತ ತನ್ನ ಧರ್ಮವನ್ನು ಪಾಲಿಸಿಕೊಂಡು ಬರಬೇಕು. ಅದುವೇ ನಮಗೆ ರಕ್ಷಣೆಯಾಗಿದೆ. ತಾನು ಯಾವ ಕೆಲಸ ಮಾಡುತ್ತೇನೆ ಎಂಬುದು ಮುಖ್ಯವಲ್ಲ, ಆ ಕೆಲಸದ ಬಗ್ಗೆ ಕೀಳರಿಮೆ ಇರಬಾರದು. ಸನ್ಮಾರ್ಗದಲ್ಲಿ ನಡೆದು ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿಯನ್ನು ನಾವು ಪಡೆಯಬೇಕು ಎಂದರು. ಇದೇ ವೇಳೆ ಶಬರಿಮಲೆಯ ವಿಚಾರದಲ್ಲಿ ಮಾತನಾಡುತ್ತಾ ಶಬರಿಗಿರಿಯ ಇತಿಹಾಸವನ್ನು ಪ್ರಸ್ತುತಪಡಿಸುತ್ತಾ ಭಸ್ಮವು ಅನೇಕ ರೋಗಗಳಿಗೆ ದಿವ್ಯೌಷಧವಾಗಿದೆ ಎಂದರು.
ಮಂದಿರದ ಸೇವಾ ಸಮಿತಿ ಅಧ್ಯಕ್ಷರಾದ ದಿವಾಕರ ಮಾವಿನ ಕಟ್ಟೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ಪಿಲಾಂಕಟ್ಟೆ ಶಾಲೆಯ ಅಧ್ಯಾಪಕ ನಿರ್ಮಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ಯಕ್ಷಗಾನ ಬಾಲ ಕಲಾವಿದ ರಾಜ್ಯ ಶಾಲಾ ಕಲೋತ್ಸವ ಸ್ಪಧರ್ಾ ವಿಜೇತ ದತ್ತೇಶ್ ಮಾವಿನಕಟ್ಟೆ, ಶಾಲಾ ದೇಶೀಯ ತ್ರೋಬಾಲ್ ವಿಜೇತೆ ಕು.ವಿದ್ಯಾಲಕ್ಷ್ಮೀಯವರನ್ನು ಅಭಿನಂದಿಸಲಾಯಿತು. ಹಿರಿಯ ವೈದಿಕರಾದ ಕೃಷ್ಣ ಚಡಗ ಪಳ್ಳತಮೂಲೆ, ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ಸಂಜೀವ ಕುರುಪ್ ಚಾವಡಿಗದ್ದೆ, ಶ್ರೀ ಮಂದಿರ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಎನ್.ಕೆ.ಕೃಷ್ಣನ್ ಮಾವಿನಕಟ್ಟೆ ಅವರಿಗೆ ಕೃತಜ್ಞತಾ ಸಮರ್ಪಣೆ ಮಾಡಲಾಯಿತು. ಶ್ರೀ ಮಂದಿರ ಸೇವಾಸಮಿತಿಯ ಪ್ರ.ಕಾರ್ಯದಶರ್ಿ ಲೋಕೇಶ್ ಕೋಳಾರಿ ಸ್ವಾಗತಿಸಿ, ಕೋಶಾಧಿಕಾರಿ ಗಂಗಾಧರ ನಡುಮೂಲೆ ವಂದಿಸಿದರು. ವಿಶ್ವನಾಥ ಬಳ್ಳಪದವು ಕಾರ್ಯಕ್ರಮ ನಿರೂಪಿಸಿದರು. ಶಶಿಧರ ತೆಕ್ಕೆಮೂಲೆ, ದಾಮೋದರ ಮೈಲ್ತೊಟ್ಟಿ, ಬಾಲಕೃಷ್ಣ ಕೋಳಾರಿ, ಮಹಾಲಿಂಗ ನಾಯ್ಕ ಪಿಲಿಕೂಡ್ಲು, ಡಾ. ಗಣರಾಜ ಭಟ್, ಭಾಸ್ಕರ ಗುರುಸ್ವಾಮಿ ಮತ್ತಿತರು ಉಪಸ್ಥಿತರಿದ್ದರು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ದಾಸ ಸಂಕೀರ್ತನೆ ಬಳಗ ಬದಿಯಡ್ಕ ಇವರಿಂದ ಭಜೆನೆ, ಸಂಜೆ ಮನುಪಣಿಕ್ಕರ್ ಮತ್ತು ಬಳಗ ಶ್ರೀಶೈಲಂ ನಾರಂಪಾಡಿ ಇವರಿಂದ ತಾಯಂಬಕ ನಡೆಯಿತು. ರಾತ್ರಿ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಿಂದ ತತ್ವಮಸಿ ಸಿಂಗಾರಿ ಮೇಳದೊಂದಿಗೆ ಉಲ್ಪೆ ಮೆರವಣಿಗೆ ಆಗಮಿಸಿತು. ಶ್ರೀ ಗೋಪಾಲಕೃಷ್ಣ ಭಜನಾ ಸಂಘ ನೆಕ್ರಾಜೆ ಇವರಿಂದ ಭಜನೆ, ರಾತ್ರೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು.




