HEALTH TIPS

No title

        ಎಸ್ ಎಟಿಯಲ್ಲಿ ಜ್ಞಾನವಧರ್ಿನೀ ಸಂಸ್ಕೃತ ಶಿಬಿರ
   ಮಂಜೇಶ್ವರ: ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಸಂಸ್ಕೃತವು ಅಗಾಧ ಜ್ಞಾನರಾಶಿಯಿಂದೊಡಗೂಡಿ ಜಗತ್ತಿನ ಮಾತೃಭಾಷೆಯೆಂಬ ಖ್ಯಾತಿಗೆ ಪಾತ್ರವಾಗಿದೆ.ಪ್ರಸ್ತುತ ಸಂಸ್ಕೃತದ ಬಳಕೆ ವಿರಳವಾಗಿದ್ದರೂ ಜಗತ್ತಿನ ಇತರ ಭಾಷೆಗಳಿಗೆ ಮೇಲ್ಪಂಕ್ತಿಯಾಗಿ ತನ್ನದೇ ಕೊಡುಗೆಗಳನ್ನು ನೀಡಿದ್ದು, ಅದರ ವಿಸ್ತಾರವಾದ ಬಳಕೆಗೆ ಯುವ ತಲೆಮಾರು ಆಸಕ್ತಿವಹಿಸಬೇಕು ಎಂದು ಮಂಜೇಶ್ವರ ಮದನಂತೇಶ್ವರ ದೇವಳದ ಟ್ರಸ್ಟಿ  ಛತ್ರಪತಿ  ಪ್ರಭು ತಿಳಿಸಿದರು.
   ಮಂಜೇಶ್ವರ ಎಸ್ ಎ ಟಿ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಉಪಜಿಲ್ಲಾ ಮಟ್ಟದ ಮೂರು ದಿನಗಳ ಸಂಸ್ಕೃತ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
  ಮಹಾನ್ ಗ್ರಂಥಗಳ ಸಹಿತ ಸಮಗ್ರ ವ್ಯಕ್ತಿ-ವ್ಯಕ್ತಿತ್ವಗಳ ಸ್ಪಷ್ಟ ನಿರೂಪಣೆ ಇಂದು ಲಭ್ಯವಿರುವುದಾದರೆ ಅದರ ಮೂಲ ಸಂಸ್ಕೃತ ಗ್ರಂಥಗಳಾಗಿವೆ. ಆದರೆ ಸಂಸ್ಕೃತ ಜ್ಞಾನದ ಕೊರತೆ ನಮ್ಮನ್ನು ಅಂಧರಾಗಿಸಿದ್ದು, ನಮ್ಮೊಳಗಿನ ಶಕ್ತಿಯ ಅರಿವಿಗೆ ಆ ಭಾಷೆಯ ಅಧ್ಯಯನ ಅಗತ್ಯ. ವಿದ್ಯಾಥರ್ಿಗಳು ಸಂಸ್ಕೃತ ಭಾಷೆಯ ತಲಸ್ಪಶರ್ಿ ಅಧ್ಯಯನಕ್ಕೆ ಮುಂದಾಗುವಲ್ಲಿ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು.
   ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ. ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಬಶೀರ್ ಅವರು ಮಕ್ಕಳ ಪತ್ರಿಕೆ "ಪ್ರದಶರ್ಿನಿ" ಈ ಸಂದರ್ಭ ಬಿಡುಗಡೆಗೊಳಿಸಿ ಶುಭಹಾರೈಸಿದರು. ಸಂಸ್ಕೃತ ಶಿಬಿರ ಸಮಿತಿಯ ಉಪಾಧ್ಯಕ್ಷೆ ಪುಷ್ಪಾವತಿ,  ಬಾಯಾರು ಹೆದ್ದಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಆದಿನಾರಾಯಣ, ಶಾಲಾ ನೌಕರ ಸಂಘದ ಕಾರ್ಯದಶರ್ಿ ಸುಕನ್ಯಾ.ಕೆ ಉಪಸ್ಥಿತರಿದ್ದರು.
   ಶಾಲಾ ಪ್ರಾಚಾರ್ಯ  ಮರಳೀಕೃಷ್ಣ.ಎನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.ಶಿಕ್ಷಕ ಮಧು.ಕೆ ಕಾರ್ಯಕ್ರಮ ನಿರ್ವಹಿಸಿ,   ಸಂಸ್ಕೃತ ಕೌನ್ಸಿಲ್ನ ಅಧ್ಯಕ್ಷೆ  ಸೌಮ್ಯಾ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries