ಬದಿಯಡ್ಕ: ನೀಚರ್ಾಲು ಅಮೃತ ಅಟೋ ನಿಲ್ದಾಣದ ಅಟೋರಿಕ್ಷಾ ಚಾಲಕ ಅಬೂಬಕರ್ ಅವರು ಅನಾರೋಗ್ಯದ ಕಾರಣ ಶಸ್ತ್ರ ಚಿಕಿತ್ಸೆಗೊಳಗಾಗಿದ್ದು ಅವರಿಗೆ ನೀಚರ್ಾಲು ಬಿಎಂಎಸ್ ಅಟೋ ಚಾಲಕರ ನಿಧಿಯಿಂದ ಇತ್ತೀಚೆಗೆ ಧನ ಸಹಾಯ ಹಸ್ತಾಂತರಿಸಲಾಯಿತು.
ಧನ ಸಹಾಯ ಹಸ್ತಾಂತರ ಸಂದರ್ಭ ಅಟೋ ಚಾಲಕರಾದ ಶಿವರಾಮ ಮೆಣಸಿನಪಾರೆ, ಸಂಜೀವ ಚೆಟ್ಟಿಯಾರ್ ಪುದುಕೋಳಿ, ಕಿಶೋರ್, ಬಲರಾಮ, ರವೀಂದ್ರ, ತಾರಾನಾಥ, ಶಿವರಾಮ ಮೊಳೆಯಾರ್, ನಿರಂಜನ, ಜಯರಾಮ, ಬಾಲಕೃಷ್ಣ, ಹರಿಪ್ರಸಾದ್, ಅನಿಲ್ ಕುಮಾರ್, ಸುಬ್ರಹ್ಮಣ್ಯ ಮಾನ್ಯ ಮೊದಲಾದವರು ಉಪಸ್ಥಿತರಿದ್ದರು.





