HEALTH TIPS

ಪ್ರವಾಸಿ ಮಾಹಿತಿ ಆಪ್ ಮೂಲಕ ಉ.ಮಲಬಾರ್ ಪ್ರವಾಸೋದ್ಯಮಕ್ಕೆ ಪುಷ್ಠಿ- ಪ್ರವಾಸೋದ್ಯಮ ಸಚಿವ

                  ಪ್ರವಾಸಿ ಮಾಹಿತಿ ಆಪ್ ಮೂಲಕ ಉ.ಮಲಬಾರ್ ಪ್ರವಾಸೋದ್ಯಮಕ್ಕೆ ಪುಷ್ಠಿ- ಪ್ರವಾಸೋದ್ಯಮ ಸಚಿವ
    ಕುಂಬಳೆ: ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಸ್ಮೈಲ್-ವಿಟಿಜಿ ಆಪ್ ಸಿದ್ದಪಡಿಸಿ, ಪ್ರವಾಸಿಗರಿಗೆ ಅತ್ಯವಶ್ಯ ಮಾಹಿತಿ ಕೋಶದಂತೆ ಕರ್ತವ್ಯ ನಿರ್ವಹಿಸುವ ಬೇಕಲ ರೆಸಾಟರ್್ ಅಭಿವೃದ್ಧಿ ಪ್ರಾಧಿಕಾರದ ಕ್ರಮವನ್ನು ಪ್ರವಾಸೋದ್ಯಮ ಸಚಿವ ಕಡಕಂಪಳ್ಳಿ ಸುರೇಂದ್ರನ್ ಶ್ಲಾಘಿಸಿದ್ದಾರೆ. ಹೊಸ ಮೊಬೈಲ್ ಆಪ್ ಬಳಕೆಯ ಮೂಲಕ ಪ್ರವಾಸಿಗರು ಪ್ರವಾಸಿ ತಾಣಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದ್ದು, ಉತ್ತರ ಮಲಬಾರು ಪ್ರದೇಶದ ಪ್ರವಾಸೋದ್ಯಮಕ್ಕೆ ಪುಷ್ಠಿ ನೀಡಲಿದೆ ಎಂದು ಅವರು ಹೇಳಿದರು.
  ತಿರುವನಂತಪುರದಲ್ಲಿ ನೂತನ ಸ್ಮೈಲ್-ವಿಟಿಜಿ ಮೊಬೈಲ್ ಆಪ್ ಅನ್ನು ಸೋಮವಾರ ಅನಾವರಣಗೊಳಿಸಿ ಅವರು ಮಾತನಾಡಿದರು.
   ಉತ್ತರ ಮಲಬಾರು ಪ್ರಾಂತ್ಯದ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿ ಸಹಿತ ಪ್ರವಾಸಿ ಆಕರ್ಷಣೆಗೆ ಸರಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಕೇರಳದ ಪ್ರವಾಸೋದ್ಯಮ ನಕ್ಷೆಯಲ್ಲಿ ಕಾಸರಗೋಡು, ಕಣ್ಣೂರು ಸಹಿತ ಕಲ್ಲಿಕೋಟೆ, ವಯನಾಡು ಜಿಲ್ಲೆಗಳ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವವಿದೆ ಎಂದರು. ವಿವಿಧ ಸಂಸ್ಕೃತಿ, ಪ್ರಾಕೃತಿಕ ವಿಶೇಷತೆಗಳು ಸಹಿತ ಐತಿಹಾಸಿಕ ಹಿನ್ನೆಲೆಯಿರುವ ಉತ್ತರ ಮಲಬಾರಿನ ಪ್ರವಾಸೋದ್ಯಮಕ್ಕೆ ಇದು ಸಕಾಲ ಎಂದು ಅವರು ಹೇಳಿದರು. ಪ್ರವಾಹದಿಂದ ಅಬಾಧಿತವಾಗಿರುವ ಉತ್ತರ ಮಲಬಾರಿನಲ್ಲಿ ಪ್ರವಾಸಿ ಸಾಧ್ಯತೆಗಳು ಹೆಚ್ಚಾಗಿದ್ದು, ಸೂಕ್ತ ವಾತಾವರಣವಿದೆ ಎಂದರು.
       ಮೊಬೈಲ್ ಆಪ್ ವಿಶೇಷತೆ
  ಸ್ಮೈಲ್ ವಚರ್ುವಲ್ ಟೂರ್ ಗೈಡ್ ಎಂದು ಕರೆಯಲ್ಪಡುವ ಮೊಬೈಲ್ ಆಪ್ ಉತ್ತರ ಮಲಬಾರಿನ ಪ್ರಮುಖ ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ, ಬೇಕಲ ರೆಸಾಟರ್್ ಅಭಿವೃದ್ಧಿ ಪ್ರಾಧಿಕಾರದ ಮಹತ್ತರ ಯೋಜನೆಗಳಲ್ಲಿ ಒಂದಾಗಿರುವ ಸ್ಮೈಲ್(ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೂಲಕ ಅನುಭವಾತ್ಮಕ ಪ್ರವಾಸೋದ್ಯಮ ಸಾಮಥ್ಯ ವೃದ್ಧಿ) ಯೋಜನೆಯಡಿ ಸಿದ್ಧಗೊಂಡಿರುವ ಮೊಬೈಲ್ ಅಪ್ಲಿಕೇಶನ್ ಬೇಕಲ ಕೇಂದ್ರೀಕೃತವಾಗಿದ್ದು ಕಾಸರಗೋಡು ಜಿಲ್ಲೆ ಸಹಿತ ಕಣ್ಣೂರು, ವಯನಾಡು, ಕಲ್ಲಿಕೋಟೆ ಜಿಲ್ಲೆಗಳ ಪ್ರವಾಸಿಧಾಮಗಳ ಹಿನ್ನೆಲೆ ವೈಶಿಷ್ಟ್ಯಗಳನ್ನು ಸುಲಭವಾಗಿ ಪ್ರವಾಸಿಗರಿಗೆ ಕೈಗೆಟುವಂತೆ ಮಾಡುತ್ತದೆ. 30 ಕಿ.ಮೀ ಪರಿಧಿಯಲ್ಲಿ ಕಂಡು ಬರುವ ಪ್ರವಾಸಿ ಕೇಂದ್ರಗಳ ಬಗ್ಗೆಗಿನ ಇತಿಹಾಸ, ನಿಮರ್ಾಣ ಸಹಿತ ಪೂರ್ವ ಐತಿಹ್ಯಗಳ ಬಗ್ಗೆ ಬೆಳಕು ಚೆಲ್ಲುವ ಮೊಬೈಲ್ ಆ್ಯಪ್ ಸುಲಭ ರಸ್ತೆ ಸಂಪರ್ಕದ ಬಗ್ಗೆಯೂ ಮಾಹಿತಿ ನೀಡುತ್ತದೆ. ಆಪ್ ಅನ್ನು ಪ್ಲೇ ಸ್ಟೋರ್ ಅಥವಾ ತಿತಿತಿ.ಛಜಞಚಿಟಣಠಣಡಿಟ .ಛಿಠಟ ವೆಬ್ಸೈಟ್ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries