ತುಳು ಭಾಷೆ ಉನ್ನತಿಗೇರಬೇಕು- ಲಿಪಿಯ ಬಳಕೆ ಸಂಪುಷ್ಟಗೊಳ್ಳಬೇಕು= ಕಾಸರಗೋಡು ಎ.ಡಿ.ಎಂ ಎನ್. ದೇವೀದಾಸ್
ಕುಂಬಳೆ: ತುಳು ನಾಡಿನ ವಿಶೇಷ ಆಚರಣೆ ದೀಪಾವಳಿ ಐಕ್ಯತೆಯ ಸಂದೇಶವಾಗಿದೆ.ತುಳು ಭಾಷೆ ಹಾಗೂ ಸಂಸ್ಕೃತಿಯ ಅಭಿವೃದ್ಧಿ ಇಂತಹ ಕಾರ್ಯಕ್ರಮಗಳಿಂದ ಸಾಧ್ಯವಾದೀತು. ತುಳು ಲಿಪಿಯು ನಿತ್ಯ ಬಳಕೆಯ ಮೂಲಕ ಸಂಪುಷ್ಟಗೊಳ್ಳಬೇಕು ಎಂದು ಜಿಲ್ಲಾ ಉಪ ದಂಡಾಧಿಕಾರಿ(ಎ.ಡಿ.ಎಂ) ಎನ್. ದೇವೀದಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇರಳ ತುಳು ಅಕಾಡೆಮಿಯ ಆಶ್ರಯದಲ್ಲಿ ಗುರುವಾರ ದೀಪಾವಳಿ ಹಬ್ಬದ ಆಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಕಾಸರಗೋಡು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿರುವ ತುಳು ಅಕಾಡೆಮಿಯ ಕಛೇರಿಯಲ್ಲಿ ನಡೆದ ದೀಪಾವಳಿ ಪರ್ಬ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷ ಉಮೇಶ್ ಎಂ. ಸಾಲಿಯಾನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ 'ತುಳು ನಾಡ ಬಲಿಯೇಂದ್ರ ಪರ್ಬ' ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಕವಯಿತ್ರಿ, ಜಾನಪದ ಸಂಶೋಧಕಿ ರಾಜಶ್ರೀ ಟಿ ರೈ ಪೆರ್ಲ ಅವರು ತುಳುನಾಡಿನ ಆರಾಧನೆ, ಆಚರಣೆಗಳ ಹಿನ್ನೆಲೆಯಲ್ಲಿ ಶ್ರೀಮಂತವಾದ ಉದಾತ್ತ ಸಾರ್ವಕಾಲಿಕ ಮೌಲ್ಯಗಳಿವೆ. ಅದನ್ನು ಉಳಿಸಿ ಬೆಳೆಸಲು,ಮುಂದಿನ ಜನಾಂಗಕ್ಕೆ ತಿಳಿಸುವಲ್ಲಿ ವರ್ತಮಾನದ ಜನಸಮೂಹ ಬದ್ದರಾಗಬೇಕು ಎಂದು ತಿಳಿಸಿದರು. ಕೇರಳ ತುಳು ಅಕಾಡೆಮಿ ತಿಂಗಳಿಗೊಂದರಂತೆ ಕಾರ್ಯಕ್ರಮಗಳನ್ನು ಅಳವಡಿಸುವುದರ ಮೂಲಕ ಜನಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಕೇವಲ ಸಾಂಸ್ಕೃತಿಕ ಚಟುವಟಿಕೆಗಳೇ ಅಲ್ಲದೆ ಸಾಹಿತ್ಯ, ತೌಳವ ಕ್ರೀಡೆಗಳಂತಹ ವೈವಿಧ್ಯತೆಗಳಿಗೂ ಪೂರಕವಾಗುವ ಕಾರ್ಯಯೋಜನೆ ರೂಪಿಸಬೇಕು ಎಂದು ಕರೆನೀಡಿದರು. ಇದರಿಂದ ಹೊಸ ಬರಹಗಾರರಿಗೆ, ಕ್ರೀಡಾ ಸಾಧಕರಿಗೆ, ವಿದ್ಯಾಥರ್ಿಗಳ ಪ್ರತಿಭಾ ಅನಾವರಣಕ್ಕೆ ಸಾಧ್ಯವಾಗುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಂಜೇಶ್ವರದ ಮಾಜಿ ಶಾಸಕ ನ್ಯಾಯವಾದಿ ಸಿ.ಎಚ್.ಕುಞಂಬು,ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ, ಅಕಾಡೆಮಿ ಸದಸ್ಯರಾದ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸುರೇಶ್ ಬೇಕಲ, ಕೇಶವ ಶೆಟ್ಟಿ ಆದೂರು, ಹಿರಿಯ ಪತ್ರಕರ್ತ ಗೋಪಾಲಕೃಷ್ಣ, ಮಂಜೇಶ್ವರ ಕಲಾ ಸ್ಪರ್ಶಂ ನಿದರ್ೇಶಕಿ ಜೀನ್ ಲವೀನ ಮೊಂತೇರೋ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು. ವಿಶೇಷ ಆಕರ್ಷಣೆಯಾಗಿ ಯಶೋಧ ಶಂಕರ ಸ್ವಾಮಿ ಕೃಪಾ ಹಾಗೂ ತಂಡದಿಂದವರು ಹಾಡಿದ ಪಾಡ್ದನ ಗಮನ ಸೆಳೆಯಿತು. ಬೊಳಿಕೆ ಜಾನಪದ ತಂಡ ಕನ್ನೆಪ್ಪಾಡಿಯ ಶಂಕರ ಸ್ವಾಮಿಕೃಪಾ ಸಂಯೋಜಿಸಿದರು. ಸವಾಕ್ ಸಂಘಟನೆಯ ಪ್ರತಿನಿಧಿಗಳಾದ ಭಾರತೀ ಬಾಬು, ಜಯಂತಿ ಸುವರ್ಣ, ರಂಗನಿದರ್ೇಶಕ ಉದಯ ಸಾರಂಗ್, ರಾಜ್ಯ ಲೈಬ್ರರಿ ಕೌನ್ಸಿಲ್ ಮಂಜೇಶ್ವರ ತಾಲೂಕು ಅಧ್ಯಕ್ಷ ಎಸ್.ನಾರಾಯಣ ಭಟ್ ಸಹಕರಿಸಿದರು.
ತುಳು ಅಕಾಡೆಮಿ ಕಾರ್ಯದಶರ್ಿ ವಿಜಯ ಕುಮಾರ್ ಪಾವಳ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ ಕುದುರು ವಂದಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ ಎಂ.ಸಾಲ್ಯಾನ್ ಅವರು ಮಾತನಾಡಿ, ಕೇರಳ ತುಳು ಅಕಾಡೆಮಿಯ ಕಾಯರ್ಾಲಯ ತುಳು ಭವನದ ನಿಮರ್ಾಣಕ್ಕಾಗಿ ಮಂಜೇಶ್ವರ ತಾಲೂಕಿನ ಕಡಂಬಾರಿನಲ್ಲಿ ಮೀಸಲಿಟ್ಟಿರುವ ಒಂದು ಎಕ್ರೆ ನಿವೇಶನದಲ್ಲಿ ಶಾಸಕರ ನಿಧಿಯಲ್ಲಿ ಮೀಸಲಿಟ್ಟಿರುವ 45 ಲಕ್ಷ ರೂ.ಗಳನ್ನು ಬಳಸಿ ಕಟ್ಟಡ ನಿಮರ್ಿಸಲು ಯೋಜನೆ ಅಂತಿಮ ಹಂತದಲ್ಲಿದ್ದು ಶೀಘ್ರ ಶಂಕುಸ್ಥಾಪನೆಯೊಂದಿಗೆ ತುಳು ಭವನ ನಿಮರ್ಾಣವಾಗಲಿದೆ ಎಂದು ತಿಳಿಸಿದರು. ಜೊತೆಗೆ ತುಳು ಅಕಾಡೆಮಿ ವತಿಯಿಂದ ಪ್ರತಿತಿಂಗಳೂ ನಿರಂತರ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಿದ್ದು, ತುಳು ಗ್ರಂಥ, ತಾಳೆಯೋಲೆ, ವೈದ್ಯಕೀಯ, ಜಾನಪದ ಗೀತೆಗಳ ಸಂಗ್ರಹ ಮೊದಲಾದ ದಾಖಲೀಕರಣಗಳ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗುವುದೆಂದು ಆಶಯ ವ್ಯಕ್ತಪಡಿಸಿದರು.
