ಪ್ರೇರಣಾ ಸಾರ್ವಜನಿಕ ಗ್ರಂಥಾಲಯದಿಂದ ಅಂಬೇಡ್ಕರ್ ಸಂಸ್ಮರಣೆ
0
ಡಿಸೆಂಬರ್ 09, 2018
ಮಂಜೇಶ್ವರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಕೊಡ್ಲಮೊಗರು ಪ್ರೇರಣಾ ಸಾರ್ವಜನಿಕ ಗ್ರಂಥಾಲಯದ ವತಿಯಿಂದ ಅಂಬೇಡ್ಕರ್ ಸಂಸ್ಮರಣೆ ನಡೆಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಹಿರಿಯ, ಕಿರಿಯ ಪ್ರಾಥಮಿಕ ಶಾಲೆ, ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ವಿಭಾಗದ ಮಕ್ಕಳಿಗೆ ರಸ ಪ್ರಶ್ನೆ ಸ್ಪರ್ಧೆ ಜರಗಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇರಳ ರಾಜ್ಯ ತುಳು ಅಕಾಡೆಮಿ ಸದಸ್ಯೆ ರಾಜೀವಿ ಟೀಚರ್ ಬಹುಮಾನ ವಿತರಿಸಿದರು. ಗ್ರಂಥಾಲಯದ ಅಧ್ಯಕ್ಷ ಜಯರಾಮ ಕೊಣಿಬೈಲ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರತೀಶ್ ಕಾನ, ಮೋನಪ್ಪ ಕೊಣಿಬೈಲ್, ಪ್ರಶಾಂತ್ ದೈಗೋಳಿ, ಚರಣ್ ಕೊಡ್ಲಮೊಗರು, ಭರತ್ ಮೊದಲಾದವರು ಉಪಸ್ಥಿತರಿದ್ದರು. ಗ್ರಂಥಾಲಯದ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸರಸ್ವತಿ ಕೊಣಿಬೈಲ್ ವಂದಿಸಿದರು.
ರಸ ಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರು : ಕಿರಿಯ ಪ್ರಾಥಮಿಕ ವಿಭಾಗ : ಸುಚಿತಾ ಕೊಣಿಬೈಲ್(ಪ್ರಥಮ), ಚಿರಂತನ ಕೆ.(ದ್ವಿತೀಯ), ನಿಶಿತಾ(ತೃತೀಯ), ಹಿರಿಯ ಪ್ರಾಥಮಿಕ ವಿಭಾಗ : ಹಝ್ರೀನಾ ಬಾನು(ಪ್ರಥಮ), ದೀಕ್ಷಿತಾ ಕೆ(ದ್ವಿತೀಯ), ಅಫ್ರೀನಾ ಬಾನು(ತೃತೀಯ), ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ವಿಭಾಗದಲ್ಲಿ ಚರಣ್‍ರಾಜ್ ಗುವೆದಪಡ್ಪು(ಪ್ರಥಮ), ಯತೀಶ್(ದ್ವಿತೀಯ), ರುಕ್ಷಾನ ಗುವೆದಪಡ್ಪು(ತೃತೀಯ) ಬಹುಮಾನ ಪಡೆದರು.





