ವಾಶಿಂಗ್ಟನ್: ಬುಕ್ ಸಂಸ್ಥಾಪಕ ಮಾಕರ್್ ಜುಕರ್ಬಗರ್್ರನ್ನು ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಸಂಸ್ಥೆಯ ಷೇರುದಾರರು ಒತ್ತಾಯಿಸಿದ್ದಾರೆ.
ಕೇಂಬ್ರಿಜ್ ಅನಲಿಟಿಕಾ ಹಗರಣದಲ್ಲಿ ಫೇಸ್ ಬುಕ್ ನ ಅಪಖ್ಯಾತಿಯನ್ನು ಹೋಗಲಾಡಿಸಲು ಮತ್ತು ಪ್ರತಿ ಸ್ಪಧರ್ಿಗಳ ವಿರುದ್ಧ ಜನಾಭಿಪ್ರಾಯ ಮೂಡಿಸಲು ಜುಕರ್ಬಗರ್್ ಅವರು ಸಾರ್ವಜನಿಕ ಸಂಪರ್ಕ ಸಂಸ್ಥೆಗಳ ಜತೆ ಕೈಜೋಡಿಸಿದ್ದಾರೆ ಎಂದು ಕೆಲವು ಪತ್ರಿಕೆಗಳು ವರದಿ ಪ್ರಕಟಿಸಿದ ಬೆನ್ನಲ್ಲೇ ಷೇರುದಾರರಿಂದ ಈ ಒತ್ತಾಯ ಕೇಳಿಬಂದಿದೆ.
ಮಾಕರ್್ ಜುಕರ್ಬಗರ್್ ಫೇಸ್ ಬುಕ್ ವಿರುದ್ಧದ ಟೀಕೆಗಳನ್ನು ಸುಳ್ಳೆಂದು ಜರೆಯಲು ಮತ್ತು ಪ್ರತಿಸ್ಪಧರ್ಿ ಉದ್ಯಮಿ ಜಾಜರ್್ ಸೋರೋಸ್ ಈ ಟೀಕೆಗಳನ್ನು ಮಾಡಿಸುತ್ತಿದ್ದಾರೆ ಎಂದು ಬಿಂಬಿಸಲು ಸಾರ್ವಜನಿಕ ಸಂಪರ್ಕ ಕಂಪನಿಗಳನ್ನು ನೇಮಿಸಿಕೊಂಡಿದ್ದಾರೆ ಎಂದು ನ್ಯೂಯಾಕರ್್ ಟೈಮ್ಸ್ ವರದಿ ಮಾಡಿತ್ತು.
ಫೇಸ್ ಬುಕ್ ತನ್ನನ್ನು ಬಿಟ್ಟರೆ ಮತ್ಯಾರು ಇಲ್ಲ ಎಂಬಂತೆ ವತರ್ಿಸುತ್ತಿದೆ. ಅದು ನಿಜವಲ್ಲ. ಫೇಸ್ ಬುಕ್ ಒಂದು ಸಂಸ್ಥೆ, ಅದು ಸಂಸ್ಥೆಯಂತೆಯೇ ಇರಬೇಕು. ಸಿಇಒ ಮತ್ತು ಮುಖ್ಯಸ್ಥನ ಹುದ್ದೆಯಲ್ಲಿ ಒಬ್ಬರೇ ಇರಬಾರದು ಎಂದು ಫೇಸ್ ಬುಕ್ ನಲ್ಲಿನ ಎರಡನೇ ಅತ್ಯಂತ ದೊಡ್ಡ ಷೇರುದಾರ ಜೋನಸ್ ಕ್ರೋನ್ ಆಗ್ರಹಿಸಿದ್ದಾರೆ.





