ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಬಾಲಗೋಕುಲ ತರಗತಿಗೆ ಚಾಲನೆ
ಪೆರ್ಲ:ಉಕ್ಕಿನಡ್ಕ ಅಯ್ಯಪ್ಪ ಭಜನಾ ಮಂದಿರ ಪರಿಸರದಲ್ಲಿ ಭಾನುವಾರ ಆರಂಭಗೊಂಡ ನಂದ ಬಾಲಗೋಕುಲ ತರಗತಿಯನ್ನು ಉಕ್ಕಿನಡ್ಕಾಸ್ ಆಯುವರ್ೇದ ಸಂಸ್ಥೆಯ ಡಾ.ಸಪ್ನಾ ಜೆ. ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಉಕ್ಲಾಡಿ ಶಾಲಾ ನಿವೃತ್ತ ಹಿಂದಿ ಅಧ್ಯಾಪಕ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು. ಬಾಲಗೋಕುಲ ಕಾರಡ್ಕ ಮಂಡಲ ಪ್ರಮುಖ ಚಂದ್ರಶೇಖರ ಪಾರ್ತಕೊಚ್ಚಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಾಲಗೋಕುಲ ರಕ್ಷಾಧಿಕಾರಿ, ಉಕ್ಕಿನಡ್ಕಾಸ್ ಆಯುವರ್ೇದ ಸಂಸ್ಥೆಯ ನಿದರ್ೇಶಕ ಡಾ.ಜಯಗೋವಿಂದ ಉಕ್ಕಿನಡ್ಕ ಶುಭ ಹಾರೈಸಿದರು. ಬಾಲಗೋಕುಲ ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಹಿಂದುತ್ವದ ನೈಜತೆ, ಭಾರತೀಯ ಸಂಸ್ಕೃತಿಯ ಅರಿವು ಮರೆಯಾಗುತ್ತಿರುವ ಪ್ರಸ್ತುತ ಕಾಲದಲ್ಲಿ ಮನೆ, ಶಿಕ್ಷಣ ಸಂಸ್ಥೆಗಳಲ್ಲಿ ಅಲಭ್ಯವಾಗಿರುವ ಧಾಮರ್ಿಕ ಶಿಕ್ಷಣವನ್ನು ನೀಡಿ, ಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಉಕ್ಕಿನಡ್ಕ ಆಸುಪಾಸಿನ ಮಕ್ಕಳಿಗೆ ಎಲ್ಲಾ ಭಾನುವಾರಗಳಂದು ಬೆಳಗ್ಗೆ 9.30ರಿಂದ 11ರ ತನಕ ತರಗತಿ ನಡೆಯಲಿದೆ ಎಂದು ಬಾಲಗೋಕುಲದ ಸಂಬಂಧಪಟ್ಟವರು ತಿಳಿಸಿದ್ದಾರೆ.




