ಸಪ್ಲೈಕೋ ಭತ್ತ ಸಂಗ್ರಹ ಯೋಜನೆ ಜಿಲ್ಲೆಯಲ್ಲಿ 150 ಕೃಷಿಕರು ಹೆಸರು ನೋಂದಾವಣೆ
0
ಡಿಸೆಂಬರ್ 27, 2018
ಕಾಸರಗೋಡು: ಭತ್ತಕ್ಕೆ ನ್ಯಾಯ ಬೆಲೆ ದೊರಕಿಸುವ ಉದ್ದೇಶದೊಂದಿಗೆ ಸಪ್ಲೈಕೋ ಆರಂಭಿಸಿದ್ದ ಭತ್ತ ಸಂಗ್ರಹ ಪ್ರಕ್ರಿಯೆ ರಾಜ್ಯದಲ್ಲಿ ಯಶಸ್ವಿಯತ್ತ ಸಾಗುತ್ತಿದ್ದು, ಕಾಸರಗೋಡು ಜಿಲ್ಲೆಯಲ್ಲಿ 150 ಕೃಷಿಕರು ಹೆಸರು ನೋಂದಾಯಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 295.18 ಎಕ್ರೆ ಸ್ಥಳದಲ್ಲಿ ಭತ್ತ ಬೆಳೆದಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 89,128 ಕೃಷಿಕರು ಹೆಸರು ನೋಂದಾಯಿಸಿದ್ದಾರೆ. ಈ ಇಷ್ಟು ಮಂದಿ 295.18 ಎಕ್ರೆ ಸ್ಥಳದಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಅತೀ ಕಡಿಮೆ ಕೃಷಿಕರು ಹೆಸರು ನೋಂದಾಯಿಸಿದ್ದು ಕಲ್ಲಿಕೋಟೆ ಜಿಲ್ಲೆಯಲ್ಲಿ. ಅತೀ ಹೆಚ್ಚು ಪಾಲ್ಘಾಟ್ ಜಿಲ್ಲೆಯಲ್ಲಿ. ಕಲ್ಲಿಕೋಟೆ ಜಿಲ್ಲೆಯಲ್ಲಿ ಕೇವಲ ಐದು ಮಂದಿ ಮಾತ್ರವೇ ಹೆಸರು ನೋಂದಾಯಿಸಿದ್ದಾರೆ. ಇವರು 9.16 ಎಕ್ರೆ ಸ್ಥಳದಲ್ಲಿ ಭತ್ತ ಬೆಳೆದಿದ್ದಾರೆ. ಅದೇ ರೀತಿ ಪಾಲ್ಘಾಟ್ ಜಿಲ್ಲೆಯಲ್ಲಿ 46689 ಕೃಷಿಕರು ಹೆಸರು ನೋಂದಾಯಿಸಿದ್ದು 81678.06 ಎಕ್ರೆ ಸ್ಥಳದಲ್ಲಿ ಭತ್ತ ಬೆಳೆದಿದ್ದಾರೆ. ಇಡುಕ್ಕಿಯಲ್ಲಿ 22 ಮಂದಿ 36.81 ಎಕ್ರೆ ಸ್ಥಳದಲ್ಲಿ ಭತ್ತ ಬೆಳೆದಿದ್ದರೆ, ಕಣ್ಣೂರಿನಲ್ಲಿ 111 ಮಂದಿ 170.87 ಎಕ್ರೆ ಸ್ಥಳದಲ್ಲಿ ಭತ್ತ ಬೆಳೆದಿದ್ದಾರೆ.
ಕೊಲ್ಲಂನಲ್ಲಿ 224 ಮಂದಿ ಕೃಷಿಕರು 529.34 ಎಕ್ರೆ ಸ್ಥಳದಲ್ಲಿ ಭತ್ತ ಬೆಳೆದಿದ್ದರೆ, ತಿರುವನಂತಪುರದಲ್ಲಿ 662 ಕೃಷಿಕರು 1031 ಎಕ್ರೆ ಸ್ಥಳದಲ್ಲಿ ಭತ್ತ ಬೆಳೆದಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯಲ್ಲಿ 827 ಕೃಷಿಕರು 1935.25 ಎಕ್ರೆ ಸ್ಥಳದಲ್ಲಿ ಭತ್ತ ಬೆಳೆದಿದ್ದಾರೆ. ಆಲಪ್ಪುಳದಲ್ಲಿ 15080 ಮಂದಿ 281335.3 ಎಕ್ರೆ ಸ್ಥಳದಲ್ಲಿ ಭತ್ತ ಬೆಳೆದಿದ್ದಾರೆ. ಕೋಟ್ಟಯಂನಲ್ಲಿ 7100 ಕೃಷಿಕರು 13442.24 ಎಕ್ರೆ, ಎರ್ನಾಕುಳಂನಲ್ಲಿ 450 ಕೃಷಿಕರು 741.17 ಎಕ್ರೆ ಸ್ಥಳದಲ್ಲಿ, ತೃಶ್ಶೂರಿನಲ್ಲಿ 13179 ಮಂದಿ 18785.06 ಎಕ್ರೆ, ಮಲಪ್ಪುರಂನಲ್ಲಿ 1403 ಕೃಷಿಕರು 3530.28 ಎಕ್ರೆ, ವಯನಾಡುನಲ್ಲಿ 3226 ಮಂದಿ 5257.4 ಎಕ್ರೆ ಸ್ಥಳದಲ್ಲಿ ಭತ್ತ ಬೆಳೆದಿದ್ದಾರೆ. ಇವರೆಲ್ಲ ಹೆಸರು ನೋಂದಾಯಿಸಿದ್ದಾರೆ. ಈಗಾಗಲೇ ಹೆಸರು ನೋಂದಾಯಿಸಿದ 89,128 ಮಂದಿ ಕೃಷಿಕರನೆ ಒಟ್ಟು 1,55,573 ಎಕ್ರೆ ಸ್ಥಳದಲ್ಲಿ ಭತ್ತ ಬೆಳೆದಿದ್ದಾರೆ.
ಜನವರಿ ಎರಡನೇ ವಾರದಿಂದ ಕಿಲೋಗ 25.30 ರೂಪಾಯಿ ದರದಲ್ಲಿ ಭತ್ತ ಸಂಗ್ರಹಕ್ಕೆ ಸಪ್ಲೈಕೋ ಚಾಲನೆ ನೀಡಲಿದೆ.
ಕಳೆದ ಹಣಕಾಸು ವರ್ಷ ಕಿಲೋಗೆ 23.30 ರೂಪಾಯಿ ದರದಲ್ಲಿ ಭತ್ತ ಸಂಗ್ರಹಿಸಲಾಗಿತ್ತು. ಭತ್ತ ಸಂಗ್ರಹಗೊಂಡ ಐದು ದಿನದೊಳಗೆ ಹಣ ಆಯಾ ಕೃಷಿಕರ ಬ್ಯಾಂಕ್ ಖಾತೆಗೆ ತಲುಪಲಿದೆ. ಸಪ್ಲೈಕೋದೊಂದಿಗೆ ಒಪ್ಪಂದ ನಡೆಸಿದ ಬ್ಯಾಂಕ್‍ಗಳ ಖಾತೆ ನಂಬ್ರವನ್ನು ಕೃಷಿಕರು ಹೆಸರು ನೋಂದಾವಣೆ ಸಂದರ್ಭದಲ್ಲಿ ನೀಡಬೇಕಾಗಿದೆ. ಓರ್ವ ಕೃಷಿಕ ನೋಂದಾಯಿಸಬಹುದಾದ ಗರಿಷ್ಠ ಸ್ಥಳ ಐದು ಎಕ್ರೆಯಾಗಿದೆ. ಸ್ವಸಹಾಯ ಸಂಘಗಳು ಹಾಗು ತಂಡಗಳಾಗಿ ಕೃಷಿ ನಡೆಸುವವರಿಗೆ 25 ಎಕ್ರೆ ವರೆಗೆ ನೋಂದಾಯಿಸಬಹುದಾಗಿದೆ.





