ಕಾಸರಗೋಡು ವೈದ್ಯಕೀಯ ಕಾಲೇಜಿನ ಅಕಾಡೆಮಿಕ್ ಬ್ಲಾಕ್ ಉದ್ಘಾಟನೆಗೆ ಸಿದ್ದ
ವೈದ್ಯ ಆಸ್ಪತ್ರೆ ಸಮುಚ್ಚಯದ ನಿಮರ್ಾಣಕ್ಕೆ ಶಿಲಾನ್ಯಾಸ
ಬದಿಯಡ್ಕ: ಉಕ್ಕಿನಡ್ಕದಲ್ಲಿ ನಿಮರ್ಾಣಗೊಂಡಿರುವ ವೈದ್ಯಕೀಯ ಕಾಲೇಜಿನ ಆಡಳಿತ ಸೌಧದ ನಿಮರ್ಾಣ ಕಾರ್ಯ ಪೂರ್ಣಗೊಂಡಿದೆ. ನ. 25 ರಂದು ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಸ್ಪತ್ರೆ ಕಟ್ಟಡ ಸಮುಚ್ಚಯ ನಿಮರ್ಾಣ ಕಾರ್ಯಕ್ಕೆ ಚಾಲನೆ ನೀಡಲಿದ್ದು, ಶಿಲಾನ್ಯಾಸ ನೆರವೇರಿಸಲಿದ್ದಾರೆ.
500 ಹಾಸಿಗೆಗಳುಳ್ಳ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿಮರ್ಾಣ ಹೊಂದಲಿದ್ದು, 95 ಕೋಟಿ ರೂ. ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿದೆ. ನಾಲ್ಕು ಅಂತಸ್ತಿನ ಕಟ್ಟಡ ನಿಮರ್ಾಣಕ್ಕೆ ಹಸಿರು ನಿಶಾನೆ ತೋರಿರುವ ಎಡರಂಗ ಸರಕಾರ, ಆಸ್ಪತ್ರೆ ನಿಮರ್ಾಣಕ್ಕೆ ಅಗತ್ಯವಿರುವ ಹಣವನ್ನು ಮೀಸಲಿರಿಸಿದೆ. ಸಾರ್ವಜನಿಕ ನಿಮರ್ಾಣ ಸಂಸ್ಥೆ ಕಿಟ್ಕೋ ವೈದ್ಯಕೀಯ ಕಾಲೇಜು ಕಟ್ಟಡ ನಿಮರ್ಾಣದ ರೂಪುರೇಖೆ ಸಿದ್ದಪಡಿಸಿದ್ದು, ತಮಿಳುನಾಡು ಮೂಲದ ಆರ್.ಆರ್. ತುಳಸಿ ಬಿಲ್ಡರ್ಸ್ ಸಂಸ್ಥೆ ನಿಮರ್ಾಣ ಕಾರ್ಯವನ್ನು ಮುನ್ನಡೆಸಲಿದೆ. ಎರಡು ವರ್ಷದೊಳಗೆ ವೈದ್ಯಕೀಯ ಆಸ್ಪತ್ರೆ ಕಟ್ಟಡ ನಿಮಾಣ ಕಾರ್ಯ ಪೂರ್ಣಗೊಳಿಸಬೇಕೆಂದು ಗುತ್ತಿಗೆಯಲ್ಲಿ ತಿಳಿಸಲಾಗಿದೆ. ಆಸ್ಪತ್ರೆ ಸಮುಚ್ಚಯದಲ್ಲಿ ಪ್ರತ್ಯೇಕ ಅಪರೇಶನ್ ಥಿಯೇಟರ್ ಇರಲಿದ್ದು, ಆಧುನಿಕ ವೈದ್ಯಕೀಯ ಸೌಲಭ್ಯಗಳಾದ ಸಿಟಿ ಸ್ಕ್ಯಾನ್. ಎಕ್ಸ್ರೇ ಸಹಿತ ವಿವಿಧ ವಿಭಾಗಗಳನ್ನು ಆಸ್ಪತ್ರೆ ಹೊಂದಲಿದೆ.
25 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಅಕಾಡೆಮಿಕ್ ಬ್ಲಾಕ್ ಕಟ್ಟಡ ನಿಮರ್ಾಣವಾಗಿದ್ದು, ವೈದ್ಯಕೀಯ ವಿದ್ಯಾಥರ್ಿಗಳಿಗೆ ಪಠ್ಯ ತರಗತಿ ಕೊಠಡಿಗಳು, ಪ್ರಯೋಗಶಾಲೆ, ಪ್ರಾಂಶುಪಾಲರ ಕಚೇರಿ ಸಹಿತ ಶಿಕ್ಷಕರ ಕೊಠಡಿ, ಅನಾಟಮಿ ಮ್ಯೂಸಿಯಂ, ಶವಾಗಾರ ಮೊದಲಾದ ಸೌಲಭ್ಯಗಳನ್ನು ಅಕಾಡೆಮಿಕ್ ಬ್ಲಾಕ್ ಶೀಘ್ರದಲ್ಲೆ ಹೊಂದಲಿದೆ. ವೈದ್ಯಕೀಯ ಕಾಲೇಜು ಸಮೀಪಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು, ಚತುಷ್ಪದ ರಸ್ತೆ ನಿಮರ್ಾಣವಾಗಲಿದ್ದು ಕುಂಬಳೆ, ಸೀತಾಂಗೋಳಿ ಸಹಿತ ಕಾಸರಗೋಡು ನಗರವನ್ನು ಸುಲಭವಾಗಿ ಸಂಪಕರ್ಿಸುವ ಯೋಜನೆ ರೂಪಿಸಲಾಗಿದೆ. ಒಟ್ಟು 288 ಕೋಟಿ ರೂ. ಗಳಲ್ಲಿ ನಿಮರ್ಾಣ ಹೊಂದಲಿರುವ ಆಸ್ಪತ್ರೆ ಸಮುಚ್ಚಯವು 65 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಕಳೆದ ಐಕ್ಯರಂಗ ಸರಕಾರ ಆಡಳಿತದಲ್ಲಿ ಕಂದಾಯ ಇಲಾಖೆಯ ಮೂಲಕ ವೈದ್ಯಕೀಯ ಆಸ್ಪತ್ರೆ ನಿಮರ್ಾಣಕ್ಕೆ ಅಗತ್ಯವಿರುವ ಭೂಮಿಯನ್ನು ಕಂದಾಯ ಇಲಾಖೆ ಮೂಲಕ ನೀಡಲಾಗಿತ್ತು. 2013 ರಲ್ಲಿ ಆರಂಭಗೊಂಡ ಆಸ್ಪತ್ರೆ ಸಮುಚ್ಚಯ ನಿಮರ್ಾಣ ಕಾರ್ಯ ಎರಡು ವರ್ಷಗಳ ಕಾಲ ಕುಂಟುತ್ತಾ ಸಾಗಿತ್ತು. ಆರೋಗ್ಯ ವಿದ್ಯಾಭ್ಯಾಸ ನಿದರ್ೇಶನಾಲಯದ ಅಧೀನದಲ್ಲಿ ವೈದ್ಯಕೀಯ ಕಾಲೇಜು ಕಾರ್ಯ ನಿರ್ವಹಿಸಲಿದೆ. ಸುಸಜ್ಜಿತ ಗ್ರಂಥಾಲಯ, ಪುರುಷ ಮತ್ತು ವನಿತಾ ಹಾಸ್ಟೆಲ್ಗಳು, ವೈದ್ಯರಿಗೆ ಪ್ರತ್ಯೇಕ ನಿವಾಸಗಳು, ಸಭಾಂಗಣ, ಸೂಕ್ತ ರಸ್ತೆ ಸಂಪರ್ಕ ಸಹಿತ ಕೆ.ಎಸ್.ಇ.ಬಿ ಸಬ್ ಸ್ಟೇಶನ್ ಇರಲಿದೆ ಎಂದು ಅಧಿಕೃತರು ತಿಳಿಸಿದ್ದಾರೆ. ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಯ ಲಕ್ಷ್ಯ ಹೊಂದಿರುವ ಆಸ್ಪತ್ರೆ ನಿಮರ್ಾಣದಿಂದ ಆರೋಗ್ಯ ಕ್ಷೇತ್ರದಲ್ಲಿ ಮಂಗಳೂರು ಆಸ್ಪತ್ರೆಗಳ ಮೇಲಿನ ಅವಲಂಬನೆ ಕಡಿಮೆಯಾಗಬಹುದು ಎಂದು ನಂಬಲಾಗಿದೆ. ಎಂಡೋ ಸಂತ್ರಸ್ತರು ಹೆಚ್ಚಿರುವ ಗ್ರಾಮೀಣ ಪ್ರದೇಶವಾಸಿಗಳಿಗೂ ಉತ್ತಮ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ಶಿಲಾನ್ಯಾಸ ಕಾರ್ಯಕ್ರಮದ ಉದ್ಘಾಟನೆಯ ಪೂರ್ವಭಾವಿಯಾಗಿ ಸ್ವಾಗತ ಸಮಿತಿ ರಚನಾ ಸಭೆಯು ಬದಿಯಡ್ಕ ಗ್ರಾ.ಪಂ ಸಭಾಂಗಣದಲ್ಲಿ ನಡೆದಿದ್ದು ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗ್ರಾ.ಪಂ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಕ್ರಿಯಾ ಸಮಿತಿ ಅಧ್ಯಕ್ಷರಾಗಿದ್ದಾರೆ. ಜಿಲ್ಲಾ ವೈದ್ಯ ಅಧಿಕಾರಿ ಡಾ.ಎ.ಪಿ. ದಿನೇಶ್ ಕುಮಾರ್ ಪ್ರಧಾನ ಆಯೋಜಕರನ್ನಾಗಿ ನೇಮಿಸಲಾಗಿದೆ.






