ಕಾಸರಗೋಡು ಜಿಲ್ಲಾ ಶ್ರೀ ಸತ್ಯಸಾಯಿ ಸೇವಾ ಸಮಿತಿಗಳ ತ್ರೈಮಾಸಿಕ ಶಿಬಿರ
0
ಡಿಸೆಂಬರ್ 11, 2018
ಕುಂಬಳೆ: ಸಮಾಜಮುಖೀ ಚಿಂತನೆಗಳಿಂದ ಸಂಸ್ಥೆಗಳು ಬಲಗೊಂಡಾಗ ಶ್ರೀ ಸತ್ಯಸಾಯಿ ಬಾಬಾ ಅವರ ಮಾರ್ಗದರ್ಶನದಲ್ಲಿ ಸ್ಥಾಪಿತಗೊಂಡ ಸಾಯಿ ಸಂಸ್ಥೆಗಳು ಸಮಾಜದಲ್ಲಿ ಅತ್ಯುನ್ನತ ಸ್ಥಾನದಲ್ಲಿ ನಿಲ್ಲುತ್ತದೆ. ಸಂಸ್ಥೆಯ ಕಾರ್ಯಕರ್ತರು ತಮ್ಮ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದಲ್ಲಿ ಸಾಯಿಬಾಬಾ ಅವರ ಕನಸು ಜಗತ್ತಿನ ಮೂಲೆ ಮೂಲೆಗಳಲ್ಲಿಯೂ ಸದೃಢವಾಗಿ ಸಾಕಾರಗೊಳ್ಳುತ್ತವೆ ಎಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಕಾಸರಗೋಡು ಜಿಲ್ಲಾಧ್ಯಕ್ಷ ಶಿವರಾಮ ಕಜೆ ಅವರು ಅಭಿಪ್ರಾಯಪಟ್ಟರು.
ಇತ್ತೀಚೆಗೆ ಶಿರಿಯ ಶ್ರೀ ಸತ್ಯಸಾಯಿ ಗ್ರಾಮ ಸೇವಾ ಕೇಂದ್ರದಲ್ಲಿ ನಡೆದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ತ್ರೈ ಮಾಸಿಕ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೇದಿಕೆಯಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ.ಸಿ, ಯುವ ಸಂಚಾಲಕ ಕೃಷ್ಣಪ್ರಸಾದ್ ಕಾಟುಕುಕ್ಕೆ, ಶಿರಿಯ ಸಾಯಿ ಸಮಿತಿಯ ಮಾಜಿ ಸಂಚಾಲಕ ಮಲಾರ್ ಜಯರಾಮ ರೈ, ಮಹಿಳಾ ಸಂಯೋಜಕಿ ಪ್ರೇಮಲತಾ, ಯುವ ಸಂಚಾಲಕಿ ಸಾಯಿಭದ್ರಾ ರೈ ಉಪಸ್ಥಿತರಿದ್ದರು.
ಈ ಸಂದರ್ಭ ಶ್ರೀ ಸತ್ಯಸಾಯಿ ಸೇವಾ ಸಮಿತಿ ಕಾಸರಗೋಡಿನ ಸಂಚಾಲಕ ಸುಂದರ ಶೆಟ್ಟಿ , ಮಧೂರು ಸೇವಾ ಸಮಿತಿ ಪದಾಧಿಕಾರಿ ಪ್ರೇಮಲತಾ, ಕಾಟುಕುಕ್ಕೆ ಸೇವಾ ಸಮಿತಿಯ ಕೃಷ್ಣಪ್ರಸಾದ್, ಉಪ್ಪಳ ಸೇವಾ ಸಮಿತಿಯ ಸಂಚಾಲಕ ಶಿವಾನಂದ ಐಲ, ಶಿರಿಯ ಸೇವಾ ಸಮಿತಿ ಸಂಚಾಲಕ ಲಲಿತ್‍ಕುಮಾರ್ ಶಿರಿಯ ಹಾಗೂ ಬಾಯಾರು ಸೇವಾ ಸಮಿತಿಯ ನಾರಾಯಣ ಭಟ್ ಮಾಣಿಪ್ಪಾಡಿ ಇವರು ಸಮಿತಿಗಳ ಕಾರ್ಯಚಟುವಟಿಕೆಗಳ ವರದಿಯನ್ನು ವಾಚಿಸಿದರು. ಇದೇ ವೇಳೆ ಅಗಲಿದ ಹಿರಿಯ ಸಾಯಿಭಕ್ತ ಕೃಷ್ಣ.ಎಂ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಬಳಿಕ ಭಜನೆ, ಪ್ರಸಾದ ವಿತರಣೆ ಹಾಗೂ ನಾರಾಯಣ ಸೇವೆ ನಡೆಯಿತು.ಶಿಬಿರದಲ್ಲಿ ಜಿಲ್ಲೆಯ ಸಾಯಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದರು.





