ಬದಿಯಡ್ಕ: ಹೃದಯ ಸಂಬಂಧೀ ಖಾಯಿಲೆಯಿಂದ ಬಳಲುತ್ತಿರುವ ಕಾನ ನಿವಾಸಿ ಗಣರಾಜ ಎಂಬವರಿಗೆ ಎಡೆಕ್ಕಾನ ಶಾಂಭವಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಆಡಳಿತ ನಿದರ್ೇಶಕ ಎಡೆಕ್ಕಾನ ಮಹಾಬಲೇಶ್ವರ ಭಟ್ ಅವರು ನೀಚರ್ಾಲು ನಿವೇದಿತಾ ಸೇವಾಮಿಶನ್ನ ಮೂಲಕ ನೀಡಿದ ಹತ್ತು ಸಾವಿರ ರೂ. ಧನ ಸಹಾಯವನ್ನು ನಿವೇದಿತಾ ಸೇವಾಮಿಶನ್ನ ಕಾರ್ಯದಶರ್ಿ ಗಣೇಶಕೃಷ್ಣ ಅಳಕ್ಕೆ ಮಂಗಳವಾರ ಅವರ ನಿವಾಸಕ್ಕೆ ತೆರಳಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಎಡೆಕ್ಕಾನ ಶಾಂಭವಿ ಫ್ಯಾಮಿಲಿ ಟ್ರಸ್ಟ್ನ ಸದಸ್ಯ ಇ.ಎಸ್. ಸುಬ್ರಹ್ಮಣ್ಯ ಭಟ್, ನಿವೇದಿತಾ ಸೇವಾಮಿಶನ್ನ ಹರಿಪ್ರಸಾದ ಪೆರ್ವ, ಬಾಲಸುಬ್ರಹ್ಮಣ್ಯ ಮಲ್ಲಡ್ಕ ಜೊತೆಗಿದ್ದರು.
ನಾಯ್ಕಾಪು ಕಾನ ನಿವಾಸಿ ಎಚ್. ಗಣರಾಜ ಅವರು ಕಳೆದ 2 ತಿಂಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದರು. ನಂತರ ಚಿಕಿತ್ಸೆಯನ್ನು ಪಡೆದು ಇದೀಗ ಔಷಧೋಪಚಾರದೊಂದಿಗೆ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಯಾವುದೇ ಆದಾಯವಿಲ್ಲದ ಅವರಿಗೆ ಶಾಂಭವಿ ಫ್ಯಾಮಿಲಿ ಟ್ರಸ್ಟ್ನ ವತಿಯಿಂದ ನೀಚರ್ಾಲು ನಿವೇದಿತಾ ಸೇವಾಮಿಶನ್ ಮೂಲಕ ನೀಡಿದ ಧನಸಹಾಯವು ನೆಮ್ಮದಿಯನ್ನು ತಂದಿದೆ.




