ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ನಾರಾಯಣಮಂಗಲದಲ್ಲಿ ದೀಪಾವಳಿ ಆಚರಣೆ
ಕುಂಬಳೆ: ದೀಪದ ಬೆಳಕು ಪ್ರಜ್ವಲಿಸುವಂತೆ ನಾವೂ ಜೀವನದಲ್ಲಿ ಕೆಟ್ಟದ್ದನ್ನು ಮರೆತು ಒಳ್ಳೆಯದನ್ನು ಸ್ವೀಕರಿಸಿ ಜ್ಞಾನಸಂಪನ್ನರಾಗಬೇಕು. ದೀಪಾವಳಿಯ ಈ ಶುಭಸಂದರ್ಭದಲ್ಲಿ ಎಲ್ಲೆಡೆಯಲ್ಲೂ ನಮಗೆ ಗೋಚರವಾಗುವುದು ಉರಿಯುತ್ತಿರುವ ದೀಪವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ಪ್ರಾಧಾನ್ಯತೆ ಕಲ್ಪಿಸಲಾಗಿದೆ ಎಂದು ಬ್ಲಾಕ್ ಪಂಚಾಯತ್ ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ ಹೇಳಿದರು.
ಅವರು ನಾರಾಯಣ ಮಂಗಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ನಡೆದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಐತ್ತಪ್ಪ ನಾರಾಯಣಮಂಗಲ ಶುಭಾಶಂಸನೆಗೈದರು. ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಕಬೆಕ್ಕೋಡು ಸ್ವಾಗತಿಸಿ, ಅಧ್ಯಾಪಿಕೆ ಮೆಬೆಲ್ ಡಿಸೋಜ ವಂದಿಸಿದರು. ಬಳಿಕ ಮಕ್ಕಳ ಜೊತೆ ಅತಿಥಿಗಳೂ ಹಣತೆಗಳನ್ನು ಹಚ್ಚಿ ದೀಪಾವಳಿಯ ಸಂಭ್ರಮದಲ್ಲಿ ಪಾಲ್ಗೊಂಡರು.




