HEALTH TIPS

ತ್ಯಾಜ್ಯಗಳನ್ನು ತಂದೆಸೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ

ತಿರುವನಂತಪುರ: ರಾಜ್ಯದಲ್ಲಿ ಜಲಾಶಯ ಮತ್ತು ಜನವಾಸ ಕೇಂದ್ರಗಳಲ್ಲಿ ತ್ಯಾಜ್ಯ ತಂದು ಎಸೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಕೇಸು ದಾಖಲಿಸುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಚ್ಚರಿಕೆ ನೀಡಿದ್ದಾರೆ. ಮಾಲಿನ್ಯ ತಂದು ಹಾಕುವವರನ್ನು ಗುರುತಿಸಿ ಆ ಬಗ್ಗೆ ಸದಾ ನಿಗಾ ಇರಿಸಲು ರೆಸಿಡೆನ್ಸ್ ಅಸೋಸಿಯೇಶನ್‍ಗಳ ಸಹಕಾರದೊಂದಿಗೆ ಸಾಧ್ಯವಿರುವ ಎಲ್ಲೆಡೆ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ತ್ಯಾಜ್ಯ ಅಪರಾ„ಗಳಾಗಿ ಪರಿಗಣಿಸಿ ಅವರ ವಿರುದ್ಧ ಕೇಸು ದಾಖಲಿಸಲು ಆದೇಶ ನೀಡಲಾಗಿದೆ ಎಂದು ಅವರು ತಿರುವನಂತಪುರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಸ್ತೆ ಬದಿಗಳಲ್ಲಿ, ಸಾರ್ವಜನಿಕ ಪ್ರದೇಶಗಳು, ಜನವಾಸ ಕೇಂದ್ರಗಳು, ಬಸ್ ಮತ್ತು ರೈಲು ನಿಲ್ದಾಣಗಳು, ಜಲಸಂಪನ್ಮೂಲಗಳಿಗೆ ಮಾಲಿನ್ಯ ತಂದೆಸೆಯುವವರ ಮೇಲೆ ಸದಾ ನಿಗಾ ಇರಿಸಲು ರೈಲ್ವೇ ಪೆÇಲೀಸ್, ಸೈಡರ್ ಪೆಟ್ರೋಲಿಂಗ್, ಪೆÇಲೀಸ್ ಠಾಣೆಗಳ ಸಂಚಾರಿ ಪೆÇಲೀಸ್ ಘಟಕಗಳ ಮೂಲಕವೂ ನಿಗಾ ವಹಿಸಲಾಗುವುದು ಎಂದವರು ಹೇಳಿದರು. ಶುಚಿತ್ವ ಮಿಷನ್ ಕಾರ್ಯ ಚಟುವಟಿಕೆಗಳೊಂದಿಗೆ ಸಹಕರಿಸುವಂತೆ ರಾಜ್ಯದ ಎಲ್ಲ ಪೆÇಲೀಸ್ ಠಾಣೆಗಳಿಗೂ ನಿರ್ದೇಶನ ಕೊಡಲಾಗಿದೆ. ಜಲಾಶಯಗಳಲ್ಲಿ ತ್ಯಾಜ್ಯ ತಂದು ಹಾಕಿರುವುದಕ್ಕೆ ಸಂಬಂಧಿಸಿ ಎರ್ನಾಕುಳಂ ಜಿಲ್ಲೆಯಲ್ಲಿ ಮಾತ್ರವಾಗಿ 402 ಕೇಸುಗಳನ್ನು ದಾಖಲಿಸಿ 459 ಮಂದಿಯನ್ನು ಬಂ„ಸಲಾಗಿದೆ. 173 ವಾಹನಗಳನ್ನು ವಶಪಡಿಸಲಾಗಿದೆ. ಅಂತಹ ಕ್ರಮವನ್ನು ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಕಾರ್ಯರೂಪಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮುನ್ನೆಚ್ಚರಿಕೆಯಿತ್ತರು. ಸಾರ್ವಜನಿಕ ಪ್ರದೇಶಗಳನ್ನು ಆದಷ್ಟು ಮಾಲಿನ್ಯ ಮುಕ್ತಗೊಳಿಸಿದಲ್ಲಿ ಅನೇಕ ಸಾಂಕ್ರಾಮಿಕ ಮಾರಕ ರೋಗಗಳನ್ನು ಇಲ್ಲದಾಗಿಸಬಹುದು. ಈ ನಿಟ್ಟಿನಲ್ಲಿ ಕೇರಳದ ಪ್ರತಿಯೋರ್ವ ಪ್ರಜೆಯೂ ಶ್ರಮಿಸಬೇಕು. ಪ್ಲಾಸ್ಟಿಕ್ ಸಹಿತ ಇನ್ನಿತರ ಪರಿಸರ ವಿರೋ„ ಮಾಲಿನ್ಯ ಎಲ್ಲೆಂದರಲ್ಲಿ ಎಸೆಯುವುದರಿಂದ ಹಲವು ವರ್ಷಗಳ ಕಾಲ ಮಣ್ಣಿನಲ್ಲಿ ಭಾರೀ ಸಮಸ್ಯೆಗಳು ಹಾಗೆಯೇ ಜೀವಂತವಾಗಿ ಇರುತ್ತವೆ. ಈ ಬಗ್ಗೆಯಾದರೂ ಜನರು ಗಮನಿಸಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries