ಮಂಜೇಶ್ವರ: ಮುಜುಂಗಾವು ಶ್ರೀ ಭಾರತೀ ನೇತ್ರಚಿಕಿತ್ಸಾಲಯ, ಧರ್ಮಚಕ್ರ ಟ್ರಸ್ಟ್ ಹಾಗೂ ವಕರ್ಾಡಿ ಶ್ರೀ ನಾರಾಯಣ ಗುರುಮಂದಿರದ ವತಿಯಿಂದ ಶ್ರೀ ನಾರಾಯಣ ಗುರುಪ್ರಸಾದಿತ ಯಕ್ಷಗಾನ ಕಲಾಮಂದಿರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ಇತ್ತೀಚೆಗೆ ನಡೆಯಿತು.
ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದ ಶಿಬಿರ ಸಂಚಾಲಕ ಎಸ್.ಎನ್. ಭಟ್ ಅಜರ್ುನಗುಳಿ ದೀಪಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಬಡಜನತೆಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆಯನ್ನು ನೀಡುವ ಉದ್ದೇಶವನ್ನು ಇರಿಸಿ ವಿವಿಧೆಡೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಶ್ರೀ ನಾರಾಯಣ ಗುರುಮಂದಿರದ ಕಾರ್ಯದಶರ್ಿ ಶ್ರೀಧರ ಅಧ್ಯಕ್ಷತೆ ವಹಿಸಿದ್ದರು. ಶ್ರೀಭಾರತೀ ನೇತ್ರ ಚಿಕಿತ್ಸಾಲಯದ ಆಡಳಿತಾಧಿಕಾರಿ ಡಾ.ಶ್ರೀಧರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ನಾರಾಯಣ ಗುರುಮಂದಿರದ ಅಧ್ಯಕ್ಷ ಪ್ರಖ್ಯಾತ ಯಕ್ಷಗಾನ ಕಲಾವಿದ ನಾರಾಯಣ ಬೆಜ್ಜಂಗಳ ಸ್ವಾಗತಿಸಿ, ಜೊತೆ ಕಾರ್ಯದಶರ್ಿ ಸುರೇಂದ್ರ ವಂದಿಸಿದರು. ಬೆಳಿಗ್ಗಿನಿಂದ ಮಧ್ಯಾಹ್ನ ತನಕ ಸುಮಾರು 50ಕ್ಕೂ ಹೆಚ್ಚು ಮಂದಿಯನ್ನು ತಪಾಸಣೆ ನಡೆಸಲಾಯಿತು.





