ವೈಗ-ಕೃಷಿ ಉನ್ನತಿ ಮೇಳ-ನೋಂದಣಿ ಆರಂಭ
0
ಡಿಸೆಂಬರ್ 12, 2018
ಕಾಸರಗೋಡು: ರಾಜ್ಯ ಕೃಷಿ ಇಲಾಖೆ, ಭಾರತೀಯ ಕೃಷಿ ಸಂಶೋಧನೆ ಮಂಡಳಿ ಜಂಟಿ ವತಿಯಿಂದ ಡಿ.27ರಿಂದ30 ವರೆಗೆ ತ್ರಿಶೂರು ತೆಕ್ಕಿನ್ ಕಾಡ್ ಮೈದಾನದಲ್ಲಿ ನಡೆಸಲಾಗುವ ವೈಗ-ಕೃಷಿ ಉನ್ನತ ಮೇಳ-2018 ಅಂತಾರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಮತ್ತು ಪ್ರದರ್ಶನದ ನೋಂದಣಿ ಆರಂಭಗೊಂಡಿದೆ. ಹಣ್ಣು-ತರಕಾರಿ, ಪರಿಮಳ ಬೆಳೆಗಳು, ಹೂವಿನ ಕೃಷಿ ಇತ್ಯಾದಿಗಳ ಉತ್ಪನ್ನಗಳ ಪರಿಷ್ಕರಣೆ, ಗುಣಮಟ್ಟ ಹೆಚ್ಚಳ ಇತ್ಯಾದಿಗಳು 4 ದಿನ ನಡೆಯುವ ಕಾರ್ಯಾಗಾರದ ಪ್ರಮುಖ ವಿಷಯಗಳಾಗಿವೆ. ಭಾರತೀಯ ಕೃಷಿ ಸಂಶೋಧನೆ ಮಂಡಳಿ ನೇತರತ್ವದಲ್ಲಿ ಪಶುಸಂಗೋಪನೆ, ಮೀನು ಸಾಕಣೆ, ಹಾರ್ಟಿ ಕಲ್ಚರ್ ವಿಭಾಗ ಇತ್ಯಾದಿ ಸಂಬಂಧ ವಿಶೇಷ ಗೋಷ್ಠಿಗಳು ನಡೆಯಲಿವೆ. ಆಸ್ಟ್ರೇಲಿಯ, ನೆದರ್ ಲ್ಯಾಂಡ್ ಸಹಿತ ವಿದೇಶಗಳಿಂದ ಪರಿಣತರು, ವಿಜ್ಞಾನಿಗಳು ಮೇಳದಲ್ಲಿ ಭಾಗವಹಿಸುವರು. ವಿಚಾರಸಂಕಿರಣ ಮತ್ತು ಕೃಷಿಕರ ಉತ್ಪನ್ನಗಳ ಪ್ರದರ್ಶನ ಮಳಿಗೆಯಲ್ಲಿಭಾಗವಹಿಸಲು ಆಸಕ್ತರಿಗಾಗಿ ನೋಂದಣಿ ಆರಂಭಗೊಂಡಿದೆ. ನೋಂದಣಿಗಾಗಿ www.vaigakum.com ಎಂಬ ವೆಬ್ ಸೈಟ್, ಮಾಹಿತಿಗಾಗಿ kumvaiga 2018@gmail.com ಎಂಬ ಈ ಮೇಲ್, ಅಥವಾ ಮಾಹಿತಿಗೆ ದೂರವಾಣಿ ಸಂಖ್ಯೆ: 0471-2304480, 2740440, 2330129, 9447980867, 9447103411.

