ಕಾಸರಗೋಡು: ಕೋಟ್ಯಾಂತರ ಭಕ್ತಾದಿಗಳ ಆರಾಧನಾ ಕೇಂದ್ರವಾದ ಶಬರಿಮಲೆಯನ್ನು ನಾಶಗೊಳಿಸಲು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ, ನ್ಯಾಯವಾದಿ ಕೆ.ಶ್ರೀಕಾಂತ್ ಆರೋಪಿಸಿದರು.
ಶಬರಿಮಲೆ ದರ್ಶನಕ್ಕಾಗಿ ಇರುಮುಡಿಯೊಂದಿಗೆ ತೆರಳಿದ್ದ ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದಶರ್ಿ ಕೆ.ಸುರೇಂದ್ರನ್ ಅವರನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಪ್ರತಿಭಟಿಸಿ ಕೇರಳ ರಾಜ್ಯದಾದ್ಯಂತ ಭಾನುವಾರ ಆಯೋಜನೆಗೊಂಡ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿಯ ಅಂಗವಾಗಿ ಕಾಸರಗೋಡಿನ ಕರಂದಕ್ಕಾಡು ರಾ.ಹೆದ್ದಾರಿ ರಸ್ತೆ ತಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ಅಸ್ವಸ್ಥತೆಯಂತೆ ಮಾತನಾಡುವ ಮತ್ತು ಕೃತಿಗೆ ಇಳಿಯುವ ಪಿಣರಾಯಿ ವಿಜಯನ್ ಅವರ ಆಜ್ಞಾನುವತರ್ಿಗಳಾಗಿ ಪೊಲೀಸರು ವತರ್ಿಸುತ್ತಿರುವುದು ನಾಚಿಕೆಗೇಡು. ಕೇರಳದಲ್ಲಿ ಇಂದು ತುತರ್ು ಪರಿಸ್ಥಿತಿಗಿಂತಲೂ ಹೆಚ್ಚು ಪೊಲೀಸ್ ದೌರ್ಜನ್ಯ ನಡೆಯುತ್ತಿದೆ. ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡರೂ ಈ ಹೋರಾಟ ನಿಲ್ಲದು ಎಂದು ಎಚ್ಚರಿಸಿದ ಅವರು ಫೆಮಿನಿಸ್ಟ್ ರೆಹನಾ ಫಾತಿಮಾಳನ್ನು ಪೊಲೀಸ್ ಸಂರಕ್ಷಣೆಯಲ್ಲಿ ಶಬರಿಮಲೆಗೆ ಕರೆದೊಯ್ಯುವ ಪೊಲೀಸರು ಅಯ್ಯಪ್ಪ ಭಕ್ತರನ್ನು ಬೇಟೆಯಾಡುತ್ತಿರುವುದು ದುರಂತ ಎಂದರು. ಯಾವುದೇ ಕಾರಣಕ್ಕೂ ಆಚಾರ ಉಲ್ಲಂಘಿಸಿ ಯುವತಿಯರಿಗೆ ಶಬಿರಮಲೆಗೆ ಪ್ರವೇಶಿಸಲು ಬಿಡೆವು ಎಂದ ಅವರು ಅಧರ್ಮದ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು. ಪೊಲೀಸರ ದೌರ್ಜನ್ಯದಿಂದ ಬಿಜೆಪಿ ಕಾರ್ಯಕರ್ತರನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದ ಅವರು ಜೈಲು ಸೇರಿದರೂ ಶಬರಿಮಲೆ ರಕ್ಷಣೆಗಾಗಿ ಹೋರಾಟ ನಡೆಸಲಾಗುವುದು. ಉಸಿರಿರುವ ತನಕ ಶಬರಿಮಲೆ ಹೋರಾಟ ನಿಲ್ಲದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ರಸ್ತೆ ತಡೆ ಚಳವಳಿಯಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ಮಾಜಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಸುಧಾಮ ಗೋಸಾಡ ಸ್ವಾಗತಿಸಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ.ನಾಕ್, ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಮೊದಲಾದವರು ಮಾತನಾಡಿದರು. ನ್ಯಾಯವಾದಿ ಸದಾನಂದ ರೈ, ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಟೀಚರ್, ಪುರುಷೋತ್ತಮನ್, ಬಾಬು, ಹರೀಶ್ ನಾರಂಪಾಡಿ, ಮಾಧವ ಮಾಸ್ತರ್ ಮೊದಲಾದವರು ರಸ್ತೆ ತಡೆ ಚಳವಳಿಗೆ ನೇತೃತ್ವ ವಹಿಸಿದರು.




