ಪೆರ್ಲ:ಪೆರ್ಲ ನಾಲಂದ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆಯ 2018-19ನೇ ಅಧ್ಯಯನ ವರ್ಷದ ಸಪ್ತ ದಿನ ಶಿಬಿರ ಡಿ.21ರಿಂದ 27ರ ವರೆಗೆ ಪಡ್ರೆ ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದ್ದು ಶಿಬಿರದ ಯಶಸ್ವಿಗಾಗಿ ವಾಣೀನಗರ ಶಾಲೆಯಲ್ಲಿ ಇತ್ತೀಚೆಗೆ ಪೂರ್ವಬಾವಿ ಸಭೆ ನಡೆಯಿತು.
ವಾಣೀನಗರ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನರಸಿಂಹ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಬಿರದ ಯಶಸ್ವಿಯಾಗಿ ನಡೆಯಲು ಹಾಗೂ ವಾಣೀನಗರದ ಗ್ರಾಮೀಣ ಜನತೆಗೆ ಅದರ ಪೂರ್ಣ ಪ್ರಮಾಣದ ಫಲ ಲಭಿಸುವಂತಾಗಲು ಸ್ಥಳೀಯರು, ಸಂಘಟನೆಗಳು ಶಿಬಿರದಲ್ಲಿ ಪಾಲ್ಗೊಂಡು ಸಹಕರಿಸಬೇಕಾಗಿದೆ ಎಂದರು.
ನಾಲಂದ ಮಹಾವಿದ್ಯಾಲಯದ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ್ ಕೆ., ಗ್ರಾ.ಪಂ. ಪ್ರತಿನಿಧಿಗಳಾದ ಚಂದ್ರಾವತಿ ಎಂ., ಶಶಿಕಲ ವೈ., ಪಡ್ರೆ ವಾಣೀನಗರ ಶಾಲಾ ಮುಖ್ಯ ಶಿಕ್ಷಕ ವಾಸುದೇವ ನಾಯ್ಕ್, ಪತ್ತಡ್ಕ ಗಣಪತಿ ಭಟ್ ಶಿಬಿರ ಯಶಸ್ವಿಯಾಗಿ ನಡೆಯುವಂತೆ ಶುಭ ಹಾರೈಸಿದರು.ಸಂಘಾಟಕ ಸಮಿತಿ ರಚಿಸಲಾಯಿತು.
ನಾಲಂದ ಎನ್ ಎಸ್ ಎಸ್ ಯೋಜನಾಧಿಕಾರಿ ಸುರೇಶ್ ಕೆ.ಎಂ. ಸ್ವಾಗತಿಸಿ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿದರು.ಪ್ರದೀಪ್ ಶಾಂತಿಯಡಿ ವಂದಿಸಿದರು. ವಿದ್ಯಾಥರ್ಿಗಳು, ಸ್ಥಳೀಯರು ಉಪಸ್ಥಿತರಿದ್ದರು. ನ.25ರಂದು ಸಂಜೆ 4 ಗಂಟೆಗೆ ಮುಂದಿನ ಸಭೆ ನಡೆಯಲಿದೆ.



