ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದಶರ್ಿ ಕೆ.ಸುರೇಂದ್ರನ್ಗೆ ಜೈಲುವಾಸ
ಕುಂಬಳೆ: ಶಬರಿಮಲೆಯಲ್ಲಿ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡಿದ ಆರೋಪದಡಿ ಬಂಧನಕ್ಕೊಳಗಾದ ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದಶರ್ಿ ಕೆ.ಸುರೇಂದ್ರನ್ ಅವರ ಮೇಲೆ ಮಗದೊಂದು ಆರೋಪ ಹೊರಿಸಲಾಗಿದ್ದು, ಪೋಲಿಸರು ಕೇಸು ದಾಖಲಿಸಿಕೊಂಡಿದ್ದಾರೆ. ಚಿತ್ತಿರಾ ಆಟ್ ವಿಶೇಷ ಪೂಜೆಗೆಂದು ಕ್ಷೇತ್ರಕ್ಕೆ ಆಗಮಿಸಿದ್ದ 52 ವರ್ಷ ವಯಸ್ಸಿನ ಭಕ್ತೆಯನ್ನು ಶಬರಿಮಲೆ ಕ್ಷೇತ್ರ ಪ್ರವೇಶಿಸದಂತೆ ಕೆ.ಸುರೇಂದ್ರನ್ ತಡೆದಿದ್ದು, ಇದರಡಿ ಭಕ್ತೆಯ ವೈಯಕ್ತಿಕ ಸ್ವಾತಂತ್ರ್ಯ ಹರಣ ಎಂಬ ಕೇಸು ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 120(ಬಿ) ಪ್ರಕಾರ ಜಾಮೀನು ರಹಿತ ಕೇಸನ್ನು ಕೆ.ಸುರೇಂದ್ರನ್ ಮೇಲೆ ಹೊರಿಸಲಾಗಿದೆ. ಶಬರಿಮಲೆಯಲ್ಲಿ ಸಂಘರ್ಷ ಸೃಷ್ಠಿಸಲು ಸುರೇಂದ್ರನ್ ಶ್ರಮಿಸಿದ್ದರು ಎನ್ನುವ ಆರೋಪದಡಿ ದೂರನ್ನು ದಾಖಲಿಸಲಾಗಿದ್ದು, ಒಟ್ಟು 12 ಮಂದಿ ಯನ್ನು ನ.18 ರಂದು ನಡೆದ ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬುಧವಾರದಂದು ಸ್ಥಳೀಯ ರಾನ್ನಿ ನ್ಯಾಯಾಲಯದಲ್ಲಿ ಸುರೇಂದ್ರನ್ ಮೇಲೆ ಕೊಲೆ ಪ್ರಯತ್ನವೆಂಬ ಮೂಕದ್ದಮೆ ಹೊರಿಸಲಾಗಿದೆ.
ಶಬರಿಮಲೆಯಲ್ಲಿ ನಡೆದ ಚಿತ್ತಿರಾ ಆಟ್ ವಿಶೇಷ ಪೂಜೆಯಲ್ಲಿ ಭಾಗವಹಿಸಿ ತನ್ನ ಎಳೆ ಮಗುವಿನ ಅನ್ನಪ್ರಾಶನ ಮಾಡಿಸಲು ಆಗಮಿಸಿದ್ದ 52 ವರ್ಷದ ತ್ರಿಶೂರು ನಿವಾಸಿ ಮಹಿಳೆ ಲಲಿತಾ ಎಂಬಾಕೆಯನ್ನು ತಡೆದು ನಿಲ್ಲಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಸ್ತ್ರೀ ಸ್ವಾತಂತ್ರ್ಯವನ್ನು ಅವಮಾನಿಸಲಾಗಿದ್ದು, ಹಲ್ಲೆಗೆ ಶ್ರಮ ಸಹಿತ ಸಂಘರ್ಷದ ವಾತಾವರಣ ಸೃಷ್ಠಿಸುವ ಹುನ್ನಾರವನ್ನು ಕೆ.ಸುರೇಂದ್ರನ್ ಎಸಗಿದ್ದಾರೆ ಎಂಬ ದೋಷಾರೋಪವನ್ನು ಪೋಲಿಸರು ಸ್ಥಳೀಯ ನ್ಯಾಯಾಲಯದಲ್ಲಿ ಹೂಡಿದ್ದಾರೆ.





