ಭೀಮಬಲಾನ್ವಿತ ಮಗುವಿಗೆ ಜನ್ಮ ನೀಡಿದ ಮೈಸೂರು ಮಹಿಳೆ!
0
ಡಿಸೆಂಬರ್ 08, 2018
ಮೈಸೂರು: ಪ್ರತಿಯೊಬ್ಬ ತಾಯಿಯೂ ತನ್ನ ಮಗು ಎಲ್ಲ ಮಕ್ಕಳಿಗಿಂತಲೂ ಮಿಗಿಲಾಗಿರಬೇಕು. ವಿಶಿಷ್ಟ ನಾಗಿ ಗುರುತಿಸಲ್ಪಡಬೇಕು. ಸಾಮಥ್ರ್ಯದಲ್ಲಿ ಭೀಮನೋ..ಅರ್ಜುನನಂತೆಯೋ ಇರಬೇಕು ಎಂದೆಲ್ಲ ಹಂಬಲಿಸುವುದು ಸಹಜ. ಆದರೆ ಎಲ್ಲವೂ ಕೈಗೂಡಬೇಕೆಂದಿಲ್ಲ. ಕೆಲವು ಆಕಾಂಕ್ಷೆಗಳು ಈಡೇರುವುದೂ ಇಲ್ಲದಿಲ್ಲ. ಆದರೆ ಇದನ್ನು ಅದ್ಭುತವೆನ್ನದೆ ವಿಧಿಯೇ ಇಲ್ಲ. ಸಾಮಾನ್ಯವಾಗಿ ಹುಟ್ಟುವ ಮಗುವಿನ ತೂಕ ಎರಡೂವರೆ, ಮೂರು ಕ್ಕೆಜಿ ತೂಗುವುದು ಸಾಮಾನ್ಯ ಆದರೆ ಮೈಸೂರಿನಲ್ಲಿ ಜನಿಸಿದ ಮಗುವೊಂದು ಹುಟ್ಟುವಾಗಲೇ ಐದು ಕೆಜಿ ತೂಗುತ್ತಿದೆ.
ಮೈಸೂರು ನಗರದ ಅಗ್ರಹಾರ ನಿವಾಸಿಯಾದ ಸಿದ್ದರಾಜು ಹಾಗೂ ರಾಜೇಶ್ವರಿ ದಂಪತಿಗೆ ಜನಿಸಿದ ಈ "ಬಲಭೀಮ"ನಂತಹಾ ಗಂಡು ಮಗು ಜನಿಸಿದ್ದು ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಅಪರೂಪದ ಮಗುವಿನ ಜನನವಾಗಿದೆ.
ಶುಕ್ರವಾರ ರಾತ್ರಿ ರಾಜೇಶ್ವರಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ಮಧ್ಯರಾತ್ರಿ ವೇಳೆಗೆ ಈ ವಿಶೇಷ ಭಾರದ ಮಗು ಜನ್ಮಿಸಿದೆ. ಮಗುವಿನ ತೂಕ ಹೆಚ್ಚಿದ್ದ ಕಾರಣ ವೈದ್ಯರು ಸಿಸೇರಿಯನ್ ಮಾಡಿ ಮಗುವನ್ನು ಹೊರತೆಗೆದಿದ್ದಾರೆ.
ಸಧ್ಯ ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.





