ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 05, 2018
ಪೌರಾಣಿಕ ಪ್ರಸಂಗಗಳಿಂದ ಧಾಮರ್ಿಕ ಪ್ರಜ್ಞೆ ಜಾಗೃತಿ'
ಮಂಗಳೂರು: `ಪೌರಾಣಿಕ ಯಕ್ಷಗಾನ ಪ್ರಸಂ ಗಗಳು ಜನರಲ್ಲಿ ಧರ್ಮದ ಪ್ರಜ್ಞೆ ಬೆಳೆಸು ವವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಶಾಲಾ-ಕಾಲೇಜು ವಿದ್ಯಾಥರ್ಿಗಳು ಯಕ್ಷಗಾನದಲ್ಲಿ ಅತೀವ ಆಸಕ್ತಿ ತೋರಿಸುತ್ತಿದ್ದಾರೆ' ಎಂದು ಶಾರದಾ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎಂ ಬಿ ಪುರಾಣಿಕ್ ಹೇಳಿದರು.
ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಶ್ರೀಕೃಷ್ಣ ಯಕ್ಷಸಭಾದ `ಯಕ್ಷ ಸಪ್ತಾಹ' ಸಭಾ ಕಾರ್ಯಕ್ರಮದಲ್ಲಿ ಚೆಂಡೆ ವಾದಕ ದೇಲಂತಮಜಲು ಸುಬ್ರ ಹ್ಮಣ್ಯ ಭಟ್ ಹಾಗೂ ಕಟೀಲು ಮೇಳದ ಕಲಾವಿದ ದಿನೇಶ ಶೆಟ್ಟಿ ಕಾವಳಕಟ್ಟೆ ಅವರನ್ನು ಸನ್ಮಾನಿಸಿ ಮಾತನಾಡಿದರು.
ನಮ್ಮ ಕುಡ್ಲ ಚಾನೆಲ್ ಮಾಲೀಕ ಲೀಲಾಕ್ಷ ಕಕರ್ೇರ ಮಾತನಾಡಿದರು. ಸುಂದರ ಶೆಟ್ಟಿ, ಜನಾರ್ದನ ಕುಡುಪು, ಜಯರಾಮ ಉಡುಪ, ಉದಯ ಭಟ್ ಕುಡುಪು, ಬಾಲಕೃಷ್ಣ ಕಾರಂತ, ನರಸಿಂಹ ತಂತ್ರಿ, ಮಧುಕರ ಶೆಟ್ಟಿ, ಸಂಜೀವ ಶೆಟ್ಟಿ, ನಾಗೇಶ್ ಸಾಲ್ಯಾನ್, ಪೊಕರ್ೋಡಿ ದೇವಳದ ಅರ್ಚಕ ಮೊದಲಾದವರಿದ್ದರು. ಸುಧಾರಕ ರಾವ್ ಪೇಜಾವರ ನಿರೂಪಿಸಿದರು. ಕುಡುಪು ವಾಸುದೇವ ರಾವ್ ಸನ್ಮಾನಪತ್ರ ವಾಚಿಸಿ, ವಂದಿಸಿದರು. ಬಳಿಕ ಸಪ್ತಾಹದಂಗವಾಗಿ ಗಿರೀಶ್ ರೈ ಕಕ್ಕೆಪದವು ಭಾಗವತಿಕೆಯಲ್ಲಿ `ಚತುರ್ಜನ್ಮಮೋಕ್ಷ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಚಿತ್ರ: `ಯಕ್ಷ ಸಪ್ತಾಹ' ಸಭಾ ಕಾರ್ಯಕ್ರಮದಲ್ಲಿ ಚೆಂಡೆ ವಾದಕ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಹಾಗೂ ಕಟೀಲು ಮೇಳದ ಕಲಾವಿದ ದಿನೇಶ ಶೆಟ್ಟಿ ಕಾವಳಕಟ್ಟೆ ಅವರನ್ನು ಸನ್ಮಾನಿಸಲಾಯಿತು.




