ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಬದಿಯಡ್ಕ ವಿದ್ಯಾಪೀಠದಲ್ಲಿ ಸಿಡಿಮದ್ದುಗಳ ಮುಂಜಾಗ್ರತಾ ಪ್ರಾತ್ಯಕ್ಷಿಕೆ
ಬದಿಯಡ್ಕ: ದೀಪಾವಳಿಯ ಸಂಭ್ರಮದ ಮಧ್ಯೆ ಪಟಾಕಿ ಸಿಡಿಸುವಾಗ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ಮಕ್ಕಳಿಗೆ ತಿಳಿ ಹೇಳುವ ಪ್ರಾತ್ಯಕ್ಷಿಯನ್ನು ಬದಿಯಡ್ಕ ಶ್ರೀ ಭಾರತೀವಿದ್ಯಾಪೀಠದಲ್ಲಿ ಗುರುವಾರ ಹಮ್ಮಿಕೊಳ್ಳಲಾಯಿತು. ವಿವಿಧ ರೀತಿಯ ಪಟಾಕಿಗಳನ್ನು ಪರಿಚಯಿಸುತ್ತಾ ಅವುಗಳಲ್ಲಿರುವ ವಿಶೇಷತೆಯನ್ನು ಮನಗಾಣಿಸಲಾಯಿತು. ಪಟಾಕಿಗೆ ಬೆಂಕಿ ಹಚ್ಚುವಾಗ ಅದರ ಒಳಗಿರುವ ಬತ್ತಿಯ ಉದ್ದ, ಬತ್ತಿಯ ಸುತ್ತಲೂ ಆವರಿಸಲ್ಪಟ್ಟ ಆರೋಗ್ಯಕ್ಕೆ ಹಾನಿಕರವಾದ ವಸ್ತುಗಳ ಬಗ್ಗೆ ತಿಳಿಸಲಾಯಿತು.
ಇದೇ ಸಂದರ್ಭದಲ್ಲಿ ಮಕ್ಕಳೇ ಮುತುವಜರ್ಿ ವಹಿಸಿ ತಯಾರಿಸಿದ ಮನೆಯಲ್ಲಿ ಅಧ್ಯಾಪಕ ವೃಂದವು ಜೊತೆಗೂಡಿ ದೀಪ ಉರಿಸಿ ದೀಪಾವಳಿ ಹಬ್ಬದ ಹಾಡುಗಳನ್ನು ಹಾಡುತ್ತಾ ಸಂಭ್ರಮಿಸಿದರು. ಮಧ್ಯಾಹ್ನ ಭೋಜನದೊಂದಿಗೆ ಮಕ್ಕಳಿಗೆ ಪಾಯಸದೂಟವನ್ನು ಉಣಬಡಿಸಲಾಯಿತು.




