ಕುಂಬಳೆ: ವಾಣಿಯ ಅಥವಾ ಗಾಣಿಗ ಸಮುದಾಯದ ಪ್ರಸಿದ್ದ ಆರಾಧನಾಲಯವಾದ ಸೂರಂಬೈಲು ಸಮೀಪದ ಪೆರ್ಣೆಯಲ್ಲಿ ಮುಚ್ಚಿಲೋಟ್ ಶ್ರೀಭಗವತೀ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಹಾಗೂ ಚಪ್ಪರ ಮದುವೆ ಭಾನುವಾರ ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳಿಂದ ಸಾವಿರಾರು ಜನರ ಭಾಗವಹಿಸುವಿಕೆಯೊಮದಿಗೆ ನೆರವೇರಿತು.
ರಾಜ್ಯದ 108 ಮುಚ್ಚಿಲೋಟ್ ಭಗವತೀ ಕಾವು(ದೇವಾಲಯ)ಗಳಲ್ಲಿ ಪೆರ್ಣೆ ಕ್ಷೇತ್ರವೂ ಒಂದಾಗಿದ್ದು, ಕೇರಳದ ಅತ್ಯುತ್ತರ ದ ಕಾವು ಎಂದೇ ಪ್ರತೀತಿ ಪಡೆದಿದೆ. ಇಲ್ಲಿ ಹೂ, ಹಣ್ಣು, ಅಕ್ಕಿ ಹಗೂ ಅಪ್ಪ ಪ್ರಧಾನ ಪೂಜಾ ವಿಶೇಷವಾಗಿ ಗುರುತಿಸಲಾಗಿದೆ. ಚೆವ್ವ ವೆಳಕ್ಕು, ಉದಯಾಸ್ತಮಾನ, ಪುತ್ತರಿ, ಪೂರಂ, ಕೂಟ್ಟಂ ಹಾಗೂ ಪೆರುಕ್ಕಳಿಯಾಟ ಪ್ರತಿವರ್ಷ ಇಲ್ಲಿ ಆಚರಿಸಲ್ಪಡುವ ಉತ್ಸವಗಳಾಗಿವೆ.
ಪೆಣರ್ೆ ಭಗವತೀ ಕ್ಷೇತ್ರದಲ್ಲಿ ವಾಣಿಯ ಅಥವಾ ಗಾಣಿಗ ಸಮುದಾಯಕ್ಕೊಳಪಟ್ಟವರಿಗೆ ಎರಡು ಬಾರಿ ಸಾಮೂಹಿಕ ವಿವಾಹ ಏರ್ಪಡಿಸಲಾಗುತ್ತದೆ. ಅತ್ಯಂತ ಸರಳ ಮತ್ತು ಶಾಸ್ತ್ರೀಯ ಕ್ರಮದಲ್ಲಿ ಪೂರಂ ಉತ್ಸವ ಹಾಗೂ ಉದಯಾಸ್ತಮಾನ ಉತ್ಸವಗಳ ಸಂದರ್ಭ ವಿವಾಹ ಏರ್ಪಡಿಸಲಾಗುತ್ತದೆ. ಕ್ಷೇತ್ರ ಕಾರ್ನವರ್ ಗಳು ಮದುವೆಯ ನೇತೃತ್ವ ವಹಿಸುತ್ತಾರೆ.
ಭಾನುವಾರ ನಡೆದ ಸಾಮೂಹಿಕ ವಿವಾಹದಲ್ಲಿ 20 ಜೊಡಿಗಳು ಸಂಪ್ರದಾಯಬದದ್ದವಾದ ಆಚರಣೆಗಳೊಂದಿಗೆ ದಾಂಪತ್ಯದ ಹಸೆಮಣೆಗೇರಿದರು. ಇಲ್ಲಿಯ ಇನ್ನೊಂದು ವಿಶೇಷ ಆಚರಣೆಯಾದ ಚಪ್ಪರ ಮದುವೆಯಲ್ಲಿ 24 ಬಾಲಕಿಯರು ಭಾಗವಹಿಸಿದ್ದರು. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯ 4 ಸಾವಿರಕ್ಕಿಂತಲೂ ಮಿಕ್ಕಿದ ಜನರು ಪಾಲ್ಗೊಂಡಿದ್ದರು.






