ನೋಟು ನಿಷೇಧ ಬೆಂಬಲಿಸಿದ್ದ ಕೃಷ್ಣಮೂತರ್ಿ ಸುಬ್ರಮಣಿಯನ್ ಮುಖ್ಯ ಆಥರ್ಿಕ ಸಲಹೆಗಾರ!
0
ಡಿಸೆಂಬರ್ 08, 2018
ನವದೆಹಲಿ: ಕೇಂದ್ರದ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿ ಸಕರ್ಾರದ ನೋಟು ನಿಷೇಧ ನೀತಿಯನ್ನು ಬೆಂಬಲಿಸಿದ್ದ ಇಂಡಿಯನ್ ಸ್ಕೂರ್ ಆಫ್ ಬ್ಯುಸಿನೆಸ್ ಹೈದರಾಬಾದ್'ನ ಪ್ರಾಧ್ಯಾಪಕ ಕೃಷ್ಣಮೂತರ್ಿ ಸುಬ್ರಮಣಿಯನ್ ಅವರನ್ನು ಮುಖ್ಯ ಆಥರ್ಿಕ ಸಲಹೆಗಾರರನ್ನಾಗಿ ಕೇಂದ್ರ ಸಕರ್ಾರ ಶುಕ್ರವಾರ ನೇಮಕ ಮಾಡಿದೆ.
ಅರವಿಂದ ಸುಬ್ರಮಣಿಯನ್ ಅವರ ರಾಜೀನಾಮೆಯಿಂದ ಈ ಹುದ್ದೆ ತೆರವಾಗಿತ್ತು. ಸಂಪುಟದ ನೇಮಕಾತಿ ಸಮಿತಿ ಮುಖ್ಯ ಆಥರ್ಿಕ ಸಲಹೆಗಾರ ಹುದ್ದೆಗೆ ಕೃಷ್ಣಮೂತರ್ಿ ಸುಬ್ರಮಣಿಯನ್ ಅವರನ್ನು ನೇಮಿಸಿದ್ದು, 3 ವರ್ಷಗಳ ಕಾಲ ಕೃಷ್ಣಮೂತರ್ಿಯವರು ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.
ಮೂಲತಃ ತಮಿಳುನಾಡಿನ ಸುಬ್ರಮಣಿಯನ್ ಪ್ರಸ್ತುತ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ನಲ್ಲಿ ಹಣಕಾಸು ವಿಷಯದಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ. ಶಿಕಾಗೋ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್'ನಲ್ಲಿ ಸುಬ್ರಮಣಿಯನ್ ಅವರು ಪಿಹೆಚ್'ಡಿ ಪೂರೈಸಿದ್ದಾರೆ.





