'ಸೂರ್ಯಕಾಂತಿ' ಸಮಗ್ರ ಸಾಹಿತ್ಯ ಕೃತಿ ವಿಮಶರ್ೆ
ಒಡ್ಡಂಬೆಟ್ಟು ಕೃತಿಗಳು ಸಾರ್ವಕಾಲಿಕ ಸತ್ಯಗಳು - ವಿರಾಜ್ ಅಡೂರು
ಕಾಸರಗೋಡು : ಹನಿಗವನಗಳು ವಾಮನ ರೂಪಿಯಾದರೂ, ಭಾವದಲ್ಲಿ ವಿರಾಟ್ ಸ್ವರೂಪಿ. ಕವಿ ರವಿಶಂಕರ ಒಡ್ಡಂಬೆಟ್ಟು ಅವರ ಸಾಹಿತ್ಯ ಕೃತಿಗಳಲ್ಲಿ ಈ ವಿರಾಟ್ ಸ್ವರೂಪ ಸ್ಪಷ್ಟವಾಗಿದೆ. ಆಕರ್ಷಕ ಕಲ್ಪನಾ ಶಕ್ತಿ, ಸಹಜ ಪ್ರಾಸಬದ್ಧತೆ, ಪದಗಳ ಜತೆಗಿನ ಆಟ ಹಾಗೂ ಚಿಂತನಾತ್ಮಕ ದೃಷ್ಟಿಯಿಂದ ಸೂರ್ಯಕಾಂತಿ ಸಮಗ್ರ ಸಾಹಿತ್ಯ ಕೃತಿಯ ಶಕ್ತಿ ಪ್ರಬಲವಾಗಿದೆ ಹಾಗೂ ಬಳಕೆಯಾದ ಶಬ್ಧಗಳು ಅತ್ಯಂತ ಹರಿತವಾಗಿವೆ' ಎಂದು ಪತ್ರಕರ್ತ, ಸಾಹಿತಿ ವಿರಾಜ್ ಅಡೂರು ಹೇಳಿದರು.
ಅವರು ಭಾನುವಾರ ಪೆರ್ಲದ ಸಾಹಿತಿ ಹರೀಶ್ ಪೆರ್ಲ ಅವರ ಮನೆಯಲ್ಲಿ 'ಈ ಹೊತ್ತಿಗೆ ಈ ಹೊತ್ತಗೆ' ಸರಣಿಯ 2ನೇ ಕಾರ್ಯಕ್ರಮದಲ್ಲಿ ಕವಿ ರವಿಶಂಕರ ಒಡ್ಡಂಬೆಟ್ಟು ಅವರ 'ಸೂರ್ಯಕಾಂತಿ' ಸಮಗ್ರ ಸಾಹಿತ್ಯ ಕೃತಿಯ ವಿಮಶರ್ೆ ಮಾಡಿ ಮಾತನಾಡಿದರು.
ಒಡ್ಡಂಬೆಟ್ಟು ಅವರ ಸಮಗ್ರ ಸಾಹಿತ್ಯ ಕೃತಿಯಲ್ಲಿ ಕಾವ್ಯ, ಅಂಕಣ ಬರಹ, ವಿಡಂಬನೆ, ಹರಟೆ, ಪ್ರಬಂಧಗಳು, ಕಥನಕವನಗಳು ಮುದ್ರಿತವಾಗಿವೆ. ಇವೆಲ್ಲವೂ ಕೂಡಾ ಒತ್ತಡವಿಲ್ಲದ ಸಹಜ ಪ್ರಾಸಬದ್ಧತೆ, ಸರಳ ಶಬ್ದಗಳ ಪ್ರಯೋಗಗಳಿಂದ ಕೂಡಿದೆ. ಇದನ್ನು ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಸುಲಭವಾಗಿ ಓದಿ ಅರ್ಥ ಮಾಡಲು ಸಾಧ್ಯವಿದೆ. ಸಾತ್ವಿಕ ಕವಿ ಒಡ್ಡಂಬೆಟ್ಟು ಅವರ ರಚನೆಗಳು ಮನಸಿಗೆ ನೋವಾಗದ ರೀತಿಯಲ್ಲಿ ವಿನೋದ, ವಿಡಂಬನೆ, ವ್ಯಂಗ್ಯ ಹಾಗೂ ಸದುದ್ದೇಶದ ಸಂದೇಶಗಳನ್ನು ಸಮಾಜಕ್ಕೆ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಅವರು ಮಾತನಾಡಿ, ರವಿಶಂಕರ್ ಒಡ್ಡಂಬೆಟ್ಟು ಅವರು ಸ್ವಾಭಿಮಾನದ ಪ್ರತೀಕದಂತೆ ಬದುಕಿದವರು. ಅವರದ್ದು ಸಮಾಜಮುಖಿ ಮನೋಭಾವ. ಸಾಮಾಜಿಕ ಅವ್ಯವಸ್ಥೆಗಳ ಬಗ್ಗೆ ಅವರಿಗೆ ಬೇಸರವಿತ್ತು. ಅದನ್ನು ಸರಿಪಡಿಸುವ ಬಗೆಗಳ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಅವರ ಸಾಮಾಜಿಕ ಕಾಳಜಿ ಯಾವತ್ತಿಗೂ ಕೂಡಾ ಅನುಕರಣೀಯ' ಎಂದು ತಿಳಿಸಿದರು.
ಸಭೆಯಲ್ಲಿ ಸರಣಿ ಯೋಜನೆಯ ಸಂಚಾಲಕ, ಪ್ರಾಧ್ಯಾಪಕ ಟಿ ಎ ಎನ್ ಖಂಡಿಗೆ, ಕವಯಿತ್ರಿಯರಾದ ಅಕ್ಷತಾ ರಾಜ್ ಪೆರ್ಲ, ಸನ್ನಿಧಿ ಟಿ ರೈ, ರಾಜೇಶ್ವರಿ, ಕವಿಗಳಾದ ಆನಂದ ರೈ ಅಡ್ಕಸ್ಥಳ, ಸುಭಾಷ್ ಪೆರ್ಲ, ಶಿಕ್ಷಕಿ ಕವಿತಾ ಕೂಡ್ಲು ಮೊದಲಾದವರು ಭಾಗವಹಿಸಿದ್ದರು. ಆದ್ಯಂತ್ ಅಡೂರು ದೇಶಭಕ್ತಿಗೀತೆ ಹಾಡಿದರು. ಸಾಹಿತಿ ಹರೀಶ್ ಪೆರ್ಲ ಸ್ವಾಗತಿಸಿ, ಟಿ ಎ ಎನ್ ಖಂಡಿಗೆ ವಂದಿಸಿದರು. ಅನೇಕ ಮಂದಿ ಸಾಹಿತ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.