ದಾನಿಗಳ ನಿರೀಕ್ಷೆಯಲ್ಲಿ ಆಸ್ಪತ್ರೆಯಲ್ಲಿರುವ ಪಕ್ಕೀರ ಕುಂಜಾರು ನಿವೇದಿತಾದೊಂದಿಗೆ ಕೈಜೋಡಿಸಲು ಮನವಿ
0
ನವೆಂಬರ್ 11, 2018
ಬದಿಯಡ್ಕ: ಕೂಲಿ ಕೆಲಸ ಮಾಡುತ್ತಿದ್ದ ವೇಳೆ ಎಡವಿಬಿದ್ದು ಕುಂಜಾರು ಫಕ್ಕೀರ ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಆಥರ್ಿಕ ಸಂಕಷ್ಟವನ್ನು ಎದುರಿಸುತ್ತಿರುವ ಕುಟುಂಬಕ್ಕೆ ಈ ಘಟನೆಯಿಂದ ಜೀವನ ನಿರ್ವಹಣೆಗೆ ಕಷ್ಟಕರವಾಗಿದ್ದು ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
ಕಾಸರಗೋಡು ಜಿಲ್ಲೆಂಬದಿಯಡ್ಕ: ಕೂಲಿ ಕೆಲಸ ಮಾಡುತ್ತಿದ್ದ ವೇಳೆ ಎಡವಿಬಿದ್ದು ಕುಂಜಾರು ಫಕ್ಕೀರ ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಆಥರ್ಿಕ ಸಂಕಷ್ಟವನ್ನು ಎದುರಿಸುತ್ತಿರುವ ಕುಟುಂಬಕ್ಕೆ ಈ ಘಟನೆಯಿಂದ ಜೀವನ ನಿರ್ವಹಣೆಗೆ ಕಷ್ಟಕರವಾಗಿದ್ದು ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ.
ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮಪಂಚಾಯತ್ 16ನೇ ವಾಡರ್ು ಬಿಮರ್ಿನಡ್ಕದಲ್ಲಿ ವಾಸಿಸುತ್ತಿರುವ ಬೇಳ ಕುಂಜಾರು ಮಂಜಪ್ಪ ಮೂಲ್ಯರ ಪುತ್ರ ಫಕ್ಕೀರ (45)ಎಂಬವರು ತಿಂಗಳ ಹಿಂದೆ ಎಂದಿನಂತೆ ಕೂಲಿ ಕೆಲಸವನ್ನು ಮಾಡುತ್ತಿದ್ದ ವೇಳೆ ಎಡವಿಬಿದ್ದು ಕಾಲಿನ ತೊಡೆ0ು ಎಲುಬು ತುಂಡಾಗಿದೆ. ಅದನ್ನು ಆಪರೇಷನ್ ಮೂಲಕ ಸರಿಪಡಿಸಲಾಗಿದ್ದು ಈಗ ಅದೇ ಕಾಲಿಗೆ ಜೋಡಿಸಿದ `ಸ್ಟೀಲ್ ರೋಡ್' ಮುರಿದಿರುವುದರಿಂದ ಪುನಃ ಆಪರೇಶನ್ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಪತ್ನಿ ಕಲಾವತಿ ಹಾಗೂ ಬೇಳ ಶಾಲೆಯ 5ನೇ ತರಗತಿಯಲ್ಲಿ ಕಲಿಯುತ್ತಿರುವ ಪುತ್ರಿ ಜೊತೆಗೆ ಕುಟುಂಬ ನಿರ್ವಹಣೆಯೇ ಕಷ್ಟಕರವಾಗಿ ಪರಿಣಮಿಸಿರುವ ಸಂದರ್ಭದಲ್ಲಿ ಅಪರೇಶನ್ನ ವೆಚ್ಚವನ್ನು ಸರಿದೂಗಿಸಲು ಕಷ್ಟಕರವಾಗಿದೆ. ಒಂದು ಹೊತ್ತಿನ ಊಟ ಸಿಗಬೇಕಾದರೆ ದುಡಿದೇ ಆಗಬೇಕಿದೆ.
ಅಪರೇಶನ್ಗೆ ಅಂದಾಜು 60 ಸಾವಿರದಿಂದ 1 ಲಕ್ಷ ರೂ ತನಕ ವೆಚ್ಚ ತಗಲಬಹುದು ಹಾಗೂ ನಂತರ 2 ತಿಂಗಳ ವಿಶ್ರಾಂತಿಯ ಅಗತ್ಯವಿದೆ ಎಂದು ಅವರು ಈಗ ಚಿಕಿತ್ಸೆಯಲ್ಲಿರುವ ಮಂಗಳೂರಿನ ಎ.ಜೆ.ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆಂದು ಕಲಾವತಿ ಹೇಳುತ್ತಿದ್ದಾರೆ. ಸಹೃದಯಿ ದಾನಿಗಳು ಸಹಾಯವನ್ನು ನೀಡಬೇಕಾಗಿ ಕೇಳಿಕೊಳ್ಳಲಾಗಿದೆ. ದಾನಿಗಳು ಕಲಾವತಿ, ಕನರ್ಾಟಕ ಬ್ಯಾಂಕ್, ನೀಚರ್ಾಲು ಶಾಖೆ, ಖಾತೆ ನಂಬ್ರ : 5322500100927901, ಐಎಫ್ಎಸ್ಸಿ ಕೋಡ್ : ಕೆಎಆರ್ಬಿ0000532 ಹಣವನ್ನು ವಗರ್ಾಯಿಸಬೇಕಾಗಿ ಕೇಳಿಕೊಂಡಿದ್ದಾರೆ. ಸಂಪರ್ಕ : 9946419401. ನೀಚರ್ಾಲು ವ್ಯಾಪ್ತಿಯಲ್ಲಿ ಕಾಯರ್ಾಚರಿಸುತ್ತಿರುವ ನಿವೇದಿತಾ ಸೇವಾ ಮಿಶನ್ ವತಿಯಿಂದ ಆಥರ್ಿಕ ನಿಧಿ ಸಂಗ್ರಹಕ್ಕಾಗಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ದಾನಿಗಳು ಸಹಕಾರವನ್ನು ನೀಡಿ ಸಹಕರಿಸಬೇಕಾಗಿ ಕೇಳಿಕೊಂಡಿದ್ದಾರೆ.




