HEALTH TIPS

ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಬೇಕಲದಲ್ಲಿ ಡಿ.21 ರಿಂದ ಆರಂಭ

             
       ಕಾಸರಗೋಡು: ಮೂರು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಬೇಕಲದ ಪಳ್ಳಿಕೆರೆ ಸಮುದ್ರ ಕಿನಾರೆ ಬಳಿ ಡಿ.21 ರಿಂದ ಆರಂಭವಾಗಲಿದೆ. ಬೇಕಲ ಕೋಟೆ ಲಯನ್ಸ್ ಕ್ಲಬ್ ಆಯೋಜಿಸುವ ಮಲಬಾರ್ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಮೂರನೇ ಆವೃತ್ತಿಯು ಈ ಬಾರಿ ನಡೆಯಲಿದ್ದು, ಕಾಸರಗೋಡು ಪ್ರೆಸ್ ಕ್ಲಬ್ನಲ್ಲಿ ಬುಧವಾರ ಉತ್ಸವದ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.
     ಉದ್ಯಮಿ ರಂಜಿತ್ ಜಗನ್ ಶಾಸಕ ಎನ್.ಎ.ನೆಲ್ಲಿಕುನ್ನು ಅವರಿಗೆ ಲಾಂಛನವನ್ನು ಹಸ್ತಾಂತರಿಸುವ ಮೂಲಕ ಅನಾವರಣಗೊಳಿಸಿದರು. ರಾಜ್ಯದ ಪ್ರವಾಸಿ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಗಾಳಿಪಟ ಉತ್ಸವವು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಸರಕಾರ ಮತ್ತು ಸ್ಥಳೀಯಾಡಳಿತಗಳಿಂದ ಯಾವುದೇ ಧನಸಹಾಯವಿಲ್ಲದೆ ಆಯೋಜಿಸಲ್ಪಡುತ್ತಿರುವ ಗಾಳಿಪಟ ಉತ್ಸವವು ಯಶಸ್ವಿಯಾಗಲಿ ಎಂದು ಶಾಸಕರು ಹಾರೈಸಿದರು. ಜನ ಸಹಕಾರದ ಮೂಲಕ ಮುನ್ನಡೆಯುತ್ತಿರುವ ಗಾಳಿಪಟ ಉತ್ಸವವು ನಾಡಿನ ಸಾಂಸ್ಕೃತಿಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಸುಕುಮಾರನ್ ಪೂಚ್ಚಕ್ಕಾಡ್ ಹೇಳಿದರು. ಗಾಳಿಪಟ ಉತ್ಸವದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಬಹುದು, ವಿವಿಧ ವಯೋಮಾನದ ಜನ ಸಾಮಾನ್ಯರಿಗೂ ಗಾಳಿಪಟ ಸ್ಪಧರ್ೆಯಲ್ಲಿ ಭಾಗವಹಿಸಬಹುದಾಗಿದ್ದು, ಕೈಟ್ ಕ್ರಾಫ್ಟ್(ಗಾಳಿಪಟ ತಯಾರಿ) ಕಾಯರ್ಾಗಾರದಲ್ಲೂ ಭಾಗವಹಿಸಬಹುದೆಂದು ಆಯೋಜನಕರು ತಿಳಿಸಿದ್ದಾರೆ. ಮಲೇಷ್ಯಾ, ಸಿಂಗಾಪುರ್, ವಿಯೆಟ್ನಾಂ ದೇಶಗಳಿಂದ ಗಾಳಿಪಟ ಸ್ಪಧರ್ಿಗಳು ಆಗಮಿಸಲಿದ್ದಾರೆ, ಗುಜರಾತ್ ಮಹಾರಾಷ್ಟ್ರ ಸಹಿತ ವಿವಿಧ ರಾಜ್ಯಗಳಿಂದ ಗಾಳಿಪಟ ಹಾರಾಟ ತಂಡಗಳು ಆಗಮಿಸಲಿವೆ, ರಾಜ್ಯದ ಸಾಂಸ್ಕೃತಿಕ ಕಲೆಗಳಾದ ಒಪ್ಪನ, ಕಥಕ್ಕಳಿ, ಗಾನಮೇಳ ಮೊದಲಾದವುಗಳ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದರು. ಲಯನ್ಸ್ ಕ್ಲಬ್ ಸದಸ್ಯರಾದ ಎಂ.ಬಿ ಹನೀಫ್, ಪಿ.ಎಂ.ನಾಸರ್, ಪ್ರಕಾಶನ್ ಮಾಸ್ಟರ್, ಶೌಕತ್ ಆಲಿ, ಅಶ್ರಫ್ ಕೊಳವಯಲ್, ಮುನೀರ್ ಮೊದಲಾದವರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries