ಶಬರಿಮಲೆ ವಿಚಾರದಿಂದ ಬಿಜೆಪಿಗೆ ಸುವಣರ್ಾವಕಾಶ- ಬಿಜೆಪಿ ರಾಜ್ಯಾಧ್ಯಕ್ಷರ ವಿವಾದಾತ್ಮಕ ಹೇಳಿಕೆ
ಕಾಸರಗೋಡು: ಶಬರಿಮಲೆ ಬಿಜೆಪಿಯ ಪ್ರಮುಖ ಅಜೆಂಡಾ, ಕೇರಳದಲ್ಲಿ ಪಕ್ಷದ ಏಳಿಗೆಗೆ ದೇವಸ್ಥಾನದ ವಿಚಾರ ಒಂದು ಸುವರ್ಣಕಾಶವನ್ನು ಸೃಷ್ಠಿಸಿದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೆ ನೀಡಿದ್ದಾರೆ.
ಕಲ್ಲಿಕೋಟೆಯಲ್ಲಿ ಭಾನುವಾರ ನಡೆದ ಯುವಮೋಚರ್ಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಧರನ್ ಪಿಳ್ಳೆಯವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು. ಭಾಷಣ ಮಧ್ಯೆ ನೀಡಿದ ಹೇಳಿಕೆಯು ವಿವಾದಕ್ಕೆಡೆಯಾಗಿದೆ. ಶ್ರೀಧರನ್ ಪಿಳ್ಳೆ ಭಾಷಣದ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶಬರಿಮಲೆ ಭಕ್ತರ ಮನನೋಯಿಸಲು ತಾನು ಈ ಹೇಳಿಕೆ ನೀಡಿಲ್ಲ, ಯುವಮೋಚರ್ಾ ಕಾರ್ಯಕರ್ತರನ್ನು ಉದ್ದೇಶಿಸಿ ಈ ಮಾತುಗಳನ್ನಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸಚಿವ ಮುಲ್ಲಪಳ್ಳಿ ರಾಮಚಂದ್ರನ್ ಶಬರಿಮಲೆಯನ್ನು ಆಯೋಧ್ಯೆಯಂತಾಗಿಸಿ ರಾಜಕೀಯ ಲಾಭ ಗಿಟ್ಟಿಸಲು ಬಿಜೆಪಿಗೆ ನಾವು ಬಿಡೆವು ಎಂದು ಹೇಳಿದ್ದಾರೆ. ಶಬರಿಮಲೆ ಬಿಜೆಪಿ ಅಜೆಂಡಾ ಎಂಬುದು ಸ್ಪಷ್ಟವಾಗಿದೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ರಾಜ್ಯದಲ್ಲಿ ಕೋಮು ಧ್ರುವೀಕರಣ ಸಾಧ್ಯವಿಲ್ಲ ಎಂದು ಮುಲ್ಲಪಳ್ಳಿ ಪ್ರತಿಕ್ರೀಯಿಸಿದ್ದಾರೆ.