ಬರ್ಡು ಫೆಸ್ಟ್ -2018 ಕಿದೂರು ಪಕ್ಷಿಧಾಮ ಸೂಕ್ತ ರೀತಿಯಲ್ಲಿ ಅಭಿವೃದ್ಧಿ : ಜಿಲ್ಲಾಧಿಕಾರಿ
0
ನವೆಂಬರ್ 11, 2018
ಕುಂಬಳೆ: ಕಿದೂರಿನಲ್ಲಿ ನಡೆದ ಎರಡು ದಿನಗಳ ಬಡರ್್ ಫೆಸ್ಟ್-2018 ರಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಪಕ್ಷಿ ವೀಕ್ಷಕ ಮಂದಿಯ ಅನುಭವವನ್ನು ಪಡೆದರು.
ಕಿದೂರು ಭೂ ಪ್ರದೇಶವು ಹಲವು ಪ್ರಬೇ`ಧಗಳ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಕಲ್ಲು ಪಾರೆಯ ವಿಶಾಲ ಪ್ರದೇಶ, ಇಳಿಜಾರು ಕಾಡು ಪೊದೆಗಳಿಂದಾವೃತವಾದ ಪ್ರದೇಶ, ಗದ್ದೆ, ಕೃಷಿ ತೋಟ ಪ್ರದೇಶ ಸಹಿತ ನದಿ ತೀರ ಪ್ರದೇಶವನ್ನು ಹೊಂದಿರುವ ಕಿದೂರಿನ ಭೌಗೋಳಿಕ ವಿಶೇಷತೆ ಹೆಚ್ಚಿನ ಸಂಖ್ಯೆಯ ವಿವಿಧ ಜಾತಿ ಪ್ರಬೇಧದ ಪಕ್ಷಿಗಳಿಗೆ ಆಶ್ರಯತಾಣವಾಗಲು ಮೂಲ ಕಾರಣವಾಗಿದೆ. ಕಿದೂರು ಬಡರ್್ ಫೆಸ್ಟ್ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದ ಪಕ್ಷಿ ವೀಕ್ಷಕರಾದ ಪ್ರಶಾಂತ್ ಕೃಷ್ಣ, ಮ್ಯಾಕ್ಸಿಂ ರೋಡ್ರಿಗಸ್ ಕಿದೂರಿನಲ್ಲಿ ಮೂರು ವಿಧದ ಭೂ ಪ್ರದೇಶವಿದೆ. ಬಹಳ ಸಣ್ಣ ಪ್ರದೇಶದಲ್ಲಿ ಇಂತಹ ಪಕ್ಷಿ ವೈವಿಧ್ಯತೆಯನ್ನು ಕಾಣಲು ಇಲ್ಲಿನ ಭೌಗೋಳಿಕತೆ ಸಹಿತ ಪಕ್ಷಿಗಳ ಆಹಾರ, ಆವಾಸ ವಿಪುಲತೆಯೇ ಮೂಲ ಕಾರಣ ಎಂದರು.
ಡಿಆರ್ಡಿಒ ನಿವೃತ್ತ ಅಧಿಕಾರಿ ಬೆಂಗಳೂರಿನ ಹರಿಶ್ಚಂದ್ರ ತಮ್ಮ ಅನುಭವವನ್ನು ಹಂಚಿಕೊಂಡು ಹಲವು ವರ್ಷಗಳಿಂದ ತಾನು ಪಕ್ಷಿ ವೀಕ್ಷಣೆ ಮಾಡುತ್ತಿದ್ದು, ಕಿದೂರಿನಲ್ಲಿರುವ ಕೆಲ ಪಕ್ಷಿ ಪ್ರಬೇಧವು ಇತರೆಡೆಗಳಲ್ಲಿ ವಿರಳವಾಗಿದೆ. ಕೆಲ ಪ್ರಬೇಧ ಬೇರೆಲ್ಲೂ ಕಂಡು ಬರುವುದುದಿಲ್ಲ ಎಂದರು. ಪಕ್ಷಿಗಳು ಪ್ರಕೃತಿಯ ಆರೋಗ್ಯವನ್ನು ಸೂಚಿಸುತ್ತವೆ, ಹೆಚ್ಚು ಪಕ್ಷಿಗಳಿದ್ದ ಪ್ರದೇಶವು ಹೆಚ್ಚು ಆರೋಗ್ಯವಂತವಾಗಿದೆ ಎಂಬುದನ್ನು ಎಲ್ಲರೂ ಅಥರ್ೈಸಬೇಕಿದೆ ಎಂದರು. ದೇಶದಲ್ಲಿ ಪಕ್ಷಿ ವೀಕ್ಷಕರ ಸಂಖ್ಯೆ ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಬಹಳ ಕಡಿಮೆಯಿದೆ. ಯುವ ಸಮೂಹವನ್ನು ಈ ಹವ್ಯಾಸವನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಬೇಕಿದೆ ಎಂದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ಬಾಬು ಮಾತನಾಡಿ ಕಿದೂರು ಪಕ್ಷಿಧಾಮವೆನ್ನುವುದು ಅತಿಶಯೋಕ್ತಿಯಾಗಲಾರದು. ಬಡರ್್ ಫೆಸ್ಟ್ ನಂತಹ ಕಾರ್ಯಕ್ರಮಗಳು ಮುಂದೆಯೂ ನಡೆಯಲಿ ಎಂದು ಹಾರೈಸಿದರು. ಮುಂಬರುವ ವರ್ಷಗಳಲ್ಲಿ ಇಂತಹ ಉತ್ತಮ ಕಾರ್ಯಕ್ರಮಗಳಿಗೆ ಪ್ರತ್ಯೇಕ ಹಣವನ್ನು ಮೀಸಲಿರಿಸಲಾಗುವುದು ಎಂದರು. ಕಿದೂರಿನ ಯಾವುದೇ ಸರಕಾರಿ ಭೂಮಿಯನ್ನು ಅತಿಕ್ರಮಿಸಲು ಬಿಡುವುದಿಲ್ಲ, ಪಕ್ಷಿ ವೀಕ್ಷಣಾಗಾರರಿಗೆ ಅನುಕೂಲವಾಗುವಂತೆ ಬಡರ್್ ಸ್ಯಾಂಕ್ಷ್ವರಿ ಎಂದು ಈ ಪ್ರದೇಶವನ್ನು ಘೋಷಿಸಲಾಗುವುದು ಎಂದರು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚಚರ್ಿಸಿ ಕಿದೂರಿನ ಪಾರೆ ಪ್ರದೇಶದ ಸರಕಾರಿ ಭೂಮಿಯಲ್ಲಿ ಪಕ್ಷಿ ಪ್ರತಿಮೆಯನ್ನು ನಿಮರ್ಿಸಿ ಪಕ್ಷಿಧಾಮ ಎಂದು ಬಿಂಬಿಸಲಾಗುವುದು ಎಂದರು. ಜಿಲ್ಲೆಯ ಹಲವು ಸಮುದ್ರ ತೀರ ಪ್ರದೇಶಗಳನ್ನು ಪ್ರವಾಸಿ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಆಯಾ ಪ್ರದೇಶದ ವಿಶೇಷತೆಯೊಂದಿಗೆ ಸಮುದ್ರ ತೀರವನ್ನು ಹೆಸರಿಸಲಾಗುವುದು, ಕಿದೂರಿಗೆ ಸಮೀಪವಿರುವ ಸಮುದ್ರ ಕಿನಾರೆ ಮತ್ತು ನದಿ ಮುಖಜ ಭೂಮಿಯನ್ನು ಪಕ್ಷಿ ಪ್ರಬೇಧದ ವೈಶಿಷ್ಟ್ಯತೆಯನ್ನು ಸಾರುವ ಪ್ರದೇಶ ಎಂದು ಬಿಂಬಿಸಲಾಗುವುದು ಎಂದರು. ವಲಸೆ ಪಕ್ಷಿಗಳು ಹೆಚ್ಚಿರುವ ಕುಂಬಳೆ ಕಡಲ ತೀರ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು. ಇದರ ಜೊತೆಯಲ್ಲಿ ನದಿ ರಕ್ಷಣೆ ಸಹಿತ ಅಂತರ್ಜಲ ಕಾಪಾಡುವ ನಿಟ್ಟಿನಲ್ಲಿ ಕುಂಬಳೆಯನ್ನು ಬ್ಯಾಂಬೂ ಕ್ಯಾಪಿಟಲ್ ಮಾಡಲಾಗುವುದೆಂದು ಜಿಲ್ಲಾಧಿಕಾರಿ ಹೇಳಿದರು.
ಬಡರ್್ ಫೆಸ್ಟ್-2018 ಎರಡು ದಿನಗಳ ಶಿಬಿರದಲ್ಲಿ ಕಲ್ಲಿಕೋಟೆ, ತಿರುವನಂತಪುರ, ಬೆಂಗಳೂರು, ರಾಮನಗರ, ಮೈಸೂರು ಸಹಿತ ವಿವಿಧ ಪ್ರದೇಶಗಳಿಂದ ಪಕ್ಷಿ ಪ್ರೇಮಿಗಳು ಆಗಮಿಸಿದ್ದರು. ಪಕ್ಷಿ ವೀಕ್ಷಣೆ ಸಂದರ್ಭ ಕುಂಬಳೆ ಗ್ರಾ.ಪಂ. ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ, ಕಿದೂರು ಬಡರ್್ ಫೆಸ್ಟ್ ಆಯೋಜಕ ರಾಜು ಕಿದೂರು, ಮ್ಯಾಕ್ಸಿಂ ಕೊಲ್ಲಂಗಾನ, ಲಾವಿನಾ ಮೊದಲಾದವರು ಇದ್ದರು.




