ಮಧೂರು ಬ್ಯಾಂಕ್ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ
0
ಡಿಸೆಂಬರ್ 09, 2018
ಮಧೂರು: ಮಧೂರು ಸೇವಾ ಸಹಕಾರಿ ಬ್ಯಾಂಕ್‍ನ 2018-2023ನೇ ಸಾಲಿನ ಆಡಳಿತ ಮಂಡಳಿಗೆ ಸಹಕಾರ ಭಾರತಿಯ ನಿರ್ದೇಶಕರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಒಂಬತ್ತು ಸದಸ್ಯರಿರುವ ಆಡಳಿತ ಮಂಡಳಿಗೆ ಎಂ.ಸುಬ್ಬಣ್ಣ ನಾಯ್ಕ್, ಸಂತೋಷ್‍ಕುಮಾರ್ ನಾಯ್ಕ್ ಮಧೂರು, ಡಿ.ಸರ್ವೇಶ್ವರ ಕುಮಾರ್ ಭಟ್, ಉಮೇಶ ಎಂ., ನಾರಾಯಣಯ್ಯ ಕೆ., ಅನುಪಮಾ ಐ., ಪುಷ್ಪಲತಾ ಎಲ್., ಶಾರದಾ ಎಸ್.ಎನ್.ಭಟ್, ರಾಮ ಎ. ಅವರು ನೂತನವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಆಡಳಿತ ಮಂಡಳಿಯ ನಾಲ್ಕು ಮಂದಿ ನಿರ್ದೇಶಕರನ್ನು ಉಳಿಸಿಕೊಂಡು ನವಾಗತರಾದ ಐವರಿಗೆ ಅವಕಾಶ ನೀಡಲಾಗಿದೆ. ಸಹಕಾರ ಭಾರತಿಯ ಪದಾಧಿಕಾರಿಗಳಾದ ಗಣಪತಿ ಕೋಟೆಕಣಿ, ಗಣೇಶ್ ಪಾರಕಟ್ಟೆ, ಪದ್ಮರಾಜ ಪಟ್ಟಾಜೆ ಹಾಗೂ ರಾಧಾಕೃಷ್ಣ ಸೂರ್ಲು ಸದಸ್ಯರ ಆಯ್ಕೆಗೆ ಸಹಕರಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಮುಂದಿನ ವಾರದಲ್ಲಿ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬರಲಿದೆ.




