ತುಳುನಾಡ ಬಾಲೆ ಬಂಗಾರ್ : ಆಮಂತ್ರಣ ಪತ್ರಿಕೆ ಬಿಡುಗಡೆ
0
ನವೆಂಬರ್ 11, 2018
ಮಂಜೇಶ್ವರ: ತುಳುನಾಡ ಬಾಲೆ ಬಂಗಾರ್ ಸಮಿತಿ ತುಳುವೆರೆ ಆಯನೋ ಕೂಟ ಮಂಜೇಶ್ವರ ಇದರ ಆಶ್ರಯದಲ್ಲಿ ಮಾಕರ್್ ಇ.ಕಾಮ್ ಸೊಲ್ಯುಶನ್ ಪ್ರಾಯೊಜಕತ್ವದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ನಡೆದ ಮುದ್ದು ಮಕ್ಕಳ ಫೋಟೋ ಸ್ಪಧರ್ೆ ತುಳುನಾಡ ಬಾಲೆ ಬಂಗಾರ್ -2018 , ಸೀಸನ್- 3 ಕಾರ್ಯಕ್ರಮದ ಬಹುಮಾನ ವಿತರಣೆ ಸಮಾರಂಭದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಮಂಗಳೂರಿನ ಮಾಕರ್್ ಇ.ಕಾಮ್ ಸೊಲ್ಯುಶನ್ ಸಂಸ್ಥೆಯ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.
ತುಳುನಾಡ ಬಾಲೆ ಬಂಗಾರ್ ಸಮಿತಿಯ ಮಂಜೇಶ್ವರದ ಗೌರವಾಧ್ಯಕ್ಷ ರಾಜ ಬೆಳ್ಚಪ್ಪಾಡ ಅವರು ಆಮಂತ್ರಣ ಪತ್ರಿಕೆಯನ್ನು ಸ್ಪಧರ್ೆಯ ಬಹುಮಾನದ ಪ್ರಾಯೋಜಕರಾದ ಮಾಕರ್್ ಇ.ಕಾಮ್ ಸೋಲ್ಯುಶನ್ನ ಎಕ್ಸಿಕ್ಯೂಟಿವ್ ನಿದರ್ೇಶಕ ಆಶಾ ಶೆಟ್ಟಿ ಅತ್ತಾವರ ಅವರಿಗೆ ನೀಡಿ ಬಿಡುಗಡೆಗೊಳಿಸಿ, ಶುಭ ಹಾರೈಸಿದರು.
ಈ ವೇಳೆ ನೂತನ ಸಂಸ್ಥೆಯಾದ ಮಾಕರ್್ ಸೋಲ್ಯುಶನ್ನ ಸಂಸ್ಥೆಯ ಕಾರ್ಯ ಯೋಜನೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಮಾರಂಭದಲ್ಲಿ ವಿಶ್ವ ತುಳುವೆರೆ ಆಯನೊ ಕೂಟದ ಪ್ರಧಾನ ಸಂಚಾಲಕ ಡಾ.ರಾಜೇಶ್ ಆಳ್ವ ಬದಿಯಡ್ಕ, ಉಪಾಧ್ಯಕ್ಷ ಹರೀಶ್ ಶೆಟ್ಟಿ ಪಣಿಯೂರು, ಕಾರ್ಯದಶರ್ಿ ಮಹೇಶ್ ಶೆಟ್ಟಿ ಧರ್ಮಸ್ಥಳ, ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರ ಪ್ರಧಾನ ಸಂಚಾಲಕ ಜಯ ಮಣಿಯಂಪಾರೆ, ಪ್ರಧಾನ ಕಾರ್ಯದಶರ್ಿ ರತನ್ ಕುಮಾರ್ ಹೊಸಂಗಡಿ, ಜೊತೆ ಕಾರ್ಯದಶರ್ಿ ದೀಪಕ್ ರಾಜ್ ಉಪ್ಪಳ, ಮಂಜೇಶ್ವರದ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯ ಪ್ರಧಾನ ಸಂಚಾಲಕ ಸುಖೇಶ್ ಬೆಜ್ಜ, ಗುರು ಕಿರಣ್ ಆಚಾರ್ಯ ಹೊಸಂಗಡಿ, ಮಾಕರ್್ ಇ.ಕಾಮ್ ಸೋಲ್ಯುಶನ್ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ತುಳುನಾಡ ಬಾಲೆ ಬಂಗಾರ್ ಸಮಿತಿಯ ಪ್ರಧಾನ ಸಂಚಾಲಕ ಜಯ ಮಣಿಯಂಪಾರೆ ಸ್ವಾಗತಿಸಿದರು. ಪ್ರಧಾನ ಕಾರ್ಯದಶರ್ಿ ರತನ್ ಕುಮಾರ್ ಹೊಸಂಗಡಿ ವಂದಿಸಿದರು.
ತುಳುನಾಡ ಬಾಲೆ ಬಂಗಾರ್- 2018 ವಿಜೇತ ನ.13ರಂದು ಸಂಜೆ 3 ಗಂಟೆಗೆ ಹೊಸಂಗಡಿ ಹಿಲ್ಸೈಡ್ ಸಭಾಭವನದಲ್ಲಿ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಿಸಲಾಗುವುದು. ಈ ವೇಳೆ ವಿಜೇತ ಮಕ್ಕಳ ಫೋಟೋ ಕೂಡ ಪ್ರದರ್ಶನಗೊಳ್ಳಲಿದೆ.




