ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಭಾವಪೂರ್ಣ ಶ್ರದ್ಧಾಂಜಲಿ
ಉಪ್ಪಳ: ಕಳೆದ ಏಳೂವರೆ ವರ್ಷಗಳ ಕಾಲ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪಣತೊಟ್ಟ ಶಾಸಕ ಪಿ.ಬಿ. ಅಬ್ದುಲ್ ರಜಾಕ್ರಿಗೆ ಕನಿಯಾಲ ಐಕ್ಯರಂಗ ಸಮಿತಿ ಭಾವಪೂರ್ಣ ಶ್ರದ್ಧಾಂಜಲಿ ಸೂಚಿಸಿದೆ. ಜಾತಿ, ಮತಗಳ ಗಡಿಯನ್ನು ದಾಟಿ ಎಲ್ಲರಿಗೂ ಸಮಾನ ಅವಕಾಶ ಅಭಿವೃದ್ಧಿ ದಿಶೆಯನ್ನು ತೋರಿದ್ದ ಅಬ್ದುಲ್ ರಜಾಕ್ ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಸಮಿತಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ತಿಂಗಳ ಹಿಂದೆ ನೂತನ ಕಾಂಕ್ರೀಟಿಕೃತ ಕನಿಯಾಲ-ಕೂಟೇಲು ರಸ್ತೆಯನ್ನು ಶಾಸಕರು ಉದ್ಘಾಟಿಸಿದ್ದರು.




