ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಅಂತರಾಷ್ಟ್ರೀಯ ಉರ್ದು ದಿನಾಚರಣೆ ದಿನಾಚರಣೆ
ಉಪ್ಪಳ: ರಾಷ್ಟ್ರದ ಸಾಹಿತ್ತಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಉರ್ದು ಭಾಷೆ ತನ್ನದೇ ವಿಶಿಷ್ಟ ಕೊಡುಗೆಗಳ ಮೂಲಕ ಸ್ಮರಣೀಯವಾಗಿದೆ. ಕವಿ ಶ್ರೇಷ್ಠ ಅಲ್ಲಾಮಾ ಮೊಹಮ್ಮದ್ ಇಕ್ಬಾಲ್ ಅವರ ಅಪಾರ ಪರಿಶ್ರಮವು ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರ ಒಗ್ಗೂಡುವಿಕೆಗೆ ಮಹತ್ವದ ಬಲ ನೀಡಿದೆ ಎಂದು ಮಂಗಲ್ಪಾಡಿ ಗ್ರಾ.ಪಂ. ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ತಿಳಿಸಿದರು.
ಸುಪ್ರಸಿದ್ದ ಉರ್ದು ಸಂತಕವಿ ಅಲ್ಲಾಮಾ ಮೊಹಮ್ಮದ್ ಇಕ್ಬಾಲ್ ಅವರ 141ನೇ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಲಾಗುವ ಅಂತರಾಷ್ಟ್ರೀಯ ಉರ್ದು ದಿನದ ಪ್ರಯುಕ್ತ ಶುಕ್ರವಾರ ಬೇಕೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಉರ್ದು ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಪ್ರಭಾರ ಪ್ರಾಂಶುಪಾಲ ನಾರಾಯಣ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗ್ರಾ.ಪಂ. ಸದಸ್ಯ ಉಮೇಶ ಶೆಟ್ಟಿ, ಹಸೀನಾ ಟೀಚರ್, ಶಾಲಾ ನೌಕರ ಸಂಘದ ಕಾರ್ಯದಶರ್ಿ ಝೀನಾ ಟೀಚರ್ ಉಪಸ್ಥಿತರಿದ್ದು ಶುಭಹಾರೈಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾಥರ್ಿಗಳಿಗೆ ಆಯೋಜಿಸಿದ್ದ ವಿವಿಧಸ್ಪಧರ್ಾ ವಿಜೇತರಿಗೆ ಮುಖ್ಯೋಪಾಧ್ಯಾಯ ಉದಯಶಂಕರ ಹಾಗೂ ಶಾಲಾ ಹಿರಿಯ ಶಿಕ್ಷಕ ಚಂದ್ರಹಾಸ ಬಹುಮಾನ ವಿತರಿಸಿ ಶುಭಹಾರೈಸಿದರು. ಉದರ್ು ಶಿಕ್ಷಕ ಮೊಹಮ್ಮದ್ ಅಝೀಂ ಮಣಿಮುಂಡ ಪ್ರಾಸ್ತಾವಿಕವಾಗಿ ಮಾತನಾಡಿ ದಿನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ವಿದ್ಯಾಥರ್ಿ ಶುಆನಸ್ ಸ್ವಾಗತಿಸಿ, ಶಿಕ್ಷಕ ರಾಧಾಕೃಷ್ಣ ಬಲ್ಯಾಯ ವಂದಿಸಿದರು. ವಿದ್ಯಾಥರ್ಿ ಸ್ಯಯ್ಯದ್ ಬಿಲಾಲ್ ಕಾರ್ಯಕ್ರಮ ನಿರೂಪಿಸಿದನು.




