ಬಾಯಿಕಟ್ಟೆ ಪಳ್ಳ ಶುಚೀಕರಣ
0
ಡಿಸೆಂಬರ್ 11, 2018
ಉಪ್ಪಳ: ಹರಿತ ಕೇರಳಂ ಮಿಷನ್ ವಾರ್ಷಿಕೋತ್ಸವ ಅಂಗವಾಗಿ ಪೈವಳಿಕೆ ಸಮೀಪದ ಬಾಯಿಕಟ್ಟೆಯ ಪಾರಂಪರಿಕ ಹಳ್ಳವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಂಗಳವಾರ ಕಾರ್ಯಯೋಜನೆಗೆ ರೂಪುನೀಡಲಾಗಿದೆ.
ಹಳ್ಳದ ಪರಿಸರದಲ್ಲಿ ವಾಹನಗಳನ್ನು ತೊಳೆಯುವುದು, ತ್ಯಾಜ್ಯ ತಂದು ಎಸೆಯುವುದು ಮೊದಲಾದ ಪ್ರಕೃತಿಗೆ ಹಾನಿಕಾರಕ ಚಟುವಟಿಕೆಗಳಿಂದ ಇಲ್ಲಿಯ ಪಾರಂಪರಿಕ ಜಲಾಶಯದ ನೀರು ಹಾಳಾಗುತ್ತಿದೆ.ಈ ನಿಟ್ಟಿನಲ್ಲಿ ಮಂಗಳವಾರ ಹಳ್ಳವನ್ನು ಶುಚೀಕರಿಸುವ ಚಟುವಟಿಕೆಗೆ ಚಾಲನೆ ನೀಡಲಾಯಿತು.
ಶುಚೀಕರಣದ ಉದ್ಘಾಟನೆಯನ್ನು ಪೈವಳಿಕೆ ಗ್ರಾಮಪಂಚಾಯತಿ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಉದ್ಘಾಟಿಸಿದರು. ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ತ್ಯಾಜ್ಯ ತಂದು ಹಾಕುವವರ ಪತ್ತೆಗಾಗಿ ಸಿ.ಸಿ.ಕ್ಯಾಮೆರಾ ಸ್ಥಾಪಿಸಲು ಮತ್ತು ಪಳ್ಳದ ಸಂರಕ್ಷಣೆಗೆ ಸುತ್ತು ಬೇಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.



