ನೀಚರ್ಾಲು ಭಜನಾ ಮಂದಿರದ ಪುನರ್ ಪ್ರತಿಷ್ಠೆ-ತಿರುವಿಳಕ್ಕ್ ಮಹೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ
ಬದಿಯಡ್ಕ: ಅತಿ ಕಾರಣಿಕದ ನೀಚರ್ಾಲು ಶ್ರೀ ಧರ್ಮಶಾಸ್ತಾ ಭಜನ ಮಂದಿರದ ಲೋಕಾರ್ಪಣೆ ಹಾಗೂ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವ ಡಿ. 27,28,29 ದಿನಗಳಲ್ಲಿ ನಡೆಯಲಿದ್ದು, ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಭಾನುವಾರ ನೀಚರ್ಾಲು ಶ್ರೀ ಧರ್ಮಶಾಸ್ತಾ ಭಜನ ಮಂದಿರದ ವಠಾರದಲ್ಲಿ ನಡೆಯಿತು.
ಉದ್ಯಮಿ, ಕೊಡುಗೈದಾನಿ ಗೋಪಾಲೃಷ್ಣ ಪೈ ಬದಿಯಡ್ಕ ಆಮಂತ್ರಣಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ದೇವರ ಕಾರ್ಯಗಳು ಸುಸೂತ್ರವಾಗಿ ನಡೆಯಲಿ ಎಂದು ಹಾರೈಸಿದರು. ಶ್ರೀಮಂದಿರದ ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷ ಹಾಗೂ ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಮನೋಹರವಾದ ಮಂದಿರವು ನಮ್ಮ ಕಣ್ಣಮುಂದೆ ನಿಮರ್ಾಣವಾಗಿದ್ದು, ಇದರ ಹಿಂದೆ ಅನೇಕರ ಶ್ರಮವಿದೆ. ಮಂದಿರದ ಮೂಲಕ ಸಮಾಜದಲ್ಲಿ ಧರ್ಮ ಜಾಗೃತಿಯಾಗಲಿ ಎಂದು ಹೇಳಿದರು.
ಗೌರವಾಧ್ಯಕ್ಷ ಜಯದೇವ ಖಂಡಿಗೆ, ಶ್ರೀಮಂದಿರದ ಕಾರ್ಯದಶರ್ಿ ಗಂಗಾಧರ, ಜೀಣರ್ೋದ್ಧಾರ ಸಮಿತಿಯ ಕಾರ್ಯದಶರ್ಿಗಳಾದ ರವೀಂದ್ರ ಮಾಸ್ತರ್ ಹಾಗೂ ಬಾಲಕೃಷ್ಣ ನಾಯ್ಕ, ಮಂದಿರದ ಗುರುಸ್ವಾಮಿ ರಮೇಶ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀಚರ್ಾಲು ಯೂನಿಟ್ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್, ಸಾಮಾಜಿಕ ಕಾರ್ಯಕರ್ತ ಗಣೇಶ ಕೃಷ್ಣ ಅಳಕ್ಕೆ, ಮಂಜುನಾಥ ಮಾನ್ಯ, ವಿವಿಧ ಮಂದಿರಗಳ ಗುರುಸ್ವಾಮಿಗಳು, ಶ್ರೀಧರ್ಮಶಾಸ್ತಾ ಮಿತ್ರಮಂಡಳಿ ಹಾಗೂ ಮಾತೃಮಂಡಳಿಯ ಹೆಚ್ಚಿನ ಸದಸ್ಯರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.
