ಶಬರಿಮಲೆ ವಿವಾದಗಳು ಕುಟಿಲ ರಾಜಕೀಯದಿಂದ-ಗುರುಸ್ವಾಮಿ ರಾಘವ ಮಾಸ್ತರ್
ಉಪ್ಪಳ: ಭಾರತೀಯರು ಸಂಸ್ಕಾರವಂತ ಸಮಾಜದ ಭಾಗ. ಯಾಂತ್ರಿಕ ಯುಗದಲ್ಲೂ ಸತ್ಸಂಪ್ರದಾಯಗಳನ್ನು ಮುನ್ನಡೆಸುತ್ತಿರುವುದು ಭಾರತೀಯ ಆಧ್ಯಾತ್ಮಿಕತೆಯ ಶಕ್ತಿಯಾಗಿದೆ. ನಮ್ಮ ಪುರಾತನ ಆಚರಣೆ, ನಂಬಿಕೆ, ಸಂಸ್ಕೃತಿಗೆ ಧಕ್ಕೆಯಾಗಲು ಎಂದಿಗೂ ಬಿಡಬಾರದು ಎಂದು ಹಿರಿಯ ಗುರುಸ್ವಾಮಿ ರಾಘವ ಮಾಸ್ತರ್ ಬೆರಿಪದವು ಹೇಳಿದರು.
ಬಾಯಾರುಪದವು ಸಮೀಪದ ಕನಿಯಾಲದಲ್ಲಿ ಭಾನುವಾರ ಸಾಯಂಕಾಲ ನಡೆದ ಅಯ್ಯಪ್ಪ ನಾಮಜಪ ಯಜ್ಞದ ಸಮಾರೋಪ ಕಾರ್ಯಕ್ರಮವನ್ನು ಅಯ್ಯಪ್ಪ ಭಾವಚಿತ್ರಕ್ಕೆ ಆರತಿ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನೂರಾರು ವರ್ಷಗಳ ಶಬರಿಮಲೆ ಆಚರಣೆ ನಂಬಿಕೆಗಳಿಗೆ ಕೊಡಲಿಯೇಟು ನೀಡಿ, ಅಪಚಾರ ಎಸಗುವ ಕಾರ್ಯ ಕುಟಿಲ ರಾಜಕೀಯ ತಂತ್ರದ ಮೂಲಕ ನಡೆಯುತ್ತಿದೆ. ಈ ಸಂದರ್ಭ ನಿರೀಶ್ವರವಾದಕ್ಕೆ ಎಡೆಮಾಡಿಕೊಡದೆ ಆಸ್ತಿಕತೆಯ ಶಕ್ತಿಯನ್ನು ಪ್ರದಶರ್ಿಸಬೇಕಾಗಿದೆ ಎಂದರು.
ಪ್ರಸ್ತುತ ದೇವರನಾಡಿನಲ್ಲಿ ಅಯ್ಯಪ್ಪನ ನಾಮಜಪ ಸ್ಮರಣೆಯಿಂದ ಧರ್ಮ ರಕ್ಷಣೆಯ ಕಾರ್ಯಕ್ಕೆ ಹೆಚ್ಚಿನ ಬಲ ದೊರೆತಿದೆ ಎಂದರು. ಬಳುವಳಿಯಾಗಿ ಬಂದ ಸತ್ ಸಂಪ್ರದಾಯಗಳಲ್ಲಿ ಒಂದು ಶಬರಿಮಲೆಯ ವಿಶೇಷ ಸಂಪ್ರದಾಯ. ಕಾನನವಾಸ ಶಬರಿಮಲೆ ಅಯ್ಯಪ್ಪ ಸನ್ನಿಧಿಗೆ ಅನಾದಿ ಕಾಲದಿಂದ ಸ್ತ್ರೀ ಪ್ರವೇಶ ನಿಶಿದ್ಧವಾಗಿತ್ತು. 10 ವರ್ಷದೊಳಗಿನ ಹೆಣ್ಣು ಮಕ್ಕಳು ಸಹಿತ 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಶಬರಿಮಲೆ ಪ್ರವೇಶದ ಅವಕಾಶವಿತ್ತು. ಅನನ್ಯ ಸಂಸ್ಕೃತಿಗೆ ಹಲವು ಐತಿಹ್ಯ ಆಧಾರಗಳಿವೆ. ನಿರೀಶ್ವರವಾದಿಗಳ ಒಳ ಸಂಚಿನ ಮೂಲಕ ಶಬರಿಮಲೆ ಆಚಾರ, ವಿಚಾರಕ್ಕೆ ಧಕ್ಕೆ ತರುವ ಕೆಲಸವಾಗುತ್ತಿದೆ ಎಂದರು. ದಶಕಗಳಷ್ಟು ಹಳೆ ವಿವಾದವು ಹಲವು ವರ್ಷಗಳ ಹಿಂದೆ ಕಾನೂನು ಮೆಟ್ಟಿಲೇರಿತ್ತು, ಶಬರಿಮಲೆ ಮುಕ್ತ ಸ್ತ್ರೀ ಪ್ರವೇಶದ ಒಳಸಂಚಿನಲ್ಲಿ ಪ್ರಸ್ತುತ ಕೇರಳ ಸರಕಾರವು ಮೊದಲ ಅಪರಾಧಿ ಎಂದರು.
ರಾಜಕೀಯ ಹುನ್ನಾರ ಪಿತೂರಿಯ ಮೂಲಕ ಶತಮಾನಗಳ ಹಳೆ ಆಚರಣೆಗಳಿಗೆ ತಿಲಾಂಜಲಿ ಇಡುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದ್ದು, ಇದನ್ನು ಪ್ರಭಲವಾಗಿ ಖಂಡಿಸಬೇಕು. ಭಕ್ತರಿಂದಷ್ಟೆ ಶಬರಿಮಲೆ ಆಚಾರ, ವಿಚಾರಗಳ ರಕ್ಷಣೆ ಸಾಧ್ಯವಿದೆ. ಅಯ್ಯಪ್ಪ ಸ್ವಾಮಿ ಅಚಲ ಭಕ್ತಿಯ ಸಂಕೇತವಾಗಿದ್ದು, ಸ್ತ್ರೀ ಸಮಾನತೆಯ ಹೆಸರಲ್ಲಿ ಆಚರಣೆಗಳ ಸಂಹಾರ ಸಲ್ಲ ಎಂದು ಅವರು ತಿಳಿಸಿದರು.
ವಿಶ್ವ ಹಿಂದೂ ಪರಿಷದ್ ಮಾತೃಮಂಡಳಿ ಮಂಗಳೂರು ಗ್ರಾಮಾಂತರ ಅಧ್ಯಕ್ಷೆ ಮೀರಾ ಟೀಚರ್ ಧಾಮರ್ಿಕ ಉಪನ್ಯಾಸ ನೀಡಿ- ವಿಚಾರ ಮತ್ತು ಯುಕ್ತಿವಾದದ ಹೆಸರಲ್ಲಿ ಸಹಸ್ರಾರು ವರ್ಷಗಳ ಧಾಮರ್ಿಕ ಆಚರಣೆಗಳಿಗೆ ಚ್ಯುತಿ ಬರುವಂತಾಗಿದೆ. ಮಹಿಳಾ ಸ್ವಾತಂತ್ರ್ಯ, ಸ್ತ್ರೀ ಸಮಾನತೆ ಹೆಸರಲ್ಲಿ ಆಚಾರಗಳಿಗೆ ಧಕ್ಕೆ ಒಡ್ಡುವ ಕಾರ್ಯ ಅಕ್ಷಮ್ಯ ಅಪರಾಧವಾಗಿದೆ ಎಂದರು. ಹಿಂದೂ ಧರ್ಮ ಭಾವನೆಗಳಿಗೆ ಧಕ್ಕೆ ಬಂದಲ್ಲಿ ಸಮಾಜವು ಎಂದೆಂದಿಗೂ ಒಂದಾಗಿ ಹೋರಾಡಲಿದೆ ಎಂದರು.
ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸುದೆಂಬಳ ಶ್ರೀ ದುಗರ್ಾಪರಮೇಶ್ವರಿ ಭಜನಾ ಮಂದಿರದಿಂದ ಕನಿಯಾಲ ದುಗರ್ಾಪರಮೇಶ್ವರಿ ಭಜನಾ ಮಂದಿರ ಪರಿಸರದವರೆಗೆ ಅಯ್ಯಪ್ಪ ಭಕ್ತರಿಂದ ನಾಮಜಪ ಯಾತ್ರೆ ನಡೆಯಿತು. ಕಾರ್ಯಕ್ರಮದಲ್ಲಿ ಗುರುಸ್ವಾಮಿ ಚಂದ್ರಶೇಖರ್ ಚೇರಾಲು, ಶ್ರೀಧರ ಗುರುಸ್ವಾಮಿ, ಕೆ. ಸಂಜೀವ ಗುರುಸ್ವಾಮಿ ಭಾಗವಹಿಸಿದ್ದರು. ಮಹಾಬಲ ಪೂಜಾರಿ ಸುದೆಂಬಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೂವೆತ್ತೋಡಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಗೋವಿಂದ ಭಟ್ ಕಾರ್ಯಕ್ರಮ ನಿರೂಪಿಸಿದರು.
ಅಯ್ಯಪ್ಪ ನಾಮಜಪ ಯಾತ್ರೆಯಲ್ಲಿ ಭಾಗವಹಿಸಿದ ಎಲ್ಲ ಭಕ್ತರಿಗೆ ಪಾನೀಯ ಮತ್ತು ಲಘು ಉಪಹಾರದ ವ್ಯವಸ್ಥೆ ಮಾಡಲಾಯಿತು.