ಕುಂಬಳೆ: ಯಕ್ಷಗಾನ, ಕಥಾಸಂಕೀರ್ತನೆಗಳು ಮನೋರಂಜನೆ ಮಾತ್ರವಲ್ಲದೆ ಬದುಕನ್ನು ಸಕಾರಾತ್ಮಕವಾಗಿ ರೂಪಿಸುವ ಮಾಧ್ಯಮವಾಗಿ ಜನಸಾಮಾನ್ಯರಿಗೆ ಪ್ರೀಯವಾಗಿದೆ. ಸಂಸ್ಕಾರ, ಸಂಸ್ಕೃತಿಗಳ ವಾಹಕವಾಗಿ, ಸಕಲರ ಏಳಿಗೆಗಾಗಿ ಕಲಾಪರವಾದ ಸಾಮಾಜಿಕ ವ್ಯವಸ್ಥೆಗೆ ಪ್ರೋತ್ಸಾಹ ನೀಡಬೇಕಿದೆ ಎಂದು ಹಿರಿಯ ಯಕ್ಷಗಾನ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಂಬಳೆಯ ಕೀರ್ತನಾ ಕಟೀರದ ಆಶ್ರಯದಲ್ಲಿ ನಡೆದ ಹರಿಕೀರ್ತನಾ ಹಬ್ಬ=18 ಹರಿಕಥಾ ನವಾಹದ ಇತ್ತೀಚೆಗೆ ಕಣಿಪುರ ಕ್ಷೇತ್ರ ಪರಿಸರದಲ್ಲಿ ನಡೆದ ಸಮಾರೋಪದಲ್ಲಿ ತಮಗೆ ನೀಡಲಾದ ಯಕ್ಷಾಂಗಣ ರಂಗ ಸಾಮ್ರಾಟ ವಿಶೇಷ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಶಾಸ್ತ್ರೀಯ ರಂಗಕಲೆಗಳ ಹಿಂದೆ ಪ್ರಕೃತಿ, ಜೀವಜಾಲಗಳ ವಿಕಾಸ-ಬೆಳವಣಿಗೆಗಳ ಪೂರಕ ಶಕ್ತಿ ಅಡಗಿದೆ.ಈ ಹಿನ್ನೆಲೆಯಲ್ಲಿ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಬೆಳೆಸುವ ಇಚ್ಚಾಶಕ್ತಿ ಕಲಾವಿದರಲ್ಲಿರಬೇಕು. ಮೂಲ ಸ್ವರೂಪದ ಅರಿವಿಗೆ ಪೌರಾಣಿಕ ಕಥಾ ಜ್ಞಾನ ಸಹಿತ ವಿವಿಧ ಪರಿಕರಗಳು ಅಗತ್ಯವಿದ್ದು, ಕಥಾ ಸಂಕೀರ್ತನೆಗಳು ಅವನ್ನು ಒದಗಿಸಿಕೊಡುತ್ತದೆ ಎಂದು ಈ ಸಂದರ್ಭ ತಿಳಿಸಿದರು. ಯಕ್ಷ ಪಿತಾಮಹ ಪಾತರ್ಿಸುಬ್ಬ ಓಡಾಡಿದ, ತನ್ನ ಕಲಾಸೇವೆಗೆ ಮೂಲ ನೆಲೆಯಾಗಿ ಕಂಡುಕೊಂಡ ಕುಂಬಳೆ ಪ್ರದೇಶ ಪ್ರಸ್ತುತ ಕೀರ್ತನ ಕುಟೀರದ ಕಲಾಸೇವೆಯಿಂದ ಮಣ್ಣಿನ ಪರಂಪರೆಯನ್ನು ಉಳಿಸಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದರು.
ತಂತ್ರಿವರೇಣ್ಯ ಉಳಿಯತ್ತಾಯ ವಿಷ್ಣು ಆಸ್ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಬಾನುಲಿ ನಿಲಯದ ನಿವೃತ್ತ ನಿದರ್ೇಶಕ, ಸಾಹಿತಿ ವಸಂತಕುಮಾರ್ ಪೆರ್ಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಮೃದಂಗ ವಿದ್ವಾನ್ ಬಾಬು ರೈ ಅವರಿಗೆ ಕೀರ್ತನ ಕಸ್ತೂರಿ ಪ್ರಶಸ್ತಿ ಪ್ರಧಾನಗೈಯಲಾಯಿತು.ನಾಟ್ಯ ವಿದುಷಿಃ ವಿದ್ಯಾಲಕ್ಷ್ಮೀ ಕುಂಬಳೆ ಅವರಿಗೆ ನಾಟ್ಯಕಲಾ ಮಧುವಾಹಿನಿ ಹಾಗೂ ಚಿತ್ರಕಲಾವಿದ ಎಂ.ಜಿ.ಕೆ.ಆಚಾರ್ಯ ಕುಂಬಳೆ ಅವರಿಗೆ ಕಲಾ ಚಿತ್ರ ಚತುರ ಪ್ರಶಸ್ತಿಗಳನ್ನು ಪ್ರಧಾನಗೈಯ್ಯಲಾಯಿತು. ಹರಿಕಥಾ ಪರಿಷತ್ತು ಮಂಗಳೂರಿನ ಅಧ್ಯಕ್ಷ ಕೆ.ಮಹಾಬಲ ಶೆಟ್ಟಿ, ಕೀರ್ತನ ಕುಟೀರದ ಹರಿಕಥಾ ನವಾಹ ಸಮಿತಿ ಅಧ್ಯಕ್ಷ ತಿರುಮಲೇಶ್ವರ ಭಟ್, ಪ್ರ.ಕಾರ್ಯದಶರ್ಿ ರಾಮನಾಥ ನಾಯಕ್, ಕೋಶಾಧಿಕಾರಿ ಶಿವರಾಮ ಎನ್ ಮೊದಲಾದವರು ಉಪಸ್ಥಿತರಿದ್ದರು. ಕೀರ್ತನ ಕುಟೀರದ ಸಂಚಾಲಕ ಶಂ.ನಾ.ಅಡಿಗ ಕುಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಶಂ.ನಾ ಅಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





