ಮುಖ್ಯಮಂತ್ರಿ ನಡೆಯ ವಿರುದ್ದ ಉಕ್ಕಿನಡ್ಕದಲ್ಲಿ ಪ್ರತಿಭಟನಾ ಮಾಚರ್್
0
ನವೆಂಬರ್ 25, 2018
ಬದಿಯಡ್ಕ: ಶಬರಿಮಲೆ ಯುವತಿ ಪ್ರವೇಶ ವಿಚಾರದಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ನೇತಾರರನ್ನು ಸುಳ್ಳುಕೇಸುಗಳನ್ನು ದಾಖಲಿಸಿ ಬಂಧಿಸುತ್ತಿರುವ ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರದ ವಿರುದ್ಧ ಭಾನುವಾರ ಉಕ್ಕಿನಡ್ಕ ಮೆಡಿಕಲ್ ಕಾಲೇಜು ಆಸ್ಪತ್ರೆ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲ್ಗೊಳ್ಳುತ್ತಿದ್ದ ಸಮಾರಂಭದ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನಾ ಮಾಚರ್್ ನಡೆಸಲಾಯಿತು.
ಬಹುಸಂಖ್ಯೆಯ ಹಿಂದೂ ನಂಬಿಕೆಗಳನ್ನು ನಾಶಗೊಳಿಸುವ ಎಡರಂಗದ ಕಾರಸ್ಥಾನದ ವಿರುದ್ದ ಭಕ್ತಜನ ಸಮಿತಿ ಉಗ್ರ ಹೋರಾಟ ಕೈಗೊಂಡಿದೆ. ಶಬರಿಮಲೆಯ ಪಾವಿತ್ರ್ಯತೆಗೆ ಧಕ್ಕೆ ತಂದು ಉದ್ಯಮ ಕೇಂದ್ರವಾಗಿ ಬದಲಾಯಿಸಲು ಸಂಚು ನಡೆಸಿದೆ. ಇದರ ವಿರುದ್ದ ಧ್ವನಿಯೆತ್ತುವ ಶಕ್ತಿಯನ್ನು ಧಮನಿಸಿ ಹೋರಾಟದ ಹಾದಿಯನ್ನು ದಿಕ್ಕೆಡಿಸಲು ಯತ್ನಿಸುತ್ತಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದಶರ್ಿ ಕೆ.ಸುರೇಂದ್ರನ್ ಅವರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸುವ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಪ್ರಮೀಳಾ ಸಿ.ನಾಕ್ ಪ್ರತಿಭಟನೆ ಉದ್ಘಾಟಿಸಿ ಗಂಭೀರ ಆರೋಪ ಮಾಡಿದರು. ರಾಜ್ಯ ಉಚ್ಚ ನ್ಯಾಯಾಲಯವು ನೀಡಿರುವ ಆದೇಶವನ್ನು ಉಲ್ಲಂಘಿಸಿ ನಾಮಜಪಗೈದ ಭಕ್ತರನ್ನು ಬಂಧಿಸುವ ಮೂಲಕ ತನ್ನ ಕರಾಳಮುಖವನ್ನು ಪ್ರತಿಬಿಂಬಿಸಿದೆ ಎಂದು ನಾಕ್ ಆಪಾದಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸದಾನಂದ ರೈ ಅಧ್ಯಕ್ಷತೆ ವಹಿಸಿದ್ದ ಪ್ರತಿಭಟನೆಯನ್ನು ರಾಜ್ಯ ಬಿಜೆಪಿ ಸಮಿತಿ ಸದಸ್ಯೆ ಪ್ರಮೀಳಾ ಸಿ.ನಾಕ್ ಉದ್ಘಾಟಿಸಿದರು. ರಾಜ್ಯ ಸಮಿತಿ ಸದಸ್ಯರುಗಳಾದ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ರಮೇಶ್ ಕಾಸರಗೋಡು, ಮಂಜೇಶ್ವರ ಮಂಡಲಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಕಾಸರಗೋಡು ಮಂಡಲ ಪ್ರ.ಕಾರ್ಯದಶರ್ಿ ಹರೀಶ್ ನಾರಂಪಾಡಿ,ಯುವಮೋಚರ್ಾ ಮಂಡಲಾಧ್ಯಕ್ಷ ಅವಿನಾಶ್ ರೈ, ಜಯಂತ ಪಾಟಾಳಿ, ಸ್ವಪ್ನಾ ಜೆ, ಸುಮಿತ್ ರಾಜ್ ಪೆರ್ಲ, ಮಹಿಳಾ ಮೋಚರ್ಾ ರಾಜ್ಯ ಕಾರ್ಯದಶರ್ಿ ಪುಷ್ಪಾ ಅಮೆಕ್ಕಳ, ಹರಿಶ್ಚಂದ್ರ ಮಂಜೇಶ್ವರ, ಅಂಜು ಜೋಸ್ತಿ, ಸುನಿಲ್ ಪಿ.ಆರ್. ಪ್ರಸಾದ್ ಪೆರ್ಲ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ವೇಲಾಯುಧನ್ ಸ್ವಾಗತಿಸಿ, ಕಾಸರಗೋಡು ಮಂಡಲಾಧ್ಯಕ್ಷ ಸುಧಾಮ ಗೋಸಾಡ ವಂದಿಸಿದರು. ಪ್ರತಿಭಟನೆಯನ್ನು ಪೋಲೀಸರು ಅರ್ಧದಲ್ಲಿ ತಡೆದರು. ಈ ಸಂದರ್ಭ ಅಲ್ಪಹೊತ್ತು ಗೊಂದಲದ ಸ್ಥಿತಿ ನಿಮರ್ಾಣವಾಯಿತು. ಜೊತೆಗೆ ಆಡಳಿತರೂಢ ಸಿಪಿಎಂ ಪಕ್ಷದ ಕೆಲವು ಕಾರ್ಯಕರ್ತರು ಬಿಜೆಪಿ ಪ್ರತಿಭಟನೆಯ ವಿರುದ್ದ ಘೋಷಣೆ ಕೂಗಿ ಗೊಂದಲ ಸೃಷ್ಟಿಸಿ ಗಲಭೆಗೆ ಯತ್ನಿಸಿದ್ದು, ಪೋಲೀಸರು ಎಚ್ಚರಿಕೆ ನೀಡಿ ಚದುರಿಸಿದರು.

