ಹಿಂದೂ ಸಮಾಜೋತ್ಸವ : ಮಧೂರಿನಲ್ಲಿ ಬೈಕ್ ರ್ಯಾಲಿ
0
ಡಿಸೆಂಬರ್ 09, 2018
ಮಧೂರು: ವಿದ್ಯಾನಗರದ ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂನಲ್ಲಿ ಡಿ.16 ರಂದು ನಡೆಯಲಿರುವ ಬೃಹತ್ ಹಿಂದೂ ಸಮಾಜೋತ್ಸವದ ಪ್ರಚಾರಾರ್ಥವಾಗಿ ಮಧೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ಬೈಕ್ ರ್ಯಾಲಿ ನಡೆಯಿತು. ಭಜರಂಗದಳ ಮುಖಂಡ ಶರಣ್ ಪಂಪ್‍ವೆಲ್ ಬೈಕ್ ರ್ಯಾಲಿಯನ್ನು ಉದ್ಘಾಟಿಸಿದರು.
ಕುದ್ರೆಪ್ಪಾಡಿಯಿಂದ ಆರಂಭಗೊಂಡ ಬೈಕ್ ರ್ಯಾಲಿ ಮಧೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಮುಖ ಬೀದಿಗಳಾದ ಮಾಯಿಪ್ಪಾಡಿ, ಶಿರಿಬಾಗಿಲು, ರಾಮದಾಸನಗರ, ಪಾರೆಕಟ್ಟೆ, ಮನ್ನಿಪ್ಪಾಡಿ, ಉಳಿಯತ್ತಡ್ಕ ಮೊದಲಾದೆಡೆ ಸಾಗಿ ಮಧೂರು ಪರಿಸರದಲ್ಲಿ ಸಂಪನ್ನಗೊಂಡಿತು. ಬೈಕ್ ರ್ಯಾಲಿ ಮೂಲಕ ಹಿಂದೂ ಸಮಾಜೋತ್ಸವದ ಪ್ರಚಾರಕಾರ್ಯ ನಡೆಯಿತು. ನೂರಾರು ಬೈಕ್‍ಗಳಲ್ಲಿ ನಡೆದ ರ್ಯಾಲಿಯುದ್ದಕ್ಕೂ ಹಿಂದೂ ಪರ ಘೋಷಣೆಗಳನ್ನು ಮೊಳಗಿಸಲಾಯಿತು. ಭೀ ಸಂದರ್ಭದಲ್ಲಿ ಮೊಗ್ರಾಲ್ ಪುತ್ತೂರು ಪಂಚಾಯತಿ ವ್ಯಾಪ್ತಿಯಲ್ಲಿ ಸಾಮೂಹಿಕ ಓಟ ಜರಗಿತು.






