ಮುಖ್ಯಮಂತ್ರಿಗಳಿಂದ ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಕಟ್ಟಡ ನಿಮರ್ಾಣ ಶಿಲಾನ್ಯಾಸ
0
ನವೆಂಬರ್ 25, 2018
ಬದಿಯಡ್ಕ:ರಾಜ್ಯದ ಆರೋಗ್ಯ ರಂಗ ಸಹಿತ ಎಲ್ಲಾ ವಿಭಾಗಗಳ ಸಮಗ್ರ ಅಭಿವೃದ್ದಿಗೆ ಸರಕಾರ ಕಟಿಬದ್ದವಾಗಿದೆ. ಕಾಸರಗೋಡು ಆರೋಗ್ಯಕ್ಕೆ ಸಂಬಂಧಿಸಿ ಇತರ ಜಿಲ್ಲೆಗಳಿಗಿಂತ ಭಿನ್ನವಾಗಿ ಎಂಡೋ ದುರಂತಗಳಿಂದ ಕಂಗೆಟ್ಟ ಜಿಲ್ಲೆಯಾಗಿದ್ದು, ಈ ಹಿನ್ನೆಲೆಯಲ್ಲಿ ವೈದ್ಯಕೀಯ ಕಾಲೇಜು ನಿಮರ್ಾಣದ ಮಹತ್ವದಿಂದ ಕಾಲೇಜು-ಆಸ್ಪತ್ರೆ ನಿಮರ್ಿಸಲು ಯೋಜನೆ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಉದ್ದೇಶಿತ ವೈದ್ಯಕೀಯ ಕಾಲೇಜಿನ ನಿಮರ್ಾಣ ಕಾಮಗಾರಿ ವೇಗದಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.
ಉಕ್ಕಿನಡ್ಕದಲ್ಲಿ ನಿಮರ್ಾಣ ಹಂತದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಟ್ಟಡ ನಿಮರ್ಾಣ ಯೋಜನೆಗೆ ಭಾನುವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದೆಲ್ಲೆಡೆ ಜನಸಾಮಾನ್ಯರ ಅಗತ್ಯಗಳಿಗೆ ಅನುಸರಿಸಿ ಉನ್ನತ ಮಟ್ಟದ ಚಿಕಿತ್ಸೆಗೆ ಸೌಕರ್ಯ ಏರ್ಪಡಿಸುವ ನಿಟ್ಟಿನಲ್ಲಿ ಸರಕಾರ ಅಗತ್ಯವಿರುವ ಪ್ರದೇಶಗಳಲ್ಲಿ ವೈಯಕೀಯ ಸೌಕರ್ಯ ಏರ್ಪಡಿಸುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಿಸುತ್ತಿದೆ ಎಂದು ಅವರು ತಿಳಿಸಿದರು. ತಾಲೂಕು ಆಸ್ಪತ್ರೆಗಳನ್ನು ರೋಗಿಗಳಿಗೆ ನಿಕಟಗೊಳಿಸುವ ಕೇಂದ್ರಗಳಾಗಿ ಬದಲಾಯಿಸಲಾಗುತ್ತಿದೆ. ರಾಜ್ಯ 55 ಆಸ್ಪತ್ರೆಗಳು,555 ಕುಟುಂಬ ಆರೋಗ್ಯ ಕೇಂದ್ರಗಳು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಅಭಿವೃದ್ದಿಪಡಿಸಲಾಗುತ್ತಿದೆ, 730 ಹೊಸ ಉಯೋಗ ಸೃಷ್ಟಿಯನ್ನು ಆರೋಗ್ಯ ವಿಭಾಗದಲ್ಲಿ ಮಾಡಲಾಗಿದೆ ಎಂದು ಅವರು ತಿಳಿಸಿದರು. ಅಮೃತಂ ಆರೋಗ್ಯ ಯೋಜನೆಯ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಚಿಕಿತ್ಸೆಗೆ ವ್ಯವಸ್ಥೆಗೊಳಿಸಲಾಗುತ್ತಿದೆ ಎಂದು ಪಿಣರಾಯಿ ವಿಜಯನ್ ತಿಳಿಸಿದರು. 95 ಕೋಟಿಗಳ ಆಡಳಿತಾನುಮತಿ ಲಭಿಸಿರುವ ಉಕ್ಕಿನಡ್ಕ ವೈಯಕೀಯ ಕಾಲೇಜು ಆಸ್ಪತ್ರೆಯು ಎಡು ವರ್ಷಗಳಲ್ಲಿ ಸಾಕಾರವಾಗುವುದೆಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅವರು, ಜಿಲ್ಲೆಯ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಿಸಲಾಗಿದೆ.23 ಕುಟುಂಬ ಆರೋಗ್ಯ ಕೇಂದ್ರಗಳು ಉನ್ನತೀಕರಿಸಲ್ಪಡುತ್ತಿದೆ ಎಂದು ತಿಳಿಸಿದರು. ಹೃದ್ಯಂ ಉಚಿತ ಹೃದಯ ಚಿಕಿತ್ಸೆಯಲ್ಲಿ ಜಿಲ್ಲೆಯ 30 ರೋಗಿಗಳಿಗೆ ಉತ್ತಮ ಹೃದಯ ಚಿಕಿತ್ಸೆ ನೀಡಲಾಗಿದೆ.ಜಿಲ್ಲಾಸ್ಪತ್ರೆಯ ಟ್ರೋಮಾ ಕೇರ್ ಘಟಕ ಶೀಘ್ರ ಜಾರಿಗೊಳ್ಳಲಿದೆ ಎಂದು ತಿಳಿಸಿದರು. ಉಕ್ಕಿನಡ್ಕ ವೈದ್ಯಕೀಯ ಕಾಲೇಜಿನ ಕಾಮಗಾರಿಗೆ ಪ್ರಸ್ತುತ ಐದು ಕೋಟಿ ರೂ.ಗಳ ನಿಧಿ ಮಂಜೂರಾಗಿದೆ ಎಂದು ತಿಳಿಸಿದರು.
ಸಂಸದ ಪಿ.ಕರುಣಾಕರನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಜಿ.ಪಂ. ಅಧ್ಯಕ್ಷ ಎಜಿಸಿ ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು,ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಸದಸ್ಯರಾದ ಲಕ್ಷ್ಮೀನಾರಾಯಣ ಪೈ, ಎಂ.ವಿ.ಬಾಲಕೃಷ್ಣ, ಮಾಹಿನ್ ಕೇಳೋಟ್ ಮೊದಲಾದವರು ಉಪಸ್ಥಿತರಿದ್ದರು. ಶಾಸಕ ಎನ್.ಎ.ನೆಲ್ಲಿಕುನ್ನು ಸ್ವಾಗತಿಸಿ, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ದಿನೇಶ್ ಮೋನ್ ವಂದಿಸಿದರು.

