ಪೈಗಳಂತೆ ವಿಶಾಲತೆಯಿಂದೊಡಗೂಡಿದ ವಿಶ್ವ ಕವಿತ್ವ ಸಿದ್ದಿಸಲು ಸ್ವರೂಪ ದರ್ಶನಕ್ಕೆ ಸಾಧ್ಯವಾಗಬೇಕು-ಪ್ರೊ.ಮೂಡಿತ್ತಾಯ
0
ನವೆಂಬರ್ 25, 2018
ಮಂಜೇಶ್ವರ: ಸಂಗೀತ, ಶಿಲ್ಪಕಲೆಗಳ ಸಹಿತ ವಿವಿಧ ಲಲಿತ ಕಲೆಗಳ ಪೈಕಿ ಸಾಹಿತ್ಯ ಪ್ರಕಾರ ಸ್ವತಂತ್ರವಾದ ಬೆಳವಣಿಗೆಗೆ ಪೂರಕವಾಗಿ ವಿವಿಧಸ್ತರಗಳಲ್ಲಿ ಬೆಳೆದುನಿಂತಿದೆ. ಎಲ್ಲಾ ಭಾಷೆಗಳಿಗೆ ಬೆನ್ನೆಲುಬಾಗಿ ಕನ್ನಡದ ಕಲೆ-ಸಾಹಿತ್ಯಗಳು ಫ್ರೌಡಿಮೆಯೊಂದಿಗೆ ಅತ್ಯುನ್ನತಮಟ್ಟದಲ್ಲಿ ವಿಸ್ತಾರಗೊಂಡಿದೆ ಎಂದು ತಲಶ್ಚೇರಿ ಬ್ರಿನ್ನಿಯನ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಸಾಹಿತಿ ಪ್ರೊ. ಪಿ.ಎನ್.ಮೂಡಿತ್ತಾಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘವು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟಸ್ಟ್ ಸಹಯೋಗದೊಂದಿಗೆ ಗಿಳಿವಿಂಡು ಸ್ಮಾರಕದ ಪಾತರ್ಿಸುಬ್ಬ ವೇದಿಕೆಯಲ್ಲಿ ಶನಿವಾರ ಅಪರಾಹ್ನ ಹಮ್ಮಿಕೊಂಡ ಗಡಿನಾಡ ಹಿರಿ-ಕಿರಿಯ ಕವಿಗಳ ಸಮ್ಮಿಲನ ಕಾವ್ಯಾಂಜಲಿ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬರಹಗಳು ವ್ಯಕ್ತಿತ್ವ ಸ್ವರೂಪ ದರ್ಶನಕ್ಕೆ ಸಾಧ್ಯವಾದಾಗ ಪೈಗಳಂತೆ ವಿಶಾಲತೆಯಿಂದೊಡಗೂಡಿದ ವಿಶ್ವ ಕವಿತ್ವ ಸಿದ್ದಿಸುತ್ತದೆ. ಪ್ರತಿಯೊಬ್ಬರೂ ಅವರವರೊಳಗಿನ ಭಾವಗಳಿಗೆ ಕಿವಿಯಾಗಿಸಿ ಅಕ್ಷರ ರೂಪದ ಧ್ವನಿಸುವಿಕೆಯ ಮೂಲಕ ಸಾರಸ್ವತ ಪ್ರಪಂಚ ಸೃಷ್ಟಿಗೆ ಕಾರಣನಾಗುತ್ತಾನೆ. ಇದು ಸಮಾಜವನ್ನು ತಿದ್ದುವ ಜೊತೆಗೆ ಭವಿಷ್ಯ ರೂಪಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು. ಕಾಸರಗೋಡಿನ ಸಾಹಿತ್ಯ ಇತಿಹಾಸದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು ಎಂದು ನೆನಪಿಸಿದರು.
ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಪದಾಧಿಕಾರಿಗಳಾದ ಬಿ.ವಿ.ಕಕ್ಕಿಲ್ಲಾಯ, ಕೆ.ಆರ್.ಜಯಾನಂದ, ಸುಭಾಸ್ಚಂದ್ರ ಕಣ್ವತೀರ್ಥ ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಶ್ರೀಕೃಷ್ಣಯ್ಯ ಅನಂತಪುರ, ವಿ.ಬಿ.ಕುಳಮರ್ವ, ವಿಜಯಾ ಸುಬ್ರಹ್ಮಣ್ಯ, ಹರೀಶ್ ಪೆರ್ಲ, ಪ್ರಭಾವತಿ ಕೆದಿಲಾಯ, ಗಣೇಶ್ ಪ್ರಸಾದ್ ಮಂಜೇಶ್ವರ, ಸನ್ನಿಧಿ ಟಿ.ರೈ, ರಾಮಚಂದ್ರ ಭಟ್ ಗುಣಾಜೆ, ಸುಂದರ ಬಾರಡ್ಕ, ತೇಜಸ್ವಿನಿ ಕಡೆಂಕೋಡಿ ಪೈವಳಿಕೆ, ಜಯಂತಿ ರಾವ್, ಮೌನೇಶ್ ಆಚಾರ್ ಕಡಂಬಾರ್, ಶಂಕರ ನಾರಾಯಣ ಭಟ್ ಕಕ್ಕೆಪ್ಪಾಡಿ, ಗಣಪತಿ ಭಟ್ ಎಂ, ಅನ್ನಪೂರ್ಣ ಬೆಜಜ್ಪೆ, ಜ್ಯೋತ್ಸ್ನ ಎಂ.ಭಟ್ ಕಡಂದೇಲು, ಶ್ರದ್ಧಾ ನಾಯರ್ಪಳ್ಳ, ಸುಭಾಷ್ ಪೆರ್ಲ, ಶ್ವೇತಾ ಕಜೆ, ದಯಾನಂದ ರೈ ಕಳ್ವಾಜೆ, ಪದ್ಮಾವತಿ ಏದಾರು, ಡಾ.ಎಸ್.ಎನ್.ಭಟ್ ಪೆರ್ಲ, ಬದ್ರುದ್ದೀನ್ ಕುಳೂರು, ಆಶಾ ದಿಲೀಪ್ ಸುಳ್ಯಮೆ, ದೀಕ್ಷಿತಾ ಕೋಳ್ಯೂರು, ಜಯಾ ಮಣಿಯಂಪಾರೆ, ಪಾರ್ವತಿ ದಿನೇಶ್, ಕೆ.ಎ.ಎಂ.ಅನ್ಸಾರಿ, ನಯನಾ ವಿ.ಭಟ್ ಕುರುಡಪದವು, ನರಸಿಂಹ ಭಟ್ ಏತಡ್ಕ, ಸಂಧ್ಯಾಗೀತ ಬಾಯಾರ್, ಯೋಗೀಶ ರಾವ್ ಚಿಗುರುಪಾದೆ,ಪುರುಷೋತ್ತಮ ಭಟ್. ಕೆ, ಗಣೇಶ ಪೈ ಬದಿಯಡ್ಕ, ವಿಜಯಲಕ್ಷ್ಮಿ ಶ್ಯಾನುಭೋಗ್ ಮೊದಲಾದವರು ಭಾಗವಹಿಸುವರು.
ರಾಧಾಕೃಷ್ಣ ಕೆ.ಉಳಿಯತ್ತಡ್ಕ ಹಾಗೂ ಕೃಷ್ಣವೇಣಿ ಕಿದೂರು, ವಿಜಯಲಕ್ಷ್ಮೀ ಶಾನುಭೋಗ್ ಕಾರ್ಯಕ್ರಮ ನಿರೂಪಿಸಿದರು. ಕವಿತಾ ಕೂಡ್ಲು ಸಹಕರಿಸಿದರು.



