ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 11, 2018
ಕಲೋತ್ಸವದಲ್ಲಿ ಕನ್ನಡ ಅವಗಣನೆ-ಕನ್ನಡ ಮಾಧ್ಯಮ ಅಧ್ಯಾಪಕ ಸಂಘದಿಂದ ಖಂಡನೆ
ಬದಿಯಡ್ಕ: ಕಾಸರೋಡು ಜಿಲ್ಲಾ ಕಲೋತ್ಸವದಲ್ಲಿ ಎಲ್ಲಾ ವರ್ಷವೂ ನಡೆಯುತ್ತಿದ್ದ ಕನ್ನಡ ವಿದ್ಯಾಥರ್ಿಗಳಿಗಿರುವ ಕಥಾರಚನೆ, ಪ್ರಬಂಧ ರಚನೆ, ಭಾಷಣ ಸ್ಪಥರ್ೆಗಳನ್ನು ಈ ವರ್ಷ ನಡೆಸದೆ ಇರುವ ಜಿಲ್ಲಾ ಶಿಕ್ಷಣಾಧಿಕರಿಗಳ ಕ್ರಮವನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಭೆಯಲ್ಲಿ ಖಂಡಿಸಲಾಗಿದೆ.
ಕೇರಳದಲ್ಲಿ ಪ್ರಳಯ ಬಂದಿದೆ ಎಂದು ಕನ್ನಡ ವಿದ್ಯಾಥರ್ಿಗಳಿರುವ ಸ್ಪಧರ್ೆಯನ್ನು ನಡೆಸಲಾಗುತ್ತಿಲ್ಲ ಎಂದು ಅಧಿಕಾರಿಯವರು ವಿಚಾರಿಸಿದಾಗ ತಿಳಿಸಿರುತ್ತಾರೆ. ಇದೇ ಸಂದರ್ಭದಲ್ಲಿ ಮಲಯಾಳಿ ವಿದ್ಯಾಥರ್ಿಗಳಿರುವ ಯಾವದೇ ಸ್ಪಧರ್ೆಯನ್ನು ರದ್ದು ಪಡಿಸಿಲ್ಲ ಎಂಬುದು ಗಮನಾರ್ಹವಾದ ಅಂಶವಾಗಿದೆ. ಕನ್ನಡ ವಿದ್ಯಾಥರ್ಿಗಳ ವಿದ್ಯಾಥರ್ಿಗಳಿಗಿರುವ ಅವಕಾಶನ್ನು ಇಲ್ಲದಂತೆ ಮಾಡುವ ಜಿಲ್ಲಾ ಶಿಕ್ಷಣ ಉಪನಿದರ್ೇಶಕರು ( ಡಿ.ಡಿ.ಇ.) ದಸರಾ ನಾಡಹಬ್ಬವನ್ನು ಶಾಲೆಗಳಲ್ಲಿ ಆಚರಿಸಲು ಅಧಿಸೂಚನೆ ಹೊರಡಿಸಿ ಕೆಲವೇ ದಿನಗಳಲ್ಲಿ ನಾಡಹಬ್ಬವನ್ನು ಆಚರಿಸಬಾರದು ಎಂದು ಅಧಿಸೂಚನೆಯನ್ನು ಹೊರಡಿಸಿದ್ದರು.




