ಪೆರ್ಲ: ಎಣ್ಮಕಜೆ ಗ್ರಾ.ಪಂ.ಕಜಂಪಾಡಿಯ ಕೋಲ್ಚಿಣಿ-ಚೇರ್ಕಬೆ ರಸ್ತೆ ಕಾಂಕ್ರೀಟಿಕರಣ ಹಾಗೂ ಡಾಮರೀಕರಣ ಕಾಮಗಾರಿಗೆ ಪಂ.ಸದಸ್ಯೆ ರೂಪವಾಣಿ ಆರ್.ಭಟ್ ಚಾಲನೆ ನೀಡಿದರು.
ಗ್ರಾಮ ಪಂಚಾಯತ್ ಓವರ್ಸಿಯರ್ ಪ್ರದೀಪ್ ಕೆ.ಎಸ್, ಗ್ರಾಮಸ್ಥರಾದ ಶ್ರೀಹರಿ ಭಟ್, ಪ್ರಕಾಶ ಕಾನಕುಮೇರಿ, ರವಿ ಕಾನಕುಮೇರಿ, ಚಂದ್ರಶೇಖರ ಕೋಟೆ ಮೊದಲಾದವರು ಉಪಸ್ಥಿತರಿದ್ದರು.