ಕುಂಬಳೆ: ಹಿಂದೂ ಐಕ್ಯವೇದಿ ರಾಜ್ಯ ಅಧ್ಯಕ್ಷೆ ಶಶಿಕಲಾ ಟೀಚರ್ ಹಾಗು ಹಿಂದೂ ಸಂಘಟನೆಯ ನೇತಾರರನ್ನು ಬಂಧಿಸಿದ ಕೇರಳ ಸರಕಾರದ ವಿರುದ್ಧ ಕುಂಬ್ಳೆಯಲ್ಲಿ ಹಿಂದೂ ಐಕ್ಯವೇದಿ ಹಾಗು ಸಂಘ ಪರಿವಾರದಿಂದ ಶನಿವಾರ ಪ್ರತಿಭಟನಾ ಮೆರವಣಿಕೆ ನಡೆಯಿತು.
ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಕುಂಬಳೆ ಪಂಚಾಯತಿ ಬಿಜೆಪಿ ಸಮಿತಿ ಅಧ್ಯಕ್ಷ ಕೆ.ಶಂಕರ್ ಆಳ್ವ ಅವರು ಅಧ್ಯಕ್ಷತೆ ವಹಿಸಿದರು.ಬಿಜೆಪಿ ಮಂಡಲ ಪ್ರಧಾನ ಕಾರ್ಯದಶರ್ಿ ಮುರಳೀಧರ ಯಾದವ್ ನಾಯ್ಕಾಪು ಅವರು ಮಾತನಾಡಿ, ಮದ್ಯವ್ಯಸನಿಯಾದ ತೃಪ್ತಿ ದೇಸಾಯಿಗೆ ಅತ್ಯುಚ್ಚ ರಕ್ಷಣೆನೀಡಿ, ವ್ರತವನ್ನು ಆಚರಿಸಿ ದೀಕ್ಷೆ ತೊಟ್ಟು ಶಬರಿಮಲೆಗೆ ಹೊರಟ ಶಶಿಕಲಾ ಟೀಟರ್ ಅವರನ್ನು ಬಂಧಿಸಿದ ಕೇರಳ ಸರಕಾರದ ಕ್ರಮ ಖಂಡನೀಯ. ಭಕ್ತರಿಗೆ ರಕ್ಷಣೆ ಕೊಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆಯೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಿಂದೂ ಐಕ್ಯವೇದಿ ನೇತಾರರಾದ ವಿನಯ್ ಆಳ್ವ,ಸಂದೀಪ್ ಕಾಲರ್ೆ,ಸುಮಿತ್ರ ,ಸಂಘ ಪರಿವಾರದ ದಿನೇಶ್,ಶ್ರೀಧರ ಗುರು ಸ್ವಾಮಿ, ಜಗನ್ನಾಥ ಶೆಟ್ಟಿ, ಜನಪ್ರತಿನಿಧಿಗಳಾದ ಕೆ.ರಮೇಶ್ ಭಟ್,ಸುಧಾಕರ ಕಾಮತ್, ಹರೀಶ್ ಗಟ್ಟಿ, ಸುಜಿತ್ ರೈ, ಪುಷ್ಪಲತಾ ಹಾಗು ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪ ಭಕ್ತರು, ಮಹಿಳೆಯರು ಭಾಗವಹಿಸಿದರು.ಹಿಂದೂ ಐಕ್ಯವೇದಿ ನೇತಾರ ಸುರೇಶ ಶಾಂತಿಪಳ್ಳ ಸ್ವಾಗತಿಸಿ, ವಸಂತಿ ವಂದಿಸಿದರು.





