ವಿದ್ಯಾರಂಗದ ಯೋಜನಾನುಷ್ಠಾನಗಳು ಮಾದರಿ-ಭಾರತಿ ಜೆ.ಶೆಟಿ
ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯ ಸೃಜನೋತ್ಸವ ಉದ್ಘಾಟನೆ
ಉಪ್ಪಳ: ವಿದ್ಯಾಥರ್ಿಗಳ ಸರ್ವತೋಮುಖ ಶ್ರೇಯಸ್ಸಿಗೆ ಶಿಕ್ಷಣ ವ್ಯವಸ್ಥೆ ತೆರೆದುಕೊಂಡಾಗ ವಿದ್ಯಾಭ್ಯಾಸದ ನೈಜ ಅರ್ಥ ಸಾಕಾರಗೊಳ್ಳಲು ಸಾಧ್ಯ. ಭವಿಷ್ಯದ ಭದ್ರ ಸಮಾಜದ ನೆಲೆಗಟ್ಟಿಗೆ ಯುವ ಮನಸ್ಸುಗಳನ್ನು ಸಕಾರಾತ್ಮಕತೆಯೆಡೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ನಿರಂತರ ಕಾರ್ಯಯೋಜನೆಗಳು ಸ್ತುತ್ಯರ್ಹವಾದುದು ಎಂದು ಪೈವಳಿಕೆ ಗ್ರಾ.ಪಂ. ಅಧ್ಯಕ್ಷೆ ಭಾರತೀ ಜೆ.ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ನೇತೃತ್ವದಲ್ಲಿ ಸೋಮವಾರ ಕಯ್ಯಾರು ಡೋನ್ ಬೋಸ್ಕೋ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿದ್ಯಾರಂಗ ಸಾಹಿತ್ಯೋತ್ಸವ -ಸೃಜನೋತ್ಸವ 2018-19 ಕಾಯರ್ಾಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಕ್ತಿ ಶಕ್ತಿಯಾಗಿ ರೂಪುಗೊಳ್ಳುವಲ್ಲಿ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬೆಳೆಯುವುದು ಪ್ರಧಾನ ಪಾತ್ರವಹಿಸುತ್ತದೆ. ಸಾಹಿತ್ಯ, ಕಲೆಗಳಿಂದ ಮನಸ್ಸು-ಬುದ್ದಿಗಳು ಸಕಾರಾತ್ಮಕವಾಗಿ ಒಡಕಿಲ್ಲದೆ ಸಮಾಜವನ್ನು ಮುನ್ನಡೆಸುವಲ್ಲಿ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು. ವಿದ್ಯಾಥರ್ಿಗಳ ಸೃಜನಾತ್ಮಕತೆಗೆ ಪ್ರೋತ್ಸಾಹ ನೀಡುವ, ಅಗತ್ಯದ ನಿದರ್ೇಶನಗಳನ್ನು ನೀಡುವ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಚಟುವಟಿಕೆಗಳು ಇನ್ನಷ್ಟು ವಿಸ್ತಾರಗೊಳ್ಳಲಿ ಎಂದು ಅವರು ಈ ಸಂದರ್ಭ ಹಾರೈಸಿದರು.
ಪೈವಳಿಕೆ ಗ್ರಾ.ಪಂ. ಸದಸ್ಯೆ ರಾಜೀವಿ ಪಿ.ರೈ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಪತ್ರಕರ್ತ, ಸಾಹಿತಿ ಪುರುಷೋತ್ತಮ ಭಟ್ ಕೆ. ಅವರು, ರಾಷ್ಟ್ರಾದ್ಯಂತ ಇಂದು ಅಸಮತೋಲನಕ್ಕೆ ಕಾರಣವಾಗಿರುವ ಸಾಮಾಜಿಕ, ಧಾಮರ್ಿಕ, ರಾಜಕೀಯ ಗೊಂದಲಗಳಿಂದ ಜನಸಾಮಾನ್ಯರು ಹೈರಾಣರಾಗುತ್ತಿದ್ದಾರೆ. ಆದರೆ ಜನರ ನೋವು ನಲಿವುಗಳಿಗೆ ಧ್ವನಿಯಾಗುವ ಶಕ್ತಿ ಕಲೆ-ಕಲಾವಿದರು, ಕವಿ-ಸಾಹಿತ್ಯಗಳಿಂದ ಮಾತ್ರ ಸಾಧ್ಯವಿದೆ ಎಂದು ತಿಳಿಸಿದರು. ಕವಿ-ಕಲಾವಿದರು ಸಮಾಜವನ್ನು ಚಿಕಿತ್ಸಕ ಮನೋಭಾವದಿಂದ ಗುರುತಿಸುವ ಮೂಲಕ ಆಗಬಹುದಾದ ಪ್ರಮಾದಗಳನ್ನು ಮೊದಲೇ ಗುರುತಿಸಿ ಪರಿಹಾರ ರೂಪದಲ್ಲಿ ಭೌದ್ದಿಕ ಅರಿವನ್ನು ಮೂಡಿಸಬಲ್ಲವನಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ವಿದ್ಯಾಥರ್ಿಯೊಳಗೂ ಸುಪ್ತವಾಗಿ ಹುದುಗಿರುವ ಸೃಜನಾತ್ಮಕತೆಯನ್ನು ಬೆಳೆಸುವ ಪ್ರಯತ್ನಗಳಾಗಬೇಕು. ಋಣಾತ್ಮಕತೆಯನ್ನು ಮರೆತು ಧನಾತ್ಮಕತೆಯತ್ತ ಮನಸ್ಸುಗಳನ್ನು ಬೆಸೆಯುವ ಶಕ್ತಿ ಸೃಜನಾತ್ಮಕತೆಯ ವಿಶೇಷತೆಯಾಗಿದೆ ಎಂದು ಅವರು ತಿಳಿಸಿದರು. ವಿದ್ಯಾರಂಗ ಕಲಾಸಾಹಿತ್ಯ ವೇದಿಕೆ ಶಿಕ್ಷಣದ ಮೌಲ್ಯವನ್ನು ವಿಶಾಲಗೊಳಿಸುವುದರ ಜೊತೆಗೆ ಪರಿಪೂರ್ಣ ವ್ಯಕ್ತಿ ನಿಮರ್ಾಣದ ಶಿಲ್ಪಿಯಂತೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಈ ಸಂದರ್ಭ ಶ್ಲಾಘಿಸಿದರು.
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ಎ.ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಶೈಕ್ಷಣಿಕ ಗುಣಮಟ್ಟವೆಂಬುದು ಕೇವಲ ಪಠ್ಯದ ಬೋಧನೆ ಮಾತ್ರವಾಗಿರದೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಅಗತ್ಯದ ನಿದರ್ೇಶನಗಳೊಂದಿಗೆ ಮುನ್ನಡೆಯುವುದಾಗಿದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಜೋನ್ ಡಿಸೋಜಾ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸ್ಟೀಫನ್ ಪ್ರದೀಪ್ ಕ್ರಾಸ್ತಾ, ಮಾತೃಮಂಡಳಿ ಅಧ್ಯಕ್ಷೆ ವಿಲ್ಮಾ ಡಿಸೋಜಾ, ತರಬೇತುದಾರರಾದ ಡಾ.ಸುರೇಶ್ ನೆಗಳಗುಳಿ, ಕಾಸರಗೋಡು ಡಾ.ಅಶೋಕ್ ಕುಮಾರ್, ವೀರೇಶ್ವರ ಮಾಸ್ತರ್, ವಸಂತ ಕುಮಾರ್ ಮಾಸ್ತರ್, ಕೃಷ್ಣ ಶಮರ್ಾ, ಶೇಖರ ಶೆಟ್ಟಿ ಮಾಸ್ತರ್ ಕುಳ್ಯಾರ್ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಲೂವಿಸ್ ಮೊಂತೇರೋ ಸ್ವಾಗತಿಸಿ, ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಉಪಜಿಲ್ಲಾ ಸಂಚಾಲಕ ಹರೀಶ್ ಸುಲಾಯ ಒಡ್ಡಂಬೆಟ್ಟು ವಂದಿಸಿದರು. ಶಿಕ್ಷಕ ಸಿರಿಲ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ದಿನಪೂತರ್ಿ ಉಪಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ 300 ರಕ್ಕಿಂತಲೂ ಮಿಕ್ಕಿದ ವಿದ್ಯಾಥರ್ಿಗಳಿಗೆ ವೈವಿಧ್ಯಮಯ ಸೃಜನಶೀಲಾ ತರಬೇತಿ ಮತ್ತು ಸ್ಪಧರ್ೆಗಳು ನಡೆಯಿತು. ವಿವಿಧ ವಿಷಯ ಪರಿಣಿತರಾದ ಡಾ.ಸುರೇಶ್ ನೆಗಳಗುಳಿ(ಕವಿತಾ ರಚನೆ). ಕಾಸರಗೋಡು ಡಾ.ಅಶೋಕ್ ಕುಮಾರ್(ಕಥಾ ರಚನೆ), ಶೇಖರ ಶೆಟ್ಟಿ ಕುಳ್ಯಾರ್(ಕಾವ್ಯಾಲಾಪನೆ), ವಸಂತಕುಮಾರ್(ಅಭಿನಯ), ವೀರೇಶ್ವರ ಮಾಸ್ತರ್(ಜಾನಪದ), ಕೃಷ್ಣ ಶಮರ್ಾ(ಚಿತ್ರಕಲೆ) ಕಮ್ಮಟಗಳನ್ನು ಸಮರ್ಪಕವಾಗಿ ಮುನ್ನಡೆಸಿದರು.ಅಪರಾಹ್ನ ಸ್ಪಧರ್ೆಗಳು ನಡೆಯಿತು. ಸಂಜೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆಯೊಂದಿಗೆ ಸಮಾರಂಭ ಸಂಪನ್ನಗೊಂಡಿತು.