ಮುಳ್ಳೇರಿಯ: ಕೇರಳ ಸ್ಟೇಟ್ ಸವರ್ೀಸ್ ಪೆನ್ಶನರ್ಸ್ ಯೂನಿಯನ್(ಕೆಎಸ್ಎಸ್ಪಿಯು) ದೇಲಂಪಾಡಿ ಘಟಕದ ಕುಟುಂಬ ಸಂಗಮ ಕಾರ್ಯಕ್ರಮ ಇತ್ತೀಚೆಗೆ ಅಡೂರಿನಲ್ಲಿರುವ ದೇಲಂಪಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
ಘಟಕದ ಪಂಚಾಯತು ಘಟಕಾಧ್ಯಕ್ಷ ಎಂ.ಗಂಗಾಧರನ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ದೇಲಂಪಾಡಿ ಗ್ರಾ.ಪಂ. ಅಧ್ಯಕ್ಷ ಎ.ಮುಸ್ತಫ ಹಾಜಿ ಉದ್ಘಾಟಿಸಿದರು. ಯೂನಿಯನ್ ಕಾರಡ್ಕ ಬ್ಲಾಕ್ ಕಾರ್ಯದಶರ್ಿ ಇ.ಸಿ.ಕಣ್ಣನ್, ಉಪಾಧ್ಯಕ್ಷ ದಾಮೋದರ ಮಾಸ್ತರ್, ಜಿಲ್ಲಾ ಕೌನ್ಸಿಲರ್ ಡಿ.ಕುಂಞಿಂಬು ಉಪಸ್ಥಿತರಿದ್ದು ಶುಭಹಾರೈಸಿದರು. ಸಮಾರಂಭದಲ್ಲಿ ಸಂಘಟನೆ ಜಿಲ್ಲಾ ಜೊತೆ ಕಾರ್ಯದಶರ್ಿ ಪ್ರಭಾಕರ ಪೊದುವಾಳ್, ಸದಸ್ಯ ಎ.ನಾರಾಯಣನ್ ನಾಯರ್, ಬ್ಲಾಕ್ ಅಧ್ಯಕ್ಷ ಕೆ.ವಿ.ನಾರಾಯಣನ್ ಅವರನ್ನು ಹಿರಿಯ ನಾಗರಿಕ ನೆಲೆಯಲ್ಲಿ ಗೌರವಿಸಲಾಯಿತು.
ಪಂಜಿಕಲ್ಲು ಶಾಲಾ ಮುಖ್ಯೋಪಾಧ್ಯಾಯ ವಿಷ್ಣುಪಾಲ ಬಿ ಯೋಗ ಮತ್ತು ಆರೋಗ್ಯದ ಬಗ್ಗೆ ತರಗತಿ ನಡೆಸಿದರು. ಶ್ರೀಕೃಷ್ಣ ಕೆ ಸ್ವಾಗತಿಸಿ, ಪುತ್ತು ಗೌಡ ಪಿ ವಂದಿಸಿದರು.

