ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಜನಸೇವಾ ಸಂಗಮ ಕನಿಯಾಲ ಆಶ್ರಯದಲ್ಲಿ ಧರ್ಮ ಸಮನ್ವಯದ ದೀಪಾವಳಿ ಆಚರಣೆ
ಉಪ್ಪಳ: ಜಾತಿ ಬೇಧ ಮರೆತು ಧರ್ಮ ಸಾಮರಸ್ಯ ಸಾರುವ ದೀಪಾವಳಿ ಆಚರಣೆಯನ್ನು ಜನಸೇವಾ ಸಂಗಮ ಕನಿಯಾಲ ಇದರ ವತಿಯಿಂದ ಆಚರಿಸಲಾಯಿತು. ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದವರು ಜೊತೆಯಾಗಿ ಪಾಲ್ಗೊಂಡು ದೀಪ ಬೆಳಗಿಸಿ, ಸಿಹಿ ತಿಂಡಿ ವಿತರಿಸುವ ಮೂಲಕ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದರು.
ಗುರುವಾರ ಸಂಜೆ ಕನಿಯಾಲ ಪರಿಸರದಲ್ಲಿ ನಡೆದ ಕಾರ್ಯಕ್ರಮವು ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯವನ್ನು ದೂರವಿರಿಸುವ ನವೀನ ಸಂದೇಶವನ್ನು ನೀಡಿತು. ಕಾರ್ಯಕ್ರಮದಲ್ಲಿ ಜನಸೇವಾ ಸಂಗಮದ ಗೌರವಾಧ್ಯಕ್ಷ ನಾಗಪ್ಪ ಆಚಾರ್ಯ ಕನಿಯಾಲ, ಕನಿಯಾಲ ಶಾರದಾ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಕ್ಷಕ ಸಂಘದ ಆದಂ ಕನಿಯಾಲ, ಪ್ರೀತಂ ಮಾಟರ್ಿಸ್, ಕಿಶೋರ್ ಡಿ'ಸೋಜಾ, ಹಸೈನಾರ್ ಕಡುವಜೆ, ಸಂಗಮದ ಅಧ್ಯಕ್ಷ ಈಶ್ವರ ಭಟ್ ಉಪಸ್ಥಿತರಿದ್ದರು. ವಿವಿಧ ಧಮರ್ೀಯ ಯುವಜನರು ಮತ್ತು ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜನಸೇವಾ ಸಂಗಮದ ಸಂಚಾಲಕ ಸುಬ್ಬ ಡ್ರೈವರ್ ಕನಿಯಾಲ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಸಂಗಮದ ಕೋಶಾಧಿಕಾರಿ ಎನ್.ಬಿ.ಎಸ್ ಸುಂದರ ದೀಪಾವಳಿ ಹಬ್ಬ ಮತ್ತು ಸಂಭ್ರಮಾಚರಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.




